ದಿನ ಭವಿಷ್ಯ : 6 ಆಗಸ್ಟ್, 2018!!

0
412
ದಿನ ಭವಿಷ್ಯ

Astrology in kannada | kannada news

ದಿನ ಭವಿಷ್ಯ : 6 ಆಗಸ್ಟ್, 2018!!

ಮೇಷ:

ದಿನ ಭವಿಷ್ಯ

ಜೀವನದಲ್ಲಿನ ಏರು-ಪೇರುಗಳು ಮನುಷ್ಯನ ನಿಜಗುಣವನ್ನು ಹೊರ ಜಗತ್ತಿಗೆ ಪ್ರಕಟಿಸಲು ಸಹಕಾರಿಯಾಗುವುದು. ಹಾಗಾಗಿ ಈದಿನ ಕಷ್ಟ ಎಂದು ತಲೆಮೇಲೆ ಕೈ ಹೊತ್ತು ಕೂಡುವುದು ಸುಸಂಸ್ಕೃತರ ಕೆಲಸವಲ್ಲ. ನಿಮ್ಮ ಕಾಯಕವನ್ನು ನಿಷ್ಠೆಯಿಂದ ಮಾಡಿರಿ.

ವೃಷಭ:

ದಿನ ಭವಿಷ್ಯ

ಬದಲಾವಣೆಯು ಪ್ರಗತಿಯ ಸೂಚಕ. ಹಾಗಾಗಿ ಜೀವನದಲ್ಲಿ ಕೆಲ ಬದಲಾವಣೆಗಳನ್ನು ಹೃದಯಪೂರ್ವಕವಾಗಿ ಸ್ವಾಗತಿಸಿರಿ. ಇದರಿಂದ ಮಾನಸಿಕ ನಿರಾಳತೆ ಉಂಟಾಗುವುದು. ಮಕ್ಕಳು-ಮೊಮ್ಮಕ್ಕಳಿಂದ ಬರುವ ಸುದ್ದಿಯಿಂದಾಗಿ ಈದಿನ ಹರ್ಷಭರಿತರಾಗುವಿರಿ.

ಮಿಥುನ:

ದಿನ ಭವಿಷ್ಯ

ಕೆಲ ಗ್ರಹಗಳು ನಿಮ್ಮ ಸಕಾರಾತ್ಮಕ ಚಿಂತನೆಗಳಿಗೆ ಬೆಂಬಲ ಸೂಚಿಸುವುದು. ಹಾಗಾಗಿ ಈದಿನ ಮಾಡಬೇಕೆಂದಿರುವ ಎಲ್ಲ ಕೆಲಸಗಳು ಸುಗಮವಾಗುವುದು. ಅಂತೆಯೇ ಹಣಕಾಸಿನ ಪರಿಸ್ಥಿತಿಯು ಸುಧಾರಿಸುವುದು.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಈದಿನ ನಿಮಗೆ ವಿವಿಧ ಮೂಲಗಳಿಂದ ಹಣಕಾಸು ಒದಗಿ ಬರುವುದು. ಮಕ್ಕಳ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಯ ಕಂಡುಬರುವ ಸಾಧ್ಯತೆ. ಮನೆ ವೈದ್ಯರನ್ನು ಭೇಟಿ ಮಾಡಿರಿ. ಆಂಜನೇಯ ಸ್ತೋತ್ರ ಪಠಿಸಿರಿ.

ಸಿಂಹ:

ದಿನ ಭವಿಷ್ಯ

ಸತ್ಯಕ್ಕೆ ಮಿಗಿಲಾದುದು ಯಾವುದೂ ಇಲ್ಲ ಎಂಬ ನಿಮ್ಮ ನಿಲುವು ನಿಮ್ಮನ್ನು ಮನ್ನಣೆಗೆ ತಲುಪಿಸಲು ಸಹಕಾರಿಯಾಗುವುದು. ಬಹು ಮಹತ್ತರ ಕೆಲಸಕ್ಕೆ ಹಣ ಸಂಗ್ರಹಿಸುವಲ್ಲಿ ಯಶಸ್ಸು ಹೊಂದುವಿರಿ. ಕೆಲವು ಜನ ಅಪಸ್ವರ ಎತ್ತಿದರೂ ಅದರ ಕಡೆ ಗಮನ ಕೊಡುವುದು ಬೇಡ.

