ದಿನ ಭವಿಷ್ಯ: 4 ಆಗಸ್ಟ್, 2018!!

0
309
ದಿನ ಭವಿಷ್ಯ

Astrology in kannada | kannada news

ದಿನ ಭವಿಷ್ಯ: 4 ಆಗಸ್ಟ್, 2018!!

ಮೇಷ:

ದಿನ ಭವಿಷ್ಯ

ಆರೋಗ್ಯವೇ ಭಾಗ್ಯ ಎಂದರು ಹಿರಿಯರು. ಹಾಗಾಗಿ ಆರೋಗ್ಯದ ಸುಸ್ಥಿತಿಗಾಗಿ ಆಹಾರ-ವಿಹಾರದಲ್ಲಿ ಕ್ರಮತೆಯನ್ನು ರೂಢಿಸಿಕೊಂಡಲ್ಲಿ ಒಳಿತಾಗುವುದು. ಪ್ರಾಚೀನ ಪದ್ಧತಿಯಾದ ಆಯುರ್ವೇದ ವೈದ್ಯ ಪದ್ಧತಿಯ ಕಡೆಗೆ ಚಿಂತಿಸಿರಿ.

ವೃಷಭ:

ದಿನ ಭವಿಷ್ಯ

ದಿಢೀರನೇ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇರುವುದು. ಇದರಿಂದ ಮಾನಸಿಕ ನೆಮ್ಮದಿಯನ್ನು ಹೊಂದುವಿರಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಮತ್ತು ನೌಕರಿಯಲ್ಲಿ ಪ್ರಗತಿ ಕಂಡು ಬರುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

ಮಿಥುನ:

ದಿನ ಭವಿಷ್ಯ

ಅಸಡ್ಡೆಯಿಂದ ಕಾಣುವವರನ್ನು ದ್ವೇಷಿಸಬೇಡಿ. ಅವರಿಂದಲೂ ಕೆಲವೊಮ್ಮೆ ಮಹತ್ತರ ಕೆಲಸಗಳು ಆಗುತ್ತವೆ. ಸಹೋದರರ ಸಂಗಡ ಮನಸ್ತಾಪ ಬೇಡ. ಆಂಜನೇಯ ಮಂತ್ರವನ್ನು ಪಠಿಸಿರಿ. ಆಸ್ತಿಗೆ ಸಂಬಂಧಪಟ್ಟಂತೆ ನಿರ್ಧಾರವನ್ನು ಮುಂದೂಡುವುದು ಒಳ್ಳೆಯದು.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಸಂಭ್ರಮದ ದಿನವಾಗಿ ಹೊಸ ಪರಿವರ್ತನೆಯ ಬಾಗಿಲು ಇಂದು ತೆರೆಯಲಿದೆ. ತಾಂತ್ರಿಕ ವರ್ಗದವರಿಗೆ ಅನುಕೂಲವಾಗುವುದು. ಹಣಕಾಸಿನ ಸ್ಥಿತಿಯು ಉತ್ತಮವಾಗಿದ್ದು ಮನೋಕಾಮನೆಗಳು ಇಂದು ಪೂರ್ಣಗೊಳ್ಳುವವು.

ಸಿಂಹ:

ದಿನ ಭವಿಷ್ಯ

ವ್ಯಕ್ತಿತ್ವದ ಎತ್ತರ ಕುಸಿಯದಂತೆ ನೋಡಿಕೊಳ್ಳಿ. ಸಾರ್ವಜನಿಕರೊಂದಿಗೆ ಮುಗುಳ್ನಗೆಯಿಂದ ಮಾತನಾಡಿರಿ. ಕೆಲಸ ಕಾರ್ಯಗಳ ಸಾಫಲ್ಯತೆಗಾಗಿ ನಿಮ್ಮ ಮಾತುಗಾರಿಕೆಯು ಪ್ರಭಾವ ಬೀರುವುದು. ಗುರು ಸ್ತೋತ್ರವನ್ನು ಪಠಿಸಿರಿ.

ಕನ್ಯಾ:

