ದಿನ ಭವಿಷ್ಯ: 29 ಸೆಪ್ಟೆಂಬರ್, 2018!!

0
394
ದಿನ ಭವಿಷ್ಯ

Astrology in kannada | kannada news | ದಿನ ಭವಿಷ್ಯ

ದಿನ ಭವಿಷ್ಯ: 29 ಸೆಪ್ಟೆಂಬರ್, 2018!!

ಮೇಷ:

ದಿನ ಭವಿಷ್ಯ

ಮೇಷ ರಾಶಿ:- ಕೋರ್ಟು ಕಚೇರಿಯ ಕೆಲಸಗಳಲ್ಲಿ ಯಶಸ್ಸು ದೊರೆಯುವುದು. ಜಮೀನು, ನಿವೇಶನ ಖರೀದಿಗೆ ಮನಸ್ಸು ಮಾಡುವಿರಿ. ಸಾಂಸಾರಿಕ ಸಮಸ್ಯೆಗಳು ಬಗೆಹರಿದು ಕೌಟುಂಬಿಕ ಸುಖ ದೊರೆಯುವುದು. ಮನಸ್ಸು ಪ್ರಫುಲ್ಲಿತವಾಗುವುದು. ವ್ಯವಹಾರದಲ್ಲಿ ಉತ್ತಮ ಆದಾಯವಿದ್ದು ಸಂತಸದ ಸಮಯವನ್ನು ಕಳೆಯುವಿರಿ.

ವೃಷಭ:

ದಿನ ಭವಿಷ್ಯ

ವೃಷಭ:- ಗೃಹಿಣಿ ಗೃಹ ಮುಚ್ಚತೇ ಎಂಬಂತೆ ಮನೆಯ ಸಮಸ್ಯೆಗಳನ್ನು ಬಹಿರಂಗಗೊಳಿಸುವುದು ಉತ್ತಮ ಗೃಹಿಣಿ ಲಕ್ಷ ಣವಲ್ಲ. ಅಂತೆಯೇ ಮನೆಯಲ್ಲಿನ ಮಡದಿಯನ್ನು ತಾತ್ಸಾರ ಮಾಡುವುದು ಪುರುಷರಿಗೆ ಹೇಳಿ ಮಾಡಿಸಿದ್ದಲ್ಲ. ಪರಸ್ಪರರು ಅರಿತು ಬಾಳಿದರೆ ಸ್ವರ್ಗ ಸಿಗುವುದು. ಹಣಕಾಸಿನ ಸ್ಥಿತಿ ಉತ್ತಮ.

ಮಿಥುನ:

ದಿನ ಭವಿಷ್ಯ

ಮಿಥುನ:- ಉದ್ಯೋಗದಲ್ಲಿ ಉನ್ನತ ಪದವಿ ದೊರೆಯುವುದು. ವಾದ ಸ್ಪರ್ಧೆಯಲ್ಲಿ ಜಯ. ಮಾನ-ಸನ್ಮಾನ, ಗುರು-ಹಿರಿಯರ ಮಿತ್ರರ ಲಾಭ, ವಿಪರೀತವಿದ್ದ ಸಾಲ ಹಂತ ಹಂತವಾಗಿ ತೀರಲಿದೆ. ಉದ್ಯೋಗದ ಸಹೋದ್ಯೋಗಿಗಳು ನಿಮಗೆ ಸಹಕಾರ ನೀಡುವರು. ಹಣಕಾಸು ಸಂಸ್ಥೆಗಳಿಂದ ಆರ್ಥಿಕ ಸಹಾಯ ದೊರೆಯುವುದು.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ:- ಪರಾವಲಂಬಿಗಳಾಗದೆ ಸ್ವಾವಲಂಬಿಗಳಾಗಿ ದುಡಿಯುವುದು ಕ್ಷೇಮಕರ. ಮತ್ತಾರದೋ ಒತ್ತಡಕ್ಕೆ ಮಣಿದು ಒಲ್ಲದ ಕೆಲಸ ಮಾಡುವುದು ನಿಮಗೆ ಬೇಸರ ತರಿಸುವುದು. ವ್ಯಾಪಾರ ವ್ಯವಹಾರದಲ್ಲಿ ನಿರೀಕ್ಷಿತ ಆದಾಯ ದೊರೆಯುವುದು. ಕುಲದೇವತಾ ಪ್ರಾರ್ಥನಾ ಮಾಡಿರಿ.

