ದಿನ ಭವಿಷ್ಯ: 30 ಜುಲೈ, 2018!!

0
461
ದಿನ ಭವಿಷ್ಯ

Astrology in kannada | kannada news

ದಿನ ಭವಿಷ್ಯ: 30 ಜುಲೈ, 2018!!

ಮೇಷ:

ದಿನ ಭವಿಷ್ಯ

ಭೂಮಿಗೆ ಸಂಬಂಧಿಸಿದ ಮಾತುಕತೆಯಲ್ಲಿ ಹಿನ್ನಡೆ ಉಂಟಾಗುವುದು. ಸದ್ಯಕ್ಕೆ ಸ್ಥಿರಾಸ್ಥಿ ಖರೀದಿಯ ಬಗ್ಗೆ ಚಿಂತಿಸುವುದು ಸೂಕ್ತವಲ್ಲ. ಆರೋಗ್ಯದ ಕಡೆ ಗಮನವಿರಲಿ. ಹಾಗೂ ಆಹಾರ-ವಿಹಾರದಲ್ಲೂ ನಿಯಮತೆ ಇರಲಿ. ಆರ್ಥಿಕ ಸ್ಥಿತಿ ಸಾಧಾರಣವಾಗಿರುತ್ತದೆ.

ವೃಷಭ:

ದಿನ ಭವಿಷ್ಯ

ನಿಮ್ಮ ಒಳ್ಳೆಯತನವು ಈ ದಿನ ಮತ್ತೊಮ್ಮೆ ಸಾಬೀತಾಗುವುದು. ನೆರೆಹೊರೆಯವರಿಗೆ ಸ್ನೇಹದ ಹಸ್ತ ಚಾಚುವಿರಿ. ಮನೆಯಲ್ಲಿನ ಕೆಲಸ ಕಾರ್ಯಗಳು ತ್ವರಿತಗತಿಯಲ್ಲಿ ಸಾಗುವುದರಿಂದ ಮಧ್ಯಾಹ್ನ ವೇಳೆಗೆ ವಿಶ್ರಾಂತಿಗೆ ಸಾಕಷ್ಟು ಸಮಯ ದೊರೆಯುವುದು.

ಮಿಥುನ:

ದಿನ ಭವಿಷ್ಯ

ಉದ್ಯೋಗದಲ್ಲಿರುವ ಜನರು ತಮ್ಮ ಕಾರ್ಯಕ್ಷೇತ್ರದಲ್ಲಿ ಎಚ್ಚರಿಕೆಯಿಂದಿರಬೇಕು. ಆಲಸ್ಯತನದಲ್ಲಿ ವೃತ್ತಿಯಲ್ಲಿ ತಪ್ಪುಗಳು ನುಸುಳುವ ಸಾಧ್ಯತೆ ಇದೆ. ಮನಸ್ಸಿನ ಏಕಾಗ್ರತೆಗಾಗಿ ಆಂಜನೇಯ ಸ್ವಾಮಿಯನ್ನು ಪ್ರಾರ್ಥಿಸಿರಿ.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಉದರ ಶೂಲೆಗೆ ಸಂಬಂಧಪಟ್ಟಂತೆ ಸ್ವಲ್ಪ ಕಿರಿಕಿರಿಯನ್ನು ಅನುಭವಿಸುವಿರಿ. ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಿರಿ. ಮಧ್ಯಾಹ್ನದ ನಂತರ ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು. ಉದ್ಯೋಗದ ವಿಷಯದಲ್ಲಿ ತೊಂದರೆ ಇರುವುದಿಲ್ಲ.

ಸಿಂಹ:

ದಿನ ಭವಿಷ್ಯ

ಹೊಸ ತರಹದ ಆಲೋಚನೆಗಳು ನಿಮ್ಮನ್ನು ಹುರಿದುಂಬಿಸಲಿದೆ. ಮಾನಸಿಕ ನೆಮ್ಮದಿ ಹೊಂದಲು ಮತ್ತು ಮನಸ್ಸಿನಲ್ಲಿ ಮಾಡಿದ ಆಲೋಚನೆಗಳು ಸಾಕಾರಗೊಳ್ಳಲು ಮುಂಜಾನೆಯಲ್ಲಿ ಧ್ಯಾನ ಮಾಡಿರಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.

