ದಿನ ಭವಿಷ್ಯ: 5 ಅಕ್ಟೋಬರ್, 2018!!

0
656
ದಿನ ಭವಿಷ್ಯ

Astrology in kannada | kannada news

ದಿನ ಭವಿಷ್ಯ: 5 ಅಕ್ಟೋಬರ್, 2018!!

ಮೇಷ:

ದಿನ ಭವಿಷ್ಯ

ಹಣಕಾಸು ವಿಷಯದಲ್ಲಿ ಜಾಗ್ರತೆಯಿಂದಿರಿ. ಆದರೆ ಆರೋಗ್ಯದ ಕಡೆ ಗಮನ ಕೊಡುವುದು ಒಳ್ಳೆಯದು. ಮನೆಯ ಸದಸ್ಯರ ಮಾತಿನಿಂದ ಉದ್ವೇಗಕ್ಕೆ ಒಳಗಾಗುವಿರಿ. ಆದಷ್ಟು ಇಂದು ತಾಳ್ಮೆಯಿಂದ ಇರಿ.

ವೃಷಭ:

ದಿನ ಭವಿಷ್ಯ

ಮಾತು ಮನೆ ಕೆಡಿಸಿತು ತೂತು ಒಲೆ ಕೆಡಿಸಿತು ಎನ್ನುವಂತೆ ಈದಿನ ನೀವು ಆಡುವ ಮಾತು ವಿರಸಕ್ಕೆ ಕಾರಣವಾಗುವ ಸಾಧ್ಯತೆ. ಮಾತು ಕಡಿಮೆ ಮಾಡಿ. ಧ್ಯಾನ-ಯೋಗದಲ್ಲಿ ಮನಸ್ಸನ್ನು ಕೇಂದ್ರೀಕರಿಸಿ.

ಮಿಥುನ:

ದಿನ ಭವಿಷ್ಯ

ಮನೆಯಲ್ಲಿ ನೆಮ್ಮದಿ ಸಿಗಲಿದೆ. ಸಂಗಾತಿಯ ಸಕಾಲಿಕ ಎಚ್ಚರಿಕೆಯನ್ನು ಪಾಲಿಸಿದಲ್ಲಿ ಕಚೇರಿಯ ಕೆಲಸ ಕಾರ್ಯಗಳಲ್ಲಿ ಉತ್ಸಾಹದಿಂದ ಕಾರ್ಯ ನಿರ್ವಹಿಸುವಿರಿ. ಇಂದು ಕಾರ್ಯಗಳು ಮನಸ್ಸಿಗೆ ತೃಪ್ತಿ ನೀಡುವುದು.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಶಿಕ್ಷಣ ಕ್ಷೇತ್ರದಲ್ಲಿ ನಿಮ್ಮ ಸಾಧನೆ ಅಪಾರವಾದುದು. ಇದರಿಂದಾಗಿ ಸಾಮಾಜಿಕ ಮನ್ನಣೆ ದೊರೆಯುವುದು. ಇದರಿಂದ ಉನ್ನತ ಶಿಕ್ಷ ಣಕ್ಕಾಗಿ ಹಲವಾರು ಸಂಘ-ಸಂಸ್ಥೆಗಳು ನಿಮಗೆ ಹಣಕಾಸಿನ ನೆರವು ನೀಡುವರು.

ಸಿಂಹ:

ದಿನ ಭವಿಷ್ಯ

ಕೆಲಸ ಕಾರ್ಯಗಳಲ್ಲಿ ಅತಿಯಾದ ವಿಚಾರಣೆ ಮತ್ತು ಕಟ್ಟುನಿಟ್ಟಿನ ನಿಯಮದಿಂದಾಗಿ ಕೆಲಸಗಾರರು ಅಸಹಕಾರ ತೋರುವರು. ಆದಷ್ಟು ನಿಮ್ಮ ಕೈ ಕೆಳಗೆ ಕೆಲಸ ಮಾಡುವ ವ್ಯಕ್ತಿಗಳ ಮನಸ್ಸನ್ನು ಗೆಲ್ಲುವುದು ಇಂದಿನ ತುರ್ತು ಕೆಲಸವಾಗಿರುತ್ತದೆ.

