ದಿನ ಭವಿಷ್ಯ: 5 ಜುಲೈ, 2018!!

0
508
ದಿನ ಭವಿಷ್ಯ

Astrology in kannada | kannada news

ದಿನ ಭವಿಷ್ಯ: 5 ಜುಲೈ, 2018!!

ಮೇಷ:

ದಿನ ಭವಿಷ್ಯ

ಹಿರಿಯರಿಂದ ಸಿಗಬೇಕಾದ ಹಲವು ಆಸ್ತಿಗಳು ಹಾಗೂ ಉನ್ನತ ಮಾರ್ಗದರ್ಶನವು ಈದಿನ ತಮಗೆ ದೊರೆಯಲಿದೆ. ವಾಹನ ಸೌಕರ್ಯ ಉತ್ತಮವಾಗಿದ್ದು ಮನಸ್ಸು ಈದಿನ ಪ್ರಫುಲ್ಲತೆಯಿಂದ ಕೂಡಿರುವುದು. ಬರಬೇಕಾದ ಹಣ ಕೈ ಸೇರುವುದು.

ವೃಷಭ:

ದಿನ ಭವಿಷ್ಯ

ಸಕಾರಾತ್ಮಕ ಚಿಂತನೆಗಳು ನಿಮ್ಮನ್ನು ಉತ್ತುಂಗ ಶಿಖರಕ್ಕೆ ಒಯ್ಯುವುದು. ಈ ದಿನ ಮನಸ್ಸಿಗೆ ಬೇಸರವಾಗುವ ಸಂಗತಿ ನಡೆಯುವ ಸಾಧ್ಯತೆ ಇದೆ. ಮನೋನಿಯಾಮಕ ರುದ್ರದೇವರನ್ನು ಭಜಿಸಿರಿ. ಮಕ್ಕಳಿಂದ ಸುವಾರ್ತೆ ಕೇಳುವಿರಿ.

ಮಿಥುನ:

ದಿನ ಭವಿಷ್ಯ

ಕೆಲಸದ ಒತ್ತಡಗಳು ನಿದ್ದೆಯನ್ನು ಹಾಳು ಮಾಡುವ ಸಾಧ್ಯತೆ ಇರುತ್ತದೆ. ಸ್ನೇಹಿತರ ಜತೆಯಲ್ಲಿ ಅಥವಾ ಅನುಭವಿಗಳ ಹತ್ತಿರ ಕೆಲಸ ಕುರಿತು ಚರ್ಚಿಸುವುದರಿಂದ ಮನಸ್ಸಿಗೆ ಹಿತವೆನಿಸುವುದು.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ನಿಮ್ಮ ವ್ಯಾಪಾರ ವ್ಯವಹಾರಗಳು ಮಂದ ಪ್ರಗತಿಯಲ್ಲಿ ಸಾಗುವುದು. ಕೆಲಸದ ವಿಚಾರದಲ್ಲಿ ನಕಾರಾತ್ಮಕ ಚಿಂತೆಗಳು ಕಾಡುವುದು. ಆದಾಗ್ಯೂ ದೇವರ ಕೃಪೆಯಿಂದ ಈದಿನ ಕಾರ್ಯಗಳು ಸುಗಮವಾಗಿ ಆಗುವುದು.

ಸಿಂಹ:

ದಿನ ಭವಿಷ್ಯ

ನಿಮ್ಮ ಮೇಲೆ ಹೊರಿಸಲ್ಪಟ್ಟ ಜವಾಬ್ದಾರಿಯಿಂದ ಕಂಗೆಡುವಿರಿ. ಆದರೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋದಲ್ಲಿ ಈದಿನ ನಿಮಗೆ ಒಳಿತಾಗುವುದು. ಹಣಕಾಸಿನ ತೊಂದರೆ ಎದುರಾಗುವುದಿಲ್ಲ.

ಕನ್ಯಾ:

ದಿನ ಭವಿಷ್ಯ

ಈದಿನದ ಕೆಲಸ ಕಾರ್ಯಗಳು ನಿಮಗೆ ಅಧಿಕ ಒತ್ತಡವನ್ನು ತರುವ ಸಾಧ್ಯತೆ. ಆದರೆ ನೀವು ನಿಮ್ಮ ಕೈ ಕೆಳಗಿನವರನ್ನು ಪ್ರೀತಿ ವಿಶ್ವಾಸಗಳಿಂದ ನಡೆಸಿಕೊಂಡಲ್ಲಿ ನಿಮಗೆ ಒಳಿತೇ ಅಗುವುದು.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ನಿಮ್ಮ ಹಿಂದೆ ಬಿದ್ದ ಕೆಲಸ ಕಾರ್ಯಗಳಿಗೆಲ್ಲ ಇಂದು ಕ್ರಿಯಾಶೀಲತೆ ದೊರೆಯುವುದು. ಹಮ್ಮಿಕೊಂಡ ಕೆಲಸಗಳಲ್ಲಿ ಯಶಸ್ಸು ಪಡೆಯುವಿರಿ. ಪರಾಕ್ರಮದ ಶನಿ ಉತ್ತಮನಾಗಿದ್ದು, ಹಣಕಾಸಿನ ತೊಂದರೆ ಇರುವುದಿಲ್ಲ.

ವೃಶ್ಚಿಕ:

ದಿನ ಭವಿಷ್ಯ

ಈದಿನ ಹಣಕಾಸಿನ ಪರಿಸ್ಥಿತಿ ಉತ್ತಮವಾಗಿದ್ದು ಅದರಿಂದ ಮಕ್ಕಳ ಶಾಲೆಯ ಶುಲ್ಕವನ್ನು ತುಂಬುವಿರಿ. ಮನೆಯಲ್ಲಿ ಸಂಭ್ರಮದ ವಾತಾವರಣ. ಆಪ್ತ ಗೆಳೆಯರು ಸಕಾಲದಲ್ಲಿ ಸಹಾಯ ಮಾಡುವರು

ಧನಸ್ಸು:

ದಿನ ಭವಿಷ್ಯ

ನಿಮ್ಮ ಓದಿಗೆ ತಕ್ಕಂತೆ ನೌಕರಿ ದೊರೆಯುವುದು. ಆದರೆ ಗುರುವಿನ ಬಲವನ್ನು ಹೊಂದಲು ಗುರುವಿನ ಸ್ತೋತ್ರ ಪಠಿಸಿರಿ. ಗುರು ಹಿರಿಯರ ಆಶೀರ್ವಾದ ಪಡೆಯಿರಿ. ಈದಿನದ ಕೆಲಸ ಕಾರ್ಯಗಳು ನಿಮ್ಮ ಮನಸ್ಸಿನಂತೆ ನಡೆಯುವುದು.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ನೆರೆಹೊರೆಯವರೊಂದಿಗೆ ಪ್ರೀತಿ-ವಿಶ್ವಾಸದಿಂದ ಇರಿ. ಅನಗತ್ಯ ವಿಷಯಗಳಲ್ಲಿ ಮೂಗು ತೂರಿಸಿ ಮನಸ್ತಾಪಕ್ಕೆ ಒಳಗಾಗುವಿರಿ. ನಿಮ್ಮ ಕೆಲಸ ಕಾರ್ಯಗಳಲ್ಲಿ ತಲ್ಲೀನತೆಯಿಂದ ಮಗ್ನರಾಗಿರಿ. ಭಗವಂತನ ಆಶೀರ್ವಾದ ದೊರೆಯುವುದು.

ಕುಂಭ:

ದಿನ ಭವಿಷ್ಯ

ನೆನಗುದಿಗೆ ಬಿದ್ದಿದ್ದ ಕೆಲಸ ಕಾರ್ಯಗಳಿಗೆ ಚಾಲನೆ ದೊರೆಯುವುದು. ನಿಮ್ಮ ಕಚೇರಿಯ ವಾತಾವರಣದಲ್ಲಿ ನಿಮ್ಮನ್ನು ಎಲ್ಲರೂ ಗೌರವಿಸುವರು. ಸರಕಾರದಿಂದ ಬರಬೇಕಾಗಿದ್ದ ಹಣವು ಬರುವ ಸೂಚನೆ ಈದಿನ ದೊರೆಯುವುದು.

ಮೀನ:

ದಿನ ಭವಿಷ್ಯ

ಕುಟುಂಬದ ಸದಸ್ಯರೊಡನೆ ತೀರ್ಥಯಾತ್ರೆ ಕೈಕೊಳ್ಳುವ ಸಾಧ್ಯತೆ ಇದೆ. ಪ್ರಯಾಣಕ್ಕೆ ಬೇಕಾದ ಸಕಲ ವಸ್ತುಗಳನ್ನು ಪಟ್ಟಿ ಮಾಡುವಿರಿ. ಬಂಧುಗಳಿಂದ ಹಣಕಾಸಿನ ನೆರವು ದೊರೆಯುವುದು.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ ಭವಿಷ್ಯ: 5 ಜುಲೈ, 2018!!