ಕನ್ಯಾ:

ದಿನ ಭವಿಷ್ಯ

ಶುಭಕಾರ್ಯಗಳಿಗೆ ಇಂದು ಸೂಕ್ತ ದಿನವಾಗಿದೆ. ಆಲಸ್ಯತನ ಮಾಡದೆ ಹಮ್ಮಿಕೊಂಡ ಕಾರ್ಯಗಳನ್ನು ಆರಂಭಿಸಿರಿ. ಹಿರಿಯರ ಮತ್ತು ಸಹೋದ್ಯೋಗಿಗಳ ಬೆಂಬಲ ದೊರೆಯುವುದು. ಹಣವನ್ನು ನೀರಿನಂತೆ ಖರ್ಚು ಮಾಡುವುದು ಉತ್ತಮವಲ್ಲ.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ಕೆಲವು ಸಂಬಂಧಗಳು ಯಾಕೆ ದೂರವಾಗುತ್ತವೆ ಎಂದು ತಿಳಿಯುವುದಿಲ್ಲ. ಈ ಬಗ್ಗೆ ನೀವೊಮ್ಮೆ ಆತ್ಮಾವಲೋಕನ ಮಾಡಿಕೊಳ್ಳುವುದು ಒಳ್ಳೆಯದು. ಕೆಲವು ಸಣ್ಣಪುಟ್ಟ ಬದಲಾವಣೆಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಜಯ ಸಿಗುತ್ತದೆ.

ವೃಶ್ಚಿಕ:

ದಿನ ಭವಿಷ್ಯ

ದೀರ್ಘಕಾಲದ ಹೂಡಿಕೆಗಳಿಗೆ ಕೈಹಾಕುವ ಮುನ್ನ ಯೋಚಿಸಿ. ಉರಿಯುವ ವಸ್ತುಗಳು ಅಥವಾ ವಿದ್ಯುತ್‌ ಉಪಕರಣಗಳನ್ನು ಉಪಯೋಗಿಸುವ ಸಂದರ್ಭದಲ್ಲಿ ಸಣ್ಣಪುಟ್ಟ ಅವಘಡಗಳು ಸಂಭವಿಸುವ ಸಾಧ್ಯತೆ ಎಚ್ಚರದಿಂದಿರಿ.

ಧನಸ್ಸು:

ದಿನ ಭವಿಷ್ಯ

ದಿಢೀರ್‌ ಪ್ರಯಾಣ ಹೋಗುವ ಸಾಧ್ಯತೆ ಇದ್ದು, ಇದಕ್ಕಾಗಿ ಧಾವಂತ ಬೇಡ. ಪ್ರಯಾಣದ ಪೂರ್ವಾಪರಗಳನ್ನು ತಿಳಿದು ಪ್ರಯಾಣ ಬೆಳೆಸಿದಲ್ಲಿ ಅನುಕೂಲವಾಗುವುದು. ಮಾರ್ಗ ಮಧ್ಯೆ ಉಪಯೋಗಕ್ಕಾಗಿ ಸಾಕಷ್ಟು ಹಣ ನಿಮ್ಮ ಬಳಿಯಿರಲಿ.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಕುಟುಂಬದ ಸದಸ್ಯರೊಂದಿಗೆ ಸಂತೋಷದಿಂದ ಕಾಲ ಕಳೆಯುವಿರಿ. ಸಂಗಾತಿಯ ಸಲಹೆಯನ್ನು ಸ್ವೀಕರಿಸಿರಿ. ಮಕ್ಕಳು ಶುಭಯೋಗವನ್ನು ಉಂಟು ಮಾಡುವರು. ವಿವಿಧ ಮೂಲಗಳಿಂದ ಹಣವು ಹರಿದು ಬರುವುದು.

ಕುಂಭ:

ದಿನ ಭವಿಷ್ಯ

ತುಂಬಾ ದಿನಗಳಿಂದ ಆಗಬೇಕಿದ್ದ ಸರ್ಕಾರಿ ಸಂಬಂಧಿತ ಕೆಲಸಗಳು ಇಂದು ಆಗುತ್ತವೆ. ಹಳೆಯ ಬಾಕಿ ವಸೂಲಾಗುತ್ತದೆ. ಇದರಿಂದ ನಿಮ್ಮ ಆರ್ಥಿಕ ಸ್ಥಿತಿಯು ಸುಸ್ಥಿತಿಯಲ್ಲಿರುವುದು.

ಮೀನ:

ದಿನ ಭವಿಷ್ಯ

ಆಸ್ತಿಯ ತಕರಾರುಗಳು ಇತ್ಯರ್ಥವಾಗುವ ಸಮಯ ಹತ್ತಿರ ಬರುತ್ತಿದೆ. ಶಾಂತತೆಯನ್ನು ಕಾಯ್ದುಕೊಳ್ಳಿರಿ. ನಿಮಗೆ ದಕ್ಕಬೇಕಾದ ಪ್ರಮಾಣಕ್ಕಿಂತಲೂ ಹೆಚ್ಚಾಗಿ ದೊರೆಯುವ ಸಾಧ್ಯತೆ ಇರುತ್ತದೆ. ಗುರುವಿನ ಸ್ತೋತ್ರ ಪಠಿಸಿರಿ.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ ಭವಿಷ್ಯ: 30 ಜುಲೈ, 2018!!