ದಿನ ಭವಿಷ್ಯ: 5 ಡಿಸೆಂಬರ್, 2018!!

0
597
ದಿನ ಭವಿಷ್ಯ

Astrology in kannada | kannada news ದಿನ-ಭವಿಷ್ಯ: 5 ಡಿಸೆಂಬರ್, 2018!!

ದಿನ-ಭವಿಷ್ಯ: 5 ಡಿಸೆಂಬರ್, 2018!!

ಮೇಷ:

ದಿನ ಭವಿಷ್ಯ

ಮೇಷ:- ಪದೋನ್ನತಿಗೆ ಕಾರಣವಾಗುವ ಅನೇಕ ವಿಚಾರಗಳು ಅದೃಷ್ಟವಷಾತ್‌ ನಿಮ್ಮ ಪ್ರಬಲ ಅಸ್ತ್ರಗಳಾಗಿವೆ. ಇವು ನಿಮ್ಮ ವಿರೋಧಿಗಳ ವಿರುದ್ಧ ವಾಕ್‌ ದಾಳಿ ಮಾಡಲು ಸಹಕಾರಿಯಾಗುವುದು.

ವೃಷಭ:

ದಿನ ಭವಿಷ್ಯ

ವೃಷಭ:- ಬಾಳ ಪಯಣದ ಸಂದರ್ಭದಲ್ಲಿ ಶುಭಕ್ಕೆ ಮುನ್ನುಡಿ ಬರೆಯುವ ದಿನವಾಗಿದೆ. ಭಗವಂತನ ಆಶೀರ್ವಾದವು ನಿಮ್ಮ ಮೇಲಿದೆ. ಉಷ್ಣ ಸಂಬಂಧಿ ತೊಂದರೆಗಳ ನಿವಾರಣೆಗಾಗಿ ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯಿರಿ.

ಮಿಥುನ:

ದಿನ ಭವಿಷ್ಯ

ಮಿಥುನ:-ಯಾರನ್ನೋ ಮೆಚ್ಚಿಸುವುದಕ್ಕಾಗಿ ನಿಮ್ಮತನವನ್ನು ಬಿಡಲು ಮುಂದಾಗುವಿರಿ. ನಿಮ್ಮ ನಾಯಕನನ್ನು ಆರಿಸುವಲ್ಲಿ ನಿಮ್ಮ ಆತ್ಮಸಾಕ್ಷಿಗೆ ತಕ್ಮಂತೆ ನಡೆದುಕೊಳ್ಳಿ. ಇದರಿಂದ ಸಮಾಜದಲ್ಲಿ ಗೌರವ, ಮನ್ನಣೆ ದೊರೆಯುವವು.

Also read: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಿಮ್ಮ ಹುಟ್ಟಿದ ತಿಂಗಳು ನಿಮ್ಮ ವ್ಯಕ್ತಿತ್ವದ ಬಗ್ಗೆ ಏನು ಹೇಳುತ್ತದೆ ಎಂಬುವುದು ನಿಮಗೆ ತಿಳಿದಿದೆಯೇ..?

ಕಟಕ:

ದಿನ ಭವಿಷ್ಯ

ಕಟಕ:- ಶಾಂತರಾಗಲು ನಿಮಗೆ ಹೆಚ್ಚಿನ ಸಮಯಬೇಕಾಗುವುದು. ಎದುರಾಳಿಗಳು ಮಾತನಾಡಿದ ರೀತಿ ನಿಮ್ಮ ಮನಸ್ಸಿನಲ್ಲಿ ಕ್ರೋಧವನ್ನು ಹುಟ್ಟು ಹಾಕಿದೆ. ಕ್ರೋಧದಿಂದ ಕ್ರೋಧವನ್ನು ಸೋಲಿಸಲು ಆಗುವುದಿಲ್ಲ. ಆದಷ್ಟು ಸಹನೆ, ಪ್ರೀತಿ, ವಾತ್ಸಲ್ಯಗಳನ್ನು ರೂಢಿಸಿಕೊಳ್ಳಿ.

ಸಿಂಹ:

ದಿನ ಭವಿಷ್ಯ

ಸಿಂಹ:- ದುಡುಕು ಮಾತುಗಳು ಸಾಕು. ದುಡುಕಿನಿಂದ ಹಲವು ಒಳ್ಳೆಯ ಅವಕಾಶಗಳನ್ನು ಕಳೆದುಕೊಳ್ಳುವಿರಿ. ಸ್ನೇಹಿತರೊಂದಿಗೆ ವಿರಸ ಸೂಕ್ತವಲ್ಲ. ಪ್ರತಿ ದಿನವೂ ಒಂದೇ ತರಹ ಇರುವುದಿಲ್ಲ. ತಾಳ್ಮೆಯನ್ನು ಕಾಪಾಡಿಕೊಳ್ಳಿ.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ವಿವೇಕದ ವಿಚಾರವು ಶ್ರೀಮಂತಿಕೆಗಿಂತ ಘನವಾದುದು. ಇದರ ಅರಿವು ನಿಮಗಿಂದು ಲಭ್ಯವಾಗಲಿದೆ. ದೂರ ಪ್ರಯಾಣ ಬೆಳಸುವ ಸಾಧ್ಯತೆ ಇದೆ. ಪ್ರಯಾಣದಲ್ಲಿ ಬೀದಿಬದಿಯ ಆಹಾರವನ್ನು ಸೇವಿಸದೆ ಇರುವುದು ಒಳ್ಳೆಯದು.

