ನಿತ್ಯ ಭವಿಷ್ಯ: ಫೆಬ್ರವರಿ 6

0
749
ದಿನ ಭವಿಷ್ಯ

Astrology in kannada | kannada news ದಿನ-ಭವಿಷ್ಯ: ಫೆಬ್ರವರಿ 6, 2019!!

ದಿನ-ಭವಿಷ್ಯ: ಫೆಬ್ರವರಿ 6, 2019!!

ಮೇಷ:

ದಿನ ಭವಿಷ್ಯ

ಮೇಷ:- ಊರಿಗೆ ಉಪಕಾರಿ ಮನೆಗೆ ಮಾರಿ ಎಂಬಂತೆ ಕೇವಲ ಹೊರ ಜಗತ್ತಿನ ವಿಚಾರಗಳ ಬಗ್ಗೆ ಗಮನ ಹರಿಸದೆ ಮಡದಿ, ಮಕ್ಕಳ ಕಡೆಗೂ ಗಮನ ಹರಿಸಬೇಕಾದ್ದು ನಿಮ್ಮ ಕರ್ತವ್ಯ. ಮನೆ ಜನರ ಪ್ರೀತಿ ವಿಶ್ವಾಸ ಸಂಪಾದಿಸಿ..

ವೃಷಭ:

ದಿನ ಭವಿಷ್ಯ

ವೃಷಭ:- ಸುಖಾಸುಮ್ಮನೆ ಒಂದು ವ್ಯಾಜ್ಯದಲ್ಲಿ ಸಿಕ್ಕಿಬೀಳುವ ಸಾಧ್ಯತೆ ಇದೆ. ಹಾಗಾಗಿ ಅನವಶ್ಯಕವಾಗಿ ಪರರ ಕಾರ್ಯ ವೈಖರಿ ಬಗ್ಗೆ ಟೀಕೆ ಟಿಪ್ಪಣಿ ಮಾಡದಿರಿ. ಇದರಿಂದ ತೊಂದರೆ ಎದುರಿಸಬೇಕಾಗುತ್ತದೆ.

ಮಿಥುನ:

ದಿನ ಭವಿಷ್ಯ

ಮಿಥುನ:- ಬಹು ದಿನಗಳ ನಿರೀಕ್ಷೆ ಫಲವಾಗಿ ಪ್ರಭಾವಿ ಜನರಿಂದ ನಿಮಗೆ ಅನುಕೂಲ ವಾಗುವುದು. ಮಕ್ಕಳು ವಿದ್ಯಾಭ್ಯಾಸದಲ್ಲಿ ಚುರುಕುತನ ತೋರುವರು. ವಿವಿಧ ಮೂಲಗಳಿಂದ ಹಣ ಬರುವ ಸಾಧ್ಯತೆ ಇದೆ.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ:- ದೂರದ ಜನರಿಂದ ಮಾತ್ರ ನಿಮಗೆ ಕಿರಿಕಿರಿಗಳು ಉಂಟಾಗುವುದಿಲ್ಲ. ನಿಮ್ಮ ಹತ್ತಿರದವರೂ ನಿಮ್ಮ ವಿರುದ್ಧ ಇಲ್ಲಸಲ್ಲದ ಆರೋಪವನ್ನು ಮಾಡುವುದರಿಂದ ಮನಸ್ಸಿಗೆ ಘಾಸಿಯಾಗುವುದು. ಇದಕ್ಕೆ ನೊಂದುಕೊಳ್ಳದೆ ಭಗವಂತನನ್ನು ಅನನ್ಯತೆಯಿಂದ ಪ್ರಾರ್ಥಿಸಿ.

ಸಿಂಹ:

