ದಿನ ಭವಿಷ್ಯ: 29 ಆಗಸ್ಟ್, 2020!!

0
536

Astrology in kannada | kannada news ದಿನ ಭವಿಷ್ಯ: 29 ಆಗಸ್ಟ್, 2020!!

ದಿನ ಭವಿಷ್ಯ: 29 ಆಗಸ್ಟ್, 2020!!

ಮೇಷ:

ದಿನ ಭವಿಷ್ಯ

ಮೇಷ:- ನಿಮ್ಮ ಗ್ರಹಗತಿಗಳ ಬಗ್ಗೆ ಯೋಚಿಸದೇ ನಿಮ್ಮ ಮನೆತನದ ವೃತ್ತಿಯನ್ನು ಮುಂದುವರೆಸಿಕೊಂಡು ಹೋಗಿರಿ. ಜೀವನಾಧಾರಕ್ಕೆ ತೊಂದರೆ ಇರುವುದಿಲ್ಲ. ಹಣಕಾಸಿನ ಪರಿಸ್ಥಿತಿ ಸ್ವಲ್ಪ ಉತ್ತಮವಾಗಿರುವುದಿಲ್ಲ.

ವೃಷಭ:

ದಿನ ಭವಿಷ್ಯ

ವೃಷಭ:- ಮಕ್ಕಳ ವಿಷಯದಲ್ಲಿ ದೊಡ್ಡವರ ಮಧ್ಯೆ ಜಗಳ ಮನಸ್ತಾಪಗಳು ಬರುವ ಸಾಧ್ಯತೆ ಇದೆ. ಮಧ್ಯವರ್ತಿಗಳ ಸಹಾಯದಿಂದ ಮನಸ್ತಾಪಗಳು ಶಮನಗೊಳ್ಳುವುದು. ಈ ಒಂದು ಸನ್ನಿವೇಶ ಉಭಯರಿಗೂ ಪಾಠ ಕಲಿಸುವುದು.

ಮಿಥುನ:

ದಿನ ಭವಿಷ್ಯ

ಮಿಥುನ:- ಪೂಜೆ ಪುನಸ್ಕಾರಗಳಿಂದ ಮನೆಯ ಹಿರಿಯರನ್ನು ಗೌರವಿಸುವುದನ್ನು ಕಲಿಯಿರಿ. ನಿಮ್ಮ ಬಹುತೇಕ ಸಮಸ್ಯೆಗಳು ಇದರಿಂದ ಪರಿಹಾರವಾಗುವುದು. ಮತ್ತು ಕೆಲಸ ಕಾರ್ಯಗಳಲ್ಲಿ ಹೊಸ ಹುಮ್ಮಸ್ಸು ಮೂಡುವುದು.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ:- ಗೃಹಿಣಿಯರಿಗೆ ತವರಿನಿಂದ ಬರುವ ಸುದ್ದಿಯು ಖುಷಿ ತರಲಿದೆ. ಕೆಲವರಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಚ್ಚಿನ ಭಾಗ ಬರುವ ಸಾಧ್ಯತೆ ಇರುವುದು. ಮನೆ ದೇವರನ್ನು ಮನಸಾ ಸ್ಮರಿಸಿರಿ. ಆತನ ಕರುಣೆ ನಿರಂತರವಾಗಿ ನಿಮ್ಮ ಮೇಲಿರುವುದು.

ಸಿಂಹ:

ದಿನ ಭವಿಷ್ಯ

ಸಿಂಹ:- ನಿಮ್ಮ ನೇರವಾದ ನುಡಿಗಳು ಪರರಿಗೆ ಹಿಂಸೆಯನ್ನು ಉಂಟು ಮಾಡುವುದು. ಮಾತು ಮನೆ ಕೆಡಿಸಿತು ತೂತು ಒಲೆ ಕೆಡಿಸಿತು ಎನ್ನುವಂತೆ ಮಾತಿನ ವರಸೆಯಲ್ಲಿ ಬದಲಾವಣೆ ಮಾಡಿಕೊಳ್ಳಿರಿ. ಇದರಿಂದ ಸಮಾಜದಲ್ಲಿ ಗೌರವ ಮೂಡುವುದು.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ನಿಮ್ಮ ಊರಿನ ವಿಶ್ವಾಸಿಗಳು ನಿಮ್ಮನ್ನು ಕಾಣುವ ಆತುರ ತೋರುವರು. ಅದಕ್ಕೆ ಕಾರಣ ನಿಮಗೆ ಇತ್ತೀಚೆಗೆ ಲಭಿಸಿದ ಪ್ರಶಸ್ತಿಯು ಕಾರಣವಾಗಿರುವುದು. ಬಂದವರೊಂದಿಗೆ ಕೆಲಕಾಲ ಉಭಯ ಕುಶಲೋಪರಿ ಮಾತುಕತೆ ನಡೆಸಿರಿ.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ:- ನಿಮ್ಮ ಸುಖವಾದ ನಿದ್ದೆಗೆ ಸಂಚಕಾರ ಬರಲಿದೆ. ಆರ್ಥಿಕ ಮುಗ್ಗಟ್ಟು ನಿಮ್ಮನ್ನು ಚಿಂತಾಕ್ರಾಂತರನ್ನಾಗಿ ಮಾಡುವದು ಮೇಲಾಗಿ ಹಣದ ಮುಗ್ಗಟ್ಟು ನಿಮ್ಮನ್ನು ಹೈರಾಣ ಮಾಡುವುದು. ಆರೋಗ್ಯದ ಕಡೆ ಗಮನ ಕೊಡಿ.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ಇಂದಿನ ನಿಮ್ಮ ಪ್ರಯಾಣ ಸುಖಕರವಾಗಲಿದೆ. ಮಹತ್ತರ ತೀರ್ಮಾನವೊಂದು ಈ ದಿನ ಆಗುವುದರಿಂದ ನಿಮ್ಮ ವ್ಯಾಪಾರ-ವ್ಯವಹಾರಕ್ಕೆ ಪೂರಕವಾಗುವುದು. ಸ್ನೇಹಿತರು ಬಂಧುಗಳು ಹಣಕಾಸಿನ ನೆರವು ನೀಡುವರು.

ಧನಸ್ಸು:

ದಿನ ಭವಿಷ್ಯ

ಧನಸ್ಸು:- ವ್ಯಾಪಾರಿಗಳು ತಮ್ಮ ವ್ಯವಹಾರದಲ್ಲಿ ಎಂದಿಗಿಂತ ತುಸು ಮುತುವರ್ಜಿ ವಹಿಸಿದಲ್ಲಿ ಹೇರಳ ಧನ ಸಂಪಾದನೆ ಮಾಡುವಿರಿ. ಸರ್ಕಾರಕ್ಕೆ ಕಟ್ಟಬೇಕಾದ ತೆರಿಗೆಗಳು ಸಕಾಲದಲ್ಲಿ ಪಾವತಿಸಿ ದಂಡ ಹಾಕುವುದರಿಂದ ತಪ್ಪಿಸಿಕೊಳ್ಳುವಿರಿ.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಮಕರ:- ನಾಡು-ನುಡಿಗಾಗಿ ಹೋರಾಟ ಮಾಡುವ ಮನೋಭೂಮಿಕೆಯಲ್ಲಿರುವ ನಿಮಗೆ ಗುರುಗ್ರಹವು ಬೆಂಗಾವಲಿಗೆ ನಿಲ್ಲುವುದು. ಇದರಿಂದ ಸಾಮಾಜಿಕ ಮತ್ತು ರಾಜಕೀಯವಾಗಿ ಗುರುತಿಸಿಕೊಳ್ಳುವಿರಿ.

ಕುಂಭ:

ದಿನ ಭವಿಷ್ಯ

ಕುಂಭ:- ಮನೆಯಲ್ಲಿನ ಹಿರಿಯರು ಮಕ್ಕಳ ವಿಷಯದಲ್ಲಿ ಸ್ವಲ್ಪ ಗೊಂದಲದಲ್ಲಿ ಬೀಳುವರು. ಮಕ್ಕಳನ್ನು ದಂಡಿಸುವಂತಿಲ್ಲ. ದಂಡಿಸದೆ ಅವರು ಸರಿದಾರಿಗೆ ಬರುವುದಿಲ್ಲ. ಇಂತಹ ಸೂಕ್ಷ್ಮ ವಿಷಯಗಳನ್ನು ಬಗೆಹರಿಸುವಲ್ಲಿ ಬಹಳ ತಾಳ್ಮೆ ಬೇಕಾಗುವುದು.

ಮೀನ:

ದಿನ ಭವಿಷ್ಯ

ಮೀನ:- ಗುರುವಿನ ಬಲವಿದೆ. ಆದರೆ ಮನೆಯ ಹಿರಿಯರ ಆರೈಕೆಯಲ್ಲಿಯೇ ಸಮಯ ಹೋಗುವುದರಿಂದ ಈ ದಿನ ನಿಮ್ಮ ಬಗ್ಗೆ ಗಮನಹರಿಸಲು ಆಗುತ್ತಿಲ್ಲ ಎಂಬ ಕೊರಗು ನಿಮ್ಮನ್ನು ಕಾಡುವುದು. ಹಿರಿಯರ ಸೇವೆಯಿಂದ ಲಾಭವಾಗುವುದು.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ ಭವಿಷ್ಯ: 29 ಆಗಸ್ಟ್, 2020!!