Also read: ಮದುವೆಗೆ ಜಾತಕ ಪರೀಶಲನೆ ಎಷ್ಟು ಮುಖ್ಯ ಹಾಗೂ ಯಾವ ವಿಚಾರಗಳು ಸಂಬಂಧವನ್ನು ಗಟ್ಟಿ ಗೊಳಿಸುತ್ತವೆ ಅಂತ ತಿಳ್ಕೊಳ್ಳಿ..

ತುಲಾ:

ದಿನ ಭವಿಷ್ಯ

ತುಲಾ:- ನಿನ್ನೆಯ ಸೋಲನ್ನು ಮರೆಯಲಾಗದೆ ಪರಿತಪಿಸುತ್ತಿರುವಿರಿ. ಇದಕ್ಕೆ ಚಿಂತಿಸುವ ಅಗತ್ಯವಿಲ್ಲ. ನಿನ್ನೆಯ ಸೋಲು ಇಂದಿನ ಗೆಲುವಿಗೆ ಕಾರಣವಾಗುವುದು. ಗುರುವಿನ ಆಶೀರ್ವಾದ ಪಡೆಯಿರಿ. ಅಗತ್ಯಕ್ಕೆ ತಕ್ಕಷ್ಟು ಹಣ ಖರ್ಚು ಮಾಡಿ.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ಅನ್ಯರ ಮಾತುಗಳನ್ನು ಶಾಂತಚಿತ್ತದಿಂದ ಕೇಳಿಸಿಕೊಳ್ಳಿ. ಯಾರನ್ನೂ ಉದಾಸೀನ ಮಾಡದಿರಿ. ಕೆಲವೊಮ್ಮೆ ನಮಗೆ ಯಾರಿಂದ ಒಳಿತಾಗುವುದಿಲ್ಲ ಎಂದು ಭಾವಿಸಿದ್ದೇವೋ ಅಂತಹವರ ನೆರವು ಸಹಕಾರವನ್ನು ಕೇಳಬೇಕಾಗದ ಸಂದರ್ಭ ಬರುವುದು.

ಧನಸ್ಸು:

ದಿನ ಭವಿಷ್ಯ

Also read: ಈ ಎರಡು ರಾಶಿಯವರ ಪ್ರೇಮ ಜೀವನ ತುಂಬಾ ಸ್ಪೆಷಲ್ ಅಂತೆ, ನೀವು ಇದೆ ರಾಶಿಯವರ ನೋಡಿಕೊಳ್ಳಿ…

ಧನಸ್ಸು:- ಆಳಾಗಿ ದುಡಿವ ವ್ಯಕ್ತಿ ಅರಸನಾಗಿಯೂ ಬಾಳಬಲ್ಲ. ಅಂತೆಯೇ ಸದ್ಯದ ಗ್ರಹಸ್ಥಿತಿಯಿಂದ ನೀವು ಸಮಾಜದಲ್ಲಿ ಕನಿಷ್ಟರು ಎಂದಾದರೂ ಮುಂದೆ ನೀವೇ ರಾಜನಾಗಿ ಮೆರೆಯುವ ಕಾಲ ಬರುತ್ತದೆ. ಚಿಂತೆ ಮಾಡಬೇಡಿ ಚಿನ್ಮಯನಿದ್ದಾನೆ.

ಮಕರ:

ದಿನ ಭವಿಷ್ಯ

ಮಕರ:- ಧೈರ್ಯಂ ಸರ್ವತ್ರ ಸಾಧನಂ ಎನ್ನುವಂತೆ ನಿಮ್ಮ ಧೈರ್ಯವೇ ನಿಮ್ಮ ಎಲ್ಲಾ ಕೆಲಸಗಳಲ್ಲೂ ವಿಜಯ ಪತಾಕೆಯನ್ನು ಹಾರಿಸಲು ನೆರವಾಗುವುದು. ಕೆಲವರಿಗೆ ಕೆಲಸದಲ್ಲಿ ಬಡ್ತಿ ಮೂಲಕ ಸಂತಸ ಉಂಟಾಗುವುದು.

ಕುಂಭ:

ದಿನ ಭವಿಷ್ಯ

ಕುಂಭ:- ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ. ಮಹಾ ಪರಾಕ್ರಮಶಾಲಿಯಾದ ಆಂಜನೇಯ ಮಂದಿರಕ್ಕೆ ಭೇಟಿ ಕೊಡಿ. ಸಾಧ್ಯವಾದಲ್ಲಿ ವೀಳ್ಯದೆಲೆ ಸರವನ್ನು ಭಗವಂತನಿಗೆ ಅರ್ಪಿಸಿ ನಿಮ್ಮ ಕಾರ್ಯ ಸಾಧುವಾಗುವುದು.

ಮೀನ:

ದಿನ ಭವಿಷ್ಯ

ಮೀನ:- ರಾಜಕಾರಣಿಗಳಿಗೆ ಬಿಕ್ಕಟ್ಟುಗಳು ನಿಶ್ಚಿತ. ನಿಮ್ಮನ್ನು ವಿರೋಧಿಸುವವರ ಎದುರು ನಿಮ್ಮ ದೌರ್ಬಲ್ಯವನ್ನು ಪ್ರದರ್ಶಿಸದಿರಿ. ಅವಿವೇಕದ ಕೂಗಾಟದಿಂದ ಕೆಡುಕಿಗೆ ದಾರಿ ಆಗುವ ಸಂದರ್ಭ ಇರುತ್ತದೆ.

Also read: ನಿಮ್ಮ ರಾಶಿಯ ಪ್ರಕಾರ, ಸಾಮಾನ್ಯವಾಗಿ ನಿಮ್ಮ ಸಂಬಂಧಗಳಲ್ಲಾಗುವ ತೊಂದರೆಗಳು.

ದಿನ-ಭವಿಷ್ಯ: 5 ಡಿಸೆಂಬರ್, 2018!!