ಕನ್ಯಾ:

ದಿನ ಭವಿಷ್ಯ

ಯಾವುದೂ ದಿಢೀರನೇ ಯಶಸ್ಸನ್ನು ಕೊಡುವುದಿಲ್ಲ. ಹಾಗಾಗಿ ಈದಿನ ನೀವು ನಿರಾಶರಾಗುವುದು ಬೇಡ. ಗುರು ಒಲಿದರೆ ಕೊರಡು ಕೂಡ ಚಿಗುರುತ್ತದೆ. ಅಂತೆಯೇ ಅನನ್ಯ ಭಕ್ತಿಯಿಂದ ಗುರುವಿನ ಸ್ತೋತ್ರ ಪಠಿಸಿ. ಗುರುವಿನ ಮೊರೆ ಹೊಂದಿರಿ.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ಸಮಾಜದಲ್ಲಿ ಬಹುಮುಖ್ಯ ವ್ಯಕ್ತಿತ್ವವನ್ನು ಪುನಃ ಸ್ಥಾಪಿಸಲು ಸದಾವಕಾಶಗಳು ಇಂದು ಹೇರಳವಾಗಿ ದೊರೆಯುವುದು. ಅವನ್ನು ತಡಮಾಡದೆ ಬಾಚಿಕೊಂಡು ಅದರ ಅನುಷ್ಠಾನವನ್ನು ಕಾರ್ಯರೂಪಕ್ಕೆ ತನ್ನಿರಿ. ಇದರಿಂದ ನಿಮ್ಮ ಮೇಲಿದ್ದ ಅನುಮಾನಗಳು ದೂರವಾಗುವುದು.

ವೃಶ್ಚಿಕ:

ದಿನ ಭವಿಷ್ಯ

ಮನುಜ ಸಂಘ ಜೀವಿ. ಅಂತೆಯೇ ನೀವು ಕೂಡ ನೆರೆಯವರೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸುವುದರಿಂದ ಸಮಾಜವು ನಿಮ್ಮನ್ನು ಪ್ರೀತಿಯಿಂದ ಕಾಣಲಿದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

ಧನಸ್ಸು:

ದಿನ ಭವಿಷ್ಯ

ಮನಸ್ಸು ಜಡತ್ವದಿಂದ ಕೂಡಿದ್ದು ಯಾವ ಕೆಲಸವನ್ನು ಮಾಡಲು ಉತ್ಸಾಹವಿರುವುದಿಲ್ಲ. ಇದು ಶನಿಗ್ರಹದ ಪ್ರಭಾವ. ಶನಿಯು ನಿಮ್ಮ ರಾಶಿಯಲ್ಲಿ ಸಂಚರಿಸುವ ಮೂಲಕ ಸೋಮಾರಿತನವನ್ನು ಸೃಷ್ಟಿಸುವನು. ಆಂಜನೇಯ ಸ್ತೋತ್ರ ಪಠಿಸಿರಿ.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಕೆಲ ಗ್ರಹಗಳ ಅಶುಭ ಸಂಚಾರದಿಂದ ಬಿರುಗಾಳಿಯೊಂದು ನಿರ್ಮಾಣವಾಗಿ ನಿಮ್ಮ ಆತ್ಮವಿಶ್ವಾಸವನ್ನು ಅಲುಗಾಡಿಸುವ ಸಂದರ್ಭವಿರುತ್ತದೆ. ಆದ್ದರಿಂದ ಕುಲದೇವರ ಪ್ರಾರ್ಥನೆ ಮಾಡುವುದು ಒಳ್ಳೆಯದು.

ಕುಂಭ:

ದಿನ ಭವಿಷ್ಯ

ಹರ ಮತ್ತು ಗುರು ಗ್ರಹರು ಸದ್ಯಕ್ಕೆ ನಿಮ್ಮ ಬೆಂಬಲಕ್ಕೆ ಇಲ್ಲ. ಹಾಗಾಗಿ ನೀವು ನಡೆಯುವ ದಾರಿ ಬಹು ದೀರ್ಘ ಎನಿಸುವುದು. ಆದಷ್ಟು ವಿಷ್ಣುಸಹಸ್ರನಾಮ ಪಾರಾಯಣ ಮಾಡಿರಿ. ಸಂಜೆ ಶಿವನ ಸ್ತೋತ್ರ ಪಠಿಸಿರಿ.

ಮೀನ:

ದಿನ ಭವಿಷ್ಯ

ಈದಿನ ನಿಮ್ಮ ಮನೋಕಾಮನೆಗಳು ಸಿದ್ಧಿಸುವುದು. ಧನ ಲಾಭದಿಂದ ಸಮಾಜದಲ್ಲಿ ಕೀರ್ತಿ ಪ್ರತಿಷ್ಠೆಗಳು ಹೆಚ್ಚುವವು. ಅಂತೆಯೇ ನಿಮ್ಮನ್ನು ಕಂಡು ಅಸೂಯೆ ಪಡುವ ಜನರೂ ಹುಟ್ಟಿಕೊಳ್ಳುವರು. ಈ ಬಗ್ಗೆ ತಲೆಕೆಡಿಸಿಕೊಳ್ಳಬೇಡಿರಿ.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ ಭವಿಷ್ಯ: 6 ಆಗಸ್ಟ್, 2018!!