ಸಿಂಹ:

ದಿನ ಭವಿಷ್ಯ

ಸಿಂಹ:- ಎಲ್ಲ ಕೆಲಸಗಳನ್ನು ನೀವೊಬ್ಬರೇ ಮಾಡುತ್ತೇನೆ ಎಂದರೆ ಆಗದು. ಕೆಲಸಗಾರರ ವಿಶ್ವಾಸ ಗಳಿಸಿ ಅವರಿಂದ ಕಾರ್ಯ ಮಾಡಿಸುವುದು ಉತ್ತಮ. ನಾಯಕನ ಗುಣವಿರುತ್ತದೆ. ದೈಹಿಕ ಕಾಯಿಲೆಯ ಬಗ್ಗೆ ಚಿಂತೆ ಅನಗತ್ಯ. ಸೂಕ್ತ ವೈದ್ಯಕೀಯ ಉಪಚಾರದಿಂದ ಗುಣಮುಖರಾಗುವಿರಿ.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ಆರೋಗ್ಯದ ಕಡೆ ಯಾವುದೇ ಕಾರಣಕ್ಕೂ ಅಲಕ್ಷ ್ಯ ಬೇಡ. ಒತ್ತಡದ ಸನ್ನಿವೇಶಗಳನ್ನು ನಿಭಾಯಿಸುವುದನ್ನು ಕಲಿಯಿರಿ. ಅಧ್ಯಯನದಲ್ಲಿ ಹಿನ್ನಡೆ ಆಗದಂತೆ ನೋಡಿಕೊಳ್ಳಿ. ಬಿಡುವಿಲ್ಲದ ಕೆಲಸ ನಿಮ್ಮನ್ನು ಗೊಂದಲಕ್ಕೆ ತಳ್ಳಬಹುದು. ಯೋಚಿಸಿ ಮಾತನಾಡಿ. ಹಣಕಾಸಿನ ಪರಿಸ್ಥಿತಿ ಉತ್ತಮ.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ:- ವೈಯಕ್ತಿಕ ಕೆಲಸಗಳಿಗೆ ಹಿನ್ನಡೆಯುಂಟಾಗುವುದು. ವಾತ ಸಂಬಂಧಿ ಬಾಧೆಗಳು ನಿಮ್ಮನ್ನು ಹೈರಾಣಾಗಿಸುವುದು. ವಾಹನಗಳನ್ನು ಚಲಾಯಿಸುವಾಗ ಎಚ್ಚರಿಕೆ ಇರಲಿ. ಮದುವೆ ಮಾತುಕತೆಗಳು ಸ್ವಲ್ಪದರಲ್ಲೇ ವ್ಯತ್ಯಾಸವಾಗುವುದು. ಅನುಭವಿಗಳು ಹೇಳುವ ಕಿವಿಮಾತಿಗೆ ಮನ್ನಣೆ ನೀಡಿ.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ವಿವಾಹಾದಿ ಮಂಗಳ ಕಾರ್ಯಗಳಲ್ಲಿ ಅಡೆತಡೆ ಉಂಟಾಗುವುದರಿಂದ ಸಂಬಂಧದಲ್ಲಿ ಸಾಮರಸ್ಯ ಕೆಡುವ ಸಂದರ್ಭವಿರುತ್ತದೆ. ವಿಶೇಷ ಖರ್ಚುವೆಚ್ಚಗಳು ಉಂಟಾಗುವುದು. ವಿದ್ಯಾರ್ಥಿಗಳು ಒತ್ತಡದ ಸನ್ನಿವೇಶ ಎದುರಿಸಬೇಕಾಗುವುದು. ಮನೋ ನಿಯಾಮಕ ರುದ್ರದೇವರನ್ನು ಭಜಿಸಿರಿ.