ಕನ್ಯಾ:

ದಿನ ಭವಿಷ್ಯ

ಎಲ್ಲವೂ ಸರಿಯಾಗಿದೆ ಎಂದುಕೊಳ್ಳುತ್ತಿರುವಾಗಲೇ ಹೊಸ ಸಮಸ್ಯೆಯೊಂದು ನಿಮಗೆ ಎದುರಾಗುವುದು. ತೆರಿಗೆ ಹಣ ಕಟ್ಟುವಲ್ಲಿ ವಿಳಂಬ ಮಾಡದಿರುವುದು ಒಳ್ಳೆಯದು. ನಿಮ್ಮ ಲೆಕ್ಕ ಪರಿಶೋಧಕರ ಸಲಹೆಯಂತೆ ನಡೆದುಕೊಳ್ಳಿರಿ.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ದಿಢೀರ್‌ ಪ್ರಯಾಣದ ಯೋಗವಿದ್ದು ನೂತನ ಕಾರ್ಯಭಾರವನ್ನು ಹೊರಬೇಕಾಗುವುದು. ನೂತನ ಕಾರ್ಯಭಾರವನ್ನು ಹೊರುವ ಸಲುವಾಗಿ ಆರ್ಥಿಕ ಸಂಕಷ್ಟ ಎದುರಾಗುವುದು. ಸ್ನೇಹಿತರು ಹಣಕಾಸಿನ ನೆರವು ನೀಡುವರು.

ವೃಶ್ಚಿಕ:

ದಿನ ಭವಿಷ್ಯ

ಗ್ರಹಗತಿಗಳು ಈದಿನ ಯಾವ ರೀತಿ ಫಲವನ್ನು ನೀಡುವವು ಎಂಬುದು ನಿಜಕ್ಕೂ ಅಚ್ಚರಿಯ ಸಂಗತಿ. ಅನಿವಾರ್ಯ ಕಾರಣದಿಂದಾಗಿ ಪಿತ್ರಾರ್ಜಿತ ಆಸ್ತಿಯನ್ನು ಮಾರಾಟ ಮಾಡಬೇಕಾಗುವುದು. ಆತ್ಮೀಯರೇ ನಿಮ್ಮನ್ನು ಇಂದು ನಂಬದೇ ಇರಬಹುದು.

ಧನಸ್ಸು:

ದಿನ ಭವಿಷ್ಯ

ದೊಡ್ಡ ವ್ಯಕ್ತಿಗಳ ಪರಿಚಯ ಮತ್ತು ಗೆಳೆತನವಿದೆಯೆಂದ ಆತ್ಮೀಯ ಗೆಳೆಯನನ್ನು ತಿರಸ್ಕಾರದಿಂದ ನೋಡುವುದು ಸರಿಯಲ್ಲ. ಆತನು ಮಾಡಿದ ಉಪಕಾರವನ್ನು ಸ್ಮರಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ. ಅಥವಾ ಆತನನ್ನು ನೆನಪಿಸಿಕೊಳ್ಳುವ ಸಂದರ್ಭ ಎದುರಾಗುವುದು.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಹಿರಿಯರು ಮಾಡಿದ ಇಲ್ಲವೇ ಮಗನು ಮಾಡಿದ ಸಾಲಕ್ಕೆ ನೀವು ಹೊಣೆಗಾರರಾಗಬೇಕಾಗುತ್ತದೆ. ಈದಿನ ಸಾಲಗಾರರು ನಿಮ್ಮನ್ನು ಹಣ ಕೊಡುವಂತೆ ಪೀಡಿಸಬಹುದು. ಸಾಧ್ಯವಾದಷ್ಟು ಮಟ್ಟಿಗೆ ಹಣವನ್ನು ಮರುಪಾವತಿ ಮಾಡುವಿರಿ.

ಕುಂಭ:

ದಿನ ಭವಿಷ್ಯ

ನಿಮ್ಮ ವೃತ್ತಿ ಜೀವನದಲ್ಲಿ ಆಶಾದಾಯಕ ಬೆಳವಣಿಗೆ ಕಂಡುಬರುವುದು. ಸಂಬಳದಲ್ಲಿ ಹೆಚ್ಚಳ ಕಂಡು ಬರುವುದರಿಂದ ಸ್ನೇಹಿತರಿಗೆ ಪಾರ್ಟಿ ಕೊಡಿಸುವಿರಿ.

ಮೀನ:

ದಿನ ಭವಿಷ್ಯ

ಮನೆಯ ಸದಸ್ಯರ ವಿಶ್ವಾಸವನ್ನು ಪಡೆಯಿರಿ. ಮಗನು ನಿಮ್ಮ ಮಾತು ಕೇಳದಿರಬಹುದು. ಗುರುವಿನ ಮಂತ್ರ ಪಠಿಸಿರಿ. ಕೌಟುಂಬಿಕ ಜೀವನದಲ್ಲಿ ನೆಮ್ಮದಿಗಾಗಿ ಗುರುಗಳ ಪ್ರಾರ್ಥನೆ ಮಾಡಿರಿ.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ ಭವಿಷ್ಯ: 5 ಅಕ್ಟೋಬರ್, 2018!!