ದಿನ ಭವಿಷ್ಯ: 6 ಅಕ್ಟೋಬರ್, 2018!!

0
639
ದಿನ ಭವಿಷ್ಯ

Astrology in kannada | kannada news

ದಿನ ಭವಿಷ್ಯ: 6 ಅಕ್ಟೋಬರ್, 2018!

ಮೇಷ:

ದಿನ ಭವಿಷ್ಯ

ನಿಮ್ಮ ದ್ವಂದ್ವ ನಿಲುವಿನ ಬಗ್ಗೆ ಕೆಲವರು ಕುಹಕವಾಡಬಹುದು. ಅದಕ್ಕಾಗಿ ನೀವು ತಲೆಕೆಡಿಸಿಕೊಳ್ಳಬೇಡಿ. ದೂರದ ಊರಿಗೆ ಪಯಣಿಸುವ ಯೋಗ ನಿಮ್ಮದಾಗುವುದು. ಸಂಗಾತಿಯನ್ನು ಪ್ರೀತಿಯಿಂದ ಕಾಣಿರಿ.

ವೃಷಭ:

ದಿನ ಭವಿಷ್ಯ

ಆರ್ಥಿಕ ವಿಚಾರಗಳಲ್ಲಿ ನಿರ್ಣಯ ಕೈಗೊಳ್ಳುವಾಗ ಸಂಗಾತಿಯ ಅಭಿಪ್ರಾಯವನ್ನು ಕಡೆಗಣಿಸಬೇಡಿ. ಆಸ್ತಿ