ದಿನ ಭವಿಷ್ಯ: 29 ನವೆಂಬರ್, 2018!!

0
298
ದಿನ ಭವಿಷ್ಯ

ದಿನ ಭವಿಷ್ಯ: 29 ನವೆಂಬರ್, 2018!!

Astrology in kannada | kannada news

ಮೇಷ:

ದಿನ ಭವಿಷ್ಯ

ಮೇಷ:- ಅತ್ಯಂತ ನಂಬಿಕಸ್ಥ ಸ್ನೇಹಿತರಿಂದ ಇಲ್ಲವೆ ಬಂಧುಗಳಿಂದ ಸಹಕಾರ ಸಿಗದೆ ಹೋಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಬಂಧು ಬಳಗದವರ ಎದುರು ನಿಮ್ಮ ಸುಖದುಃಖಗಳನ್ನು ಹಂಚಿಕೊಳ್ಳದಿರಿ. ಭಗವಂತನನ್ನು ಮನಸಾ ಸ್ಮರಿಸಿ.

ವೃಷಭ:

ದಿನ ಭವಿಷ್ಯ

ವೃಷಭ:- ಕೇವಲ ಕೆಲವೇ ಕೆಲವು ಮಂದಿ ಪ್ರತಿಭಾನ್ವಿತರಲ್ಲಿ ಒಬ್ಬರಾದ ನಿಮಗೆ ಕೆಲಸದ ಸ್ಥಳದಲ್ಲಿ ಭಡ್ತಿ ದೊರೆಯುವ ಸಾಧ್ಯತೆ ಇರುತ್ತದೆ. ಇದರಿಂದ ಮನಸ್ಸು ಪ್ರಫುಲ್ಲವಾಗುವುದು. ಹಣಕಾಸಿನ ತೊಂದರೆ ನಿವಾರಣೆ ಆಗುವುದು.

ಮಿಥುನ:

ದಿನ ಭವಿಷ್ಯ

ಮಿಥುನ:- ಕೋರ್ಟು ಕಚೇರಿಯ ಕೆಲಸದಲ್ಲಿ ನಿಮ್ಮ ವಿರುದ್ಧವಾದ ತೀರ್ಪು ಬರುವ ಸಾಧ್ಯತೆ ಇರುವುದು. ಆದರೆ ಇದಕ್ಕೆ ನಿರಾಶರಾಗುವ ಅವಶ್ಯಕತೆ ಇಲ್ಲ. ಭಗವಂತ ಇದಕ್ಕೊಂದು ಸರಳವಾದ ಪರಿಹಾರವನ್ನು ನಿಮಗೆ ಒದಗಿಸಿ ಕೊಡುವನು.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ:- ಸರ್ಕಾರಿ ವಲಯದಲ್ಲಿ ನೆನೆಗುದಿಗೆ ಬಿದ್ದಿದ್ದ ಕೆಲಸ ಕಾರ್ಯಗಳು ನೆರವೇರುವ ಲಕ್ಷ ಣಗಳು ಇಂದು ನಿಮಗೆ ಗೋಚರಿಸುವುದು. ಇದರಿಂದ ನಿಮ್ಮ ಮುಂದಿನ ಕಾರ್ಯಗಳಿಗೆ ಬೆಂಬಲ ದೊರೆಯುವವು.

ಸಿಂಹ:

ದಿನ ಭವಿಷ್ಯ

ಸಿಂಹ:- ಹೊಸದಾದ ವಿಶಿಷ್ಟ ಯೋಜನೆಯೊಂದಕ್ಕೆ ಚಾಲನೆ ನೀಡುವಿರಿ. ಇದರಿಂದ ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಗೆಲ್ಲುವ ಹಂತ ತಲುಪುವಿರಿ. ನಿಮ್ಮ ಸಹೋದ್ಯೋಗಿಗಳಿಂದ ಪ್ರಶಂಸೆ ದೊರೆಯುವುದು.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ನೀವು ಅತ್ಯಂತ ಪಾರದರ್ಶಕ ವ್ಯವಹಾರವನ್ನು ನಡೆನುಡಿಯಲ್ಲಿ ತೋರುವುದರಿಂದ ನೀವೊಬ್ಬ ಅತ್ಯಂತ ನಂಬಲರ್ಹವಾದ ವ್ಯಕ್ತಿಯೆಂದು ಸಮಾಜದಲ್ಲಿ ಗುರುತಿಸಿಕೊಳ್ಳುವಿರಿ. ಹಲವು ಮೂಲಗಳಿಂದ ಹಣಕಾಸು ಬರುವುದು.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ:- ಹಣಕಾಸಿನ ತೊಂದರೆ ಇದೆ ಎಂದು ಹೇಳಿಕೊಳ್ಳುವಷ್ಟು ವಿಶ್ವಾಸವನ್ನು ನೀವು ಉಳಿಸಿಕೊಂಡಿಲ್ಲ. ಹಾಗಾಗಿ ಇತರೆಯವರು ನಿಮ್ಮನ್ನು ಸಂಶಯ ದೃಷ್ಟಿಯಿಂದಲೇ ನೋಡುವರು. ಹಿಂದೆ ಆಗಿರುವ ತಪ್ಪನ್ನು ತಿದ್ದಿಕೊಂಡು ಮುನ್ನಡೆಯಿರಿ. ಒಳಿತಾಗುವುದು.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ಎಲ್ಲವೂ ಸರಿಯಾಗಿ ಆಗುತ್ತಿದೆ ಎನ್ನುವ ಹಂತದಲ್ಲಿರುವಾಗಲೇ ಕಿರಿಕಿರಿ ಮಾಡುವ ಹಿರಿಯರೊಬ್ಬರ ಸಹವಾಸ ನಿಮ್ಮ ತಾಳ್ಮೆಯನ್ನು ಕೆಡಿಸುತ್ತದೆ. ಆದರೆ ಅವರು ಹೇಳುವ ವಿಚಾರಗಳಲ್ಲಿ ಅಲ್ಪಪ್ರಮಾಣದ ಸತ್ಯಾಂಶವೂ ಇರುತ್ತದೆ ಎಂಬುದನ್ನು ತಿಳಿಯಿರಿ.

ಧನಸ್ಸು:

ದಿನ ಭವಿಷ್ಯ

ಧನಸ್ಸು:- ವಿದೇಶದಲ್ಲಿ ಕೆಲಸ ದೊರಕಿಸಿಕೊಳ್ಳುವ ಆಸೆ ಹೊಂದಿದ್ದವರಿಗೆ ಸಿಹಿ ಸುದ್ದಿಯೊಂದು ತಲುಪಲಿದೆ. ಇದರಿಂದ ಜಡವಾಗಿದ್ದ ನಿಮ್ಮ ಚೇತನ ಚುರುಕುಗೊಳ್ಳುವುದು. ಮುಖದಲ್ಲಿ ಮಂದಹಾಸ ಮೂಡುವುದು.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಮಕರ:- ದೈವಾನುಗ್ರಹಕ್ಕಾಗಿ ದೂರ ಪ್ರಯಾಣ ಮಾಡುವ ಸಾಧ್ಯತೆ ಇದ್ದು, ಇದರಿಂದ ನಿಮ್ಮ ಸಾಕಷ್ಟು ಸಮಸ್ಯೆಗಳು ಬಗೆಹರಿಯುವವು. ಕೌಟುಂಬಿಕವಾಗಿ ನೆಮ್ಮದಿಯ ದಿನ. ಸ್ನೇಹಿತರು ನಿಮಗೆ ಸಹಕಾರ ನೀಡುವರು.


ಕುಂಭ:

ದಿನ ಭವಿಷ್ಯ

ಕುಂಭ:- ನೀವು ಕೆಲಸ ಮಾಡುವ ಸ್ಥಳದಲ್ಲಿ ಹಿರಿಯ ಅಧಿಕಾರಿಯೊಬ್ಬರ ಸಕಾಲಿಕ ಮಾರ್ಗದರ್ಶನದಿಂದ ನಿಮ್ಮ ಕೆಲಸಗಳು ಸುಗಮವಾಗಿ ಆಗುವುದು. ಅವರ ಮಾರ್ಗದರ್ಶನದಂತೆ ನಡೆದಲ್ಲಿ ನಿಮಗೆ ಒಳಿತಾಗುವುದು.

ಮೀನ:

ದಿನ ಭವಿಷ್ಯ

ಮೀನ:- ಸಂಗೀತ, ಚಿತ್ರಕಲೆಯನ್ನು ಉಳಿಸಿ ಬೆಳೆಸಬೇಕೆಂಬ ನಿಮ್ಮ ಮನೋಬಯಕೆ ಈಡೇರುವಂತಹ ಸುಸಂದರ್ಭವು ದೊರೆಯುವುದು. ಅದಕ್ಕಾಗಿ ಉತ್ತಮ ಗುರುಗಳ ಭೇಟಿ ಮತ್ತು ಅವರ ಮಾರ್ಗದರ್ಶನ ನಿಮಗೆ ಲಭಿಸಲಿದೆ.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ ಭವಿಷ್ಯ: 29 ನವೆಂಬರ್, 2018!!