ದಿನ ಭವಿಷ್ಯ

ಉತ್ತಮವಾದುದನ್ನು ಕ್ಲಿಷ್ಟತೆ ಇದ್ದರೂ ಸರಳವಾಗಿ ನಿಭಾಯಿಸಿಕೊಂಡು ಹೋಗುವ ಶಕ್ತಿಯನ್ನು ಭಗವಂತ ನಿಮಗೆ ದಯಪಾಲಿಸಿರುವರು. ನಿಮ್ಮಿಂದ ಮಾರ್ಗದರ್ಶನ ಪಡೆದವರು ಇಂದು ನಿಮ್ಮನ್ನು ಕೊಂಡಾಡುವರು.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ಸಮಾಜದಲ್ಲಿ ಬಹುಮುಖ್ಯ ವ್ಯಕ್ತಿತ್ವವನ್ನು ಪುನಃ ಸ್ಥಾಪಿಸಲು ಸದಾವಕಾಶಗಳು ಇಂದು ಹೇರಳವಾಗಿ ದೊರೆಯುವುದು. ಅವನ್ನು ತಡಮಾಡದೆ ಬಾಚಿಕೊಂಡು ಅದರ ಅನುಷ್ಠಾನವನ್ನು ಕಾರ್ಯರೂಪಕ್ಕೆ ತನ್ನಿರಿ. ಇದರಿಂದ ನಿಮ್ಮ ಮೇಲಿದ್ದ ಅನುಮಾನಗಳು ದೂರವಾಗುವುದು.

ವೃಶ್ಚಿಕ:

ದಿನ ಭವಿಷ್ಯ

ಹೊರಗಿನ ಜನರೆದುರು ನೀವು ಪ್ರತಿಭಾವಂತ ವ್ಯಕ್ತಿಯಾಗಿದ್ದೀರಿ. ಆದರೆ ಕೌಟುಂಬಿಕ ಜೀವನದಲ್ಲಿನ ಬಿಕ್ಕಟ್ಟುಗಳನ್ನು ಬಗೆಹರಿಸಿಕೊಳ್ಳುವಲ್ಲಿ ವಿಫಲರಾಗಿರುವಿರಿ. ಹಿರಿಯರ ಸಲಹೆ ಸಹಕಾರಗಳನ್ನು ಪಡೆಯಿರಿ. ಅಹಂಮಿಕೆಯಿಂದ ಹೊರಬನ್ನಿರಿ.

ಧನಸ್ಸು:

ದಿನ ಭವಿಷ್ಯ

ನಿಮ್ಮ ಜೀವನದಲ್ಲಿನ ಒಳಿತುಗಳು ಬರಲು ಹವಣಿಸಿದರೂ ಶನಿ ಮಹಾರಾಜರ ಕೃಪೆಯಿಂದ ಮರಳುಗಾಡಿನಲ್ಲಿ ನೀರನ್ನು ಪಡೆಯುವಂತೆ ವ್ಯರ್ಥ ಪ್ರಯತ್ನವಾಗುವುದು. ಸದ್ಗುರುವಿನ ಆರಾಧನೆಯಿಂದ ಸಂಜೆಯ ವೇಳೆಗೆ ಸಮಾಧಾನಕರ ಅಂಶ ಗೋಚರಿಸುವುದು.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ನಿಮ್ಮ ರಾಶಿಯ ಸ್ವಾಮಿಯಾದ ಶನಿಯು ನಿಮಗೆ ಹೆಚ್ಚಿನ ತೊಂದರೆ ನೀಡಲಾರ. ಆದರೆ ಮೈಮರೆತರೆ ಪೆಟ್ಟು ಗ್ಯಾರಂಟಿ. ಪ್ರಯಾಣ ಕಾಲದಲ್ಲಿ ಎಚ್ಚರಿಕೆ ಅಗತ್ಯ. ಹಿರಿಯರೆದುರು ತಗ್ಗಿ-ಬಗ್ಗಿ ನಡೆಯಿರಿ.

ಕುಂಭ:

ದಿನ ಭವಿಷ್ಯ

ಕುಂಭ:- ಒಳಿತಿನ ಕೆಲಸ ಸಿಗಲು ಮಿಶ್ರ ಫಲಗಳಿವೆ. ಧೈರ್ಯವು ನಿಮ್ಮ ಬಹುದೊಡ್ಡ ಆಸ್ತಿ. ಹೊಸ ಕಾಲಕ್ಕೆ ಹಳೆಯ ವಿಚಾರಗಳ ಅನಿವಾರ್ಯತೆ ಇದ್ದೇ ಇರುತ್ತದೆ. ಇತರರಿಗೆ ನಿಮ್ಮ ಅನುಭವವನ್ನು ಹಂಚಿಕೊಳ್ಳಿರಿ.

ಮೀನ:

ದಿನ ಭವಿಷ್ಯ

ಮೀನ:- ಮಾತಿಗೂ ಕೃತಿಗೂ ಅಂತರವನ್ನು ಮಾಡದಿರಿ. ಇದರಿಂದ ನಿಮ್ಮ ವ್ಯಕ್ತಿತ್ವಕ್ಕೆ ಕುಂದು ಉಂಟಾಗುವ ಸಂಭವವಿರುತ್ತದೆ. ಹಳೆಯ ಗೆಳೆಯರ ಭೇಟಿ ಸಂಭವ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ ಭವಿಷ್ಯ: 4 ಆಗಸ್ಟ್, 2018!!