ದಿನ ಭವಿಷ್ಯ

ಸಿಂಹ:- ವ್ಯಾಪಾರ ವ್ಯವಹಾರಗಳ ಒತ್ತಡವನ್ನು ಮನೆಯ ಒಳಗೂ ತಂದು ಕೂಗಾಡದಿರಿ. ಇದರಿಂದ ಮನೆಯ ವಾತಾವರಣ ಕಲುಷಿತವಾಗುವುದು ಮತ್ತು ಮನೆಯ ಇತರ ಸದಸ್ಯರ ಮನಸ್ಸಿಗೂ ನೋವಾಗುವುದು. ಗುರುರಾಯರ ನೆನೆದು ಮನಸ್ಸು ಹಗುರ ಮಾಡಿಕೊಳ್ಳಿ.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ದಿನದಿಂದ ದಿನಕ್ಕೆ ನಿಮ್ಮ ವ್ಯಕ್ತಿತ್ವ ಮತ್ತು ಕೀರ್ತಿ ಬೆಳೆಯುತ್ತಿದೆ. ಈ ಸಂಭ್ರಮದ ಸಮಯದಲ್ಲಿ ಜನರು ಕೇಳುವ ಪ್ರತಿಯೊಂದಕ್ಕೂ ಆಶ್ವಾಸನೆ ನೀಡದೆ ಆಯ್ತು, ಪರಿಶೀಲಿಸೋಣ ಎಂಬ ಮಾತುಗಳನ್ನು ಅಭ್ಯಾಸ ಮಾಡಿ.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ:- ಮಕ್ಕಳ ಉನ್ನತ ವ್ಯಾಸಂಗದ ಬಗ್ಗೆ ಚಿಂತಿಸಬೇಕಾದ ಸಮಯ. ಅದಕ್ಕೆ ಪೂರಕವಾದ ಹಣಕಾಸು ಹೊಂದಿಸಲು ಪರದಾಡುವಿರಿ. ದಿನ ನಿತ್ಯ ಸಾಮಾನುಗಳ ದರ ಏರಿಕೆ ಸಮಸ್ಯೆ ಅದರ ಜತೆಯಲ್ಲಿ ಅನಿವಾರ್ಯವಾಗಿ ಕೆಲವೊಂದು ಕೆಲಸಗಳನ್ನು ಮಾಡಲೇಬೇಕಿದೆ.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ಮಾತಾ ದುರ್ಗಾದೇವಿ ತನ್ನಲ್ಲಿ ಬಂದ ಶರಣಾಗತರನ್ನು ರಕ್ಷಿಸುವಳು. ಅಂತೆಯೆ ದುರ್ಗೆಯ ಸ್ಮರಣೆ ಮಾಡುತ್ತಾ ಕಾರ್ಯವನ್ನು ಆರಂಭ ಮಾಡಿ. ನೀವು ಊಹಿಸದೆ ಇದ್ದ ಪ್ರಸಂಗಗಳು ನಿಮ್ಮ ಪರವಾಗಿ ಆಗುವವು.

ಧನಸ್ಸು:

ದಿನ ಭವಿಷ್ಯ

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಧನಸ್ಸು:- ಜನ್ಮಸ್ಥ ಶನಿಯು ಆಲಸ್ಯವನ್ನು ಉಂಟು ಮಾಡುವನು. ತೂಕಡಿಸುವ ವ್ಯಕ್ತಿಗೆ ಹಾಸಿಗೆ ಹಾಸಿಕೊಟ್ಟಂತೆ ನಿಮ್ಮ ಆಲಸ್ಯ ಹೆಚ್ಚಿಸಲು ಕೆಲವು ಗೆಳೆಯರು ನಿಮ್ಮನ್ನು ಸುತ್ತುವರೆಯುವರು. ಹಾಗಾಗಿ ಮಹತ್ತರ ಕೆಲಸ ಅರ್ಧಕ್ಕೆ ನಿಲ್ಲುವುದು.

ಮಕರ:

ದಿನ ಭವಿಷ್ಯ

ಮಕರ:- ವಿನಾಕಾರಣ ನಿಮ್ಮ ಮೇಲೆ ಜಗಳ ಕಾಯುವ ಜನ, ನಿಮ್ಮನ್ನೆ ಜಗಳಗಂಟ ಎಂದು ದೂರುವ ಸಾಧ್ಯತೆ ಇದೆ. ಆದಷ್ಟು ಯಾರ ಜತೆಯಲ್ಲಿಯೂ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳದಿರಿ. ಕುಲದೇವರನ್ನು ಮನಸಾ ಸ್ಮರಿಸಿ.

ಕುಂಭ:

ದಿನ ಭವಿಷ್ಯ

ಕುಂಭ:- ನಯವಾದ ಮಾತುಗಳ ಮೂಲಕ ನಿಮ್ಮ ಅಂತರಂಗದ ವಿಚಾರಗಳನ್ನು ಬಹಿರಂಗ ಪಡಿಸಲು ಕೆಲವರು ಹವಣಿಸುವರು. ಇದರ ಸೂಕ್ಷ ್ಮತೆ ಅರಿತು ನೀವು ಅವರಿಗೆ ಸರಿಯಾದ ಬುದ್ಧಿ ಕಲಿಸುವಿರಿ.

ಮೀನ:

ದಿನ ಭವಿಷ್ಯ

ಮೀನ:- ವಿವಾಹ ಯೋಗ್ಯ ವಧು ವರರಿಗೆ ಕಂಕಣಭಾಗ್ಯ ಕೂಡಿಬರುವ ಸಂಭವವಿದೆ. ಆದರೆ ಅದಕ್ಕಾಗಿ ಕೆಲವು ಪೂಜಾ ವ್ರತಗಳನ್ನು ಅವಶ್ಯವಾಗಿ ಮಾಡಬೇಕಾಗುವುದು. ಒಟ್ಟಿನಲ್ಲಿ ಈ ದಿನ ಆಶಾದಾಯಕವಾಗಿರುತ್ತದೆ.

ದಿನ-ಭವಿಷ್ಯ: ಫೆಬ್ರವರಿ 6, 2019!!