ದಿನ ಭವಿಷ್ಯ: 29 ಜುಲೈ, 2018!!

0
414

Astrology in kannada | kannada news

ದಿನ ಭವಿಷ್ಯ: 29 ಜುಲೈ, 2018!!

ಮೇಷ:

ದಿನ ಭವಿಷ್ಯ

ದೂರದ ಬಂಧುಗಳ ಆಗಮನವು ಸದ್ಯಕ್ಕೆ ಈದಿನ ನಿಮಗೆ ಮುಜುಗರ ಉಂಟು ಮಾಡಿದರೂ ನಂತರ ದಿನಗಳಲ್ಲಿ ಅವರಿಂದ ಅನುಕೂಲತೆಗಳು ಬಹಳವಾಗುವುದು. ಹಾಗಾಗಿ ಈದಿನ ಬಂದ ಅತಿಥಿಗಳನ್ನು ಆದರಿಸಿರಿ. ಹಣದ ಖರ್ಚು ವೆಚ್ಚದ ಕಡೆ ಗಮನವಿರಲಿ.

ವೃಷಭ:

ದಿನ ಭವಿಷ್ಯ

ಸಕಾರಾತ್ಮಕ ಚಿಂತನೆಗೆ ಗೋಚಾರದ ಗುರುವು ಕೂಡ ಶಕ್ತಿ ನೀಡುವುದರಿಂದ ಈದಿನ ನಿಮ್ಮ ಎಲ್ಲ ಕೆಲಸ ಕಾರ್ಯಗಳು ಸುಗಮವಾಗಿ ಆಗುವುದು. ಮಕ್ಕಳ ವಿದ್ಯಾಭ್ಯಾಸದ ಪ್ರಗತಿಯು ಮನಸ್ಸಿಗೆ ಮುದ ನೀಡುವುದು.

ಮಿಥುನ:

ದಿನ ಭವಿಷ್ಯ

ಎಲ್ಲವನ್ನೂ ತಿಳಿದಿರುವೆ ಮತ್ತು ಎಲ್ಲರನ್ನೂ ನಿಯಂತ್ರಿಸಬಲ್ಲೆ ಎಂಬ ಅಹಂಮಿಕೆಯಿಂದ ಹೊರಬಂದಲ್ಲಿ ಈದಿನ ನೀವು ಮಧುರ ಕ್ಷ ಣಗಳನ್ನು ಆಸ್ವಾದಿಸಲು ಸಾಧ್ಯವಾಗಬಹುದು. ಇಲ್ಲದೇ ಇದ್ದಲ್ಲಿ ಮಹತ್ತರ ಲಾಭವಾಗುವ ಪರಿಸ್ಥಿತಿ ಹಾಳು ಮಾಡಿಕೊಳ್ಳುವಿರಿ.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಪಂಚಮ ಶನಿಯು ಅಲ್ಪ ಉದಾಸೀನತೆಯನ್ನು ಕೊಡುವುದರಿಂದ ಮನೆಯಿಂದ ಹೊರಡುವಾಗ ಕಚೇರಿಗೆ ಸಂಬಂಧಪಟ್ಟ ದಾಖಲೆ ಪತ್ರಗಳನ್ನು ಜೋಡಿಸಿಕೊಂಡು ಹೊರಡುವುದು ಸೂಕ್ತ. ಇಲ್ಲವೇ ಮೇಲಧಿಕಾರಿಗಳ ಕೋಪಕ್ಕೆ ಗುರಿ ಆಗುವಿರಿ.

ಸಿಂಹ:

ದಿನ ಭವಿಷ್ಯ

ಮನೆಗೆದ್ದು ಮಾರುಗೆಲ್ಲು ಎಂದರು ಅನುಭಾವಿಗಳು. ಹಾಗಾಗಿ ಮನೆಯಲ್ಲಿ ನಿಮ್ಮ ಮೇಲೆ ಏಳುತ್ತಿರುವ ಅಸಮಾಧಾನವನ್ನು ಬಗೆಹರಿಸಲು ಪ್ರಯತ್ನಿಸಿರಿ. ಕಾರ್ಯ ಸುಲಲಿತವಾಗಲು ಶಿವನಾಮ ಸ್ಮರಣೆ ಮಾಡಿರಿ.

ಕನ್ಯಾ:

ದಿನ ಭವಿಷ್ಯ

ಈದಿನ ಪ್ರಸನ್ನತೆಯಿಂದ ಕೆಲಸವನ್ನು ಆರಂಭಿಸುವಿರಿ. ನಿಮ್ಮ ಕೆಲಸ ಕಾರ್ಯಗಳಿಗೆ ಸ್ನೇಹಿತರು ಒತ್ತಾಸೆಯಾಗಿ ನಿಲ್ಲುವರು. ಹಣಕಾಸಿನ ಪರಿಸ್ಥಿತಿಯು ಉತ್ತಮವಾಗಿರುತ್ತದೆ. ಬೇಡದ ವ್ಯಕ್ತಿಗಳು ಮಾಡುವ ಆರೋಪಕ್ಕೆ ಉತ್ತರಿಸದಿರಿ.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ಪದೇ ಪದೆ ಸಂಗಾತಿ ಅಥವಾ ಬಂಧುಗಳು ನಿಮ್ಮ ವಿರುದ್ಧ ಮಾಡುವ ಟೀಕೆಗಳಿಗೆ ಸರಿಯಾದ ಉತ್ತರ ಕೊಡುವ ಶುಭ ದಿನವಾಗಿದೆ. ನಿಮ್ಮ ಕಾರ್ಯಗಳು ಏಕೆ ಸೋಲುತ್ತಿವೆ ಎಂದು ಸಕಾರಣವಾಗಿ ಅವರಿಗೆ ಮನವರಿಕೆ ಮಾಡಿಕೊಡುವಿರಿ.

ವೃಶ್ಚಿಕ:

ದಿನ ಭವಿಷ್ಯ

ಶನಿಯು ಕೆಲಸ ಕಾರ್ಯಗಳಲ್ಲಿ ವಿಳಂಬತೆಯನ್ನು ತೋರಿದರೂ ನಿಮ್ಮ ಆತ್ಮೀಯರೊಬ್ಬರು ನಿಮಗೆ ಸೂಕ್ತ ಸಲಹೆ ನೀಡುವರು. ಇದರಿಂದ ಇಂದು ನಿಮ್ಮ ಕೆಲಸಗಳು ಸುಗಮವಾಗಿ ಆಗುವುದು.

ಧನಸ್ಸು:

ದಿನ ಭವಿಷ್ಯ

ಹಣಕಾಸಿನ ವಿಚಾರದಲ್ಲಿ ಈದಿನ ಅಲ್ಪ ಹಿನ್ನಡೆಯನ್ನು ಅನುಭವಿಸಬೇಕಾಗುವುದು. ಆದಾಗ್ಯೂ ಕುಲದೇವರ ಆಶೀರ್ವಾದ ಪಡೆಯಿರಿ. ವೃತ್ತಿಯಲ್ಲಿ ಬದಲಾವಣೆ ಆಗುವ ಸಾಧ್ಯತೆ ಇರುತ್ತದೆ. ಗುರುಸ್ತೋತ್ರ ಪಠಿಸಿರಿ.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಬಹುಮುಖ್ಯವಾದ ದೈವ ಕೃಪೆಯು ನಿಮ್ಮ ಇಂದಿನ ಎಲ್ಲ ಕೆಲಸಗಳಿಗೆ ಬೆಂಗಾವಲಾಗಿ ನಿಲ್ಲುವುದು. ನಿಮಗೆ ಆಶ್ಚರ್ಯವಾಗುವಷ್ಟರ ಮಟ್ಟಿಗೆ ನಿಮ್ಮ ಕೆಲಸ ಕಾರ್ಯಗಳು ಸುಗಮವಾಗಿ ಆಗುವುದು.

ಕುಂಭ:

ದಿನ ಭವಿಷ್ಯ

ಸಣ್ಣ ಪುಟ್ಟ ವಸ್ತುಗಳು ನಿಮ್ಮ ಮರೆಗುಳಿತನದಿಂದ ಕಣ್ಮರೆಯಾಗುವ ಸಾಧ್ಯತೆ ಇದೆ. ಈದಿನ ಮಾಡಬೇಕಾಗಿರುವ ಪ್ರಮುಖ ಕೆಲಸಗಳ ಪಟ್ಟಿಯನ್ನು ತಯಾರಿಸಿ ಅದರಂತೆ ಕಾರ್ಯವನ್ನು ಮಾಡಿ ಮುಗಿಸಿರಿ.

ಮೀನ:

ದಿನ ಭವಿಷ್ಯ

ನಿಯಂತ್ರಿಸಬಲ್ಲೆ ಎಂದು ತಿಳಿದುಕೊಂಡಂತಹ ಕೆಲಸವು ಜಟಿಲವಾಗಿ ತಲೆ ತಿನ್ನುವ ಸಾಧ್ಯತೆ ಇದೆ. ಗುರುವಿನ ಅನುಗ್ರಹ ಪಡೆದಲ್ಲಿ ಜಟಿಲವಾದ ಸಮಸ್ಯೆ ನಿವಾರಣೆಗೆ ಸೂಕ್ತ ಸುಳಿವು ದೊರೆಯುವುದು.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ ಭವಿಷ್ಯ: 29 ಜುಲೈ, 2018!!