ಧನಸ್ಸು:

ದಿನ ಭವಿಷ್ಯ

ಧನಸ್ಸು:- ಮಾತೇ ಮುತ್ತು ಮಾತೇ ಶತ್ರು ಎನ್ನುವಂತೆ ಈ ದಿನ ನೀವಾಡುವ ಮಾತುಗಳಿಂದ ಉತ್ತಮ ಬಾಂಧವ್ಯವನ್ನು ಹಾಳುಮಾಡಿಕೊಳ್ಳುವಿರಿ. ಅನಗತ್ಯವಾಗಿ ದುಡುಕಿ ಮಾತನಾಡಿ ಪಶ್ಚಾತ್ತಾಪ ಪಡುವಿರಿ. ನವಗ್ರಹ ಪೂಜೆ ಮಾಡುವುದರಿಂದ ಉತ್ತಮ ಫಲಿತಾಂಶ ಕಾಣುವಿರಿ. ಮತ್ತು ಗುರುಸ್ತೋತ್ರ ಪಠಿಸಿ.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಮಕರ:- ನಿಮ್ಮ ಹಿರಿಯರ ಒಪ್ಪಿಗೆ ಪಡೆದು ನೂತನ ವಾಹನ ಖರೀದಿ ಮಾಡುವಿರಿ. ಮನೆಯ ಹೆಣ್ಣುಮಕ್ಕಳು ಬೆಲೆ ಬಾಳುವ ಬಂಗಾರದ ಒಡವೆಗಳನ್ನು ಖರೀದಿ ಮಾಡುವರು. ವ್ಯಾಪಾರ-ವ್ಯವಹಾರದಲ್ಲಿ ಸಾಕಷ್ಟು ಪ್ರಗತಿಯಿದ್ದು ಹಣಕಾಸಿನ ಸ್ಥಿತಿ ಉತ್ತಮಗೊಳ್ಳುವುದು.

ಕುಂಭ:

ದಿನ ಭವಿಷ್ಯ

ಕುಂಭ:- ಕೆಲವು ಮಹತ್ತರ ನಿರ್ಧಾರಗಳನ್ನು ಈ ದಿನ ತೆಗೆದುಕೊಳ್ಳುವಿರಿ. ದೂರದ ಪ್ರವಾಸ ಮಾಡಬೇಕಾಗುವುದು. ಉದ್ಯೋಗದಲ್ಲಿ ಯಶಸ್ಸು. ಮಕ್ಕಳು ಪರೀಕ್ಷೆಯಲ್ಲಿ ತೇರ್ಗಡೆ ಆಗುವರು. ಧಾರ್ಮಿಕ ಗುರುಗಳ ಭೇಟಿ ಮಾಡಿ ಆಶೀರ್ವಾದ ಪಡೆಯುವಿರಿ. ಆರ್ಥಿಕ ಸ್ಥಿತಿ ಉತ್ತಮ.

ಮೀನ:

ದಿನ ಭವಿಷ್ಯ

ಮೀನ:- ಈ ದಿನ ಗ್ರಹಗತಿಗಳು ನಿಮ್ಮ ವಿರುದ್ಧ ತಿರುಗಿ ನಿಲ್ಲುವವು. ದಿಢೀರನೇ ಅನಾರೋಗ್ಯ ಕಾಡುವುದು. ಆಸ್ಪತ್ರೆ ಖರ್ಚು, ಶತ್ರುಗಳು ಹೆಚ್ಚಾಗುವರು. ಕುಲದೇವತಾ ಪ್ರಾರ್ಥನೆ ಮಾಡಿರಿ. ಕೌಟುಂಬಿಕವಾಗಿ ನೆಮ್ಮದಿಯ ದಿನ.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ ಭವಿಷ್ಯ: 29 ಸೆಪ್ಟೆಂಬರ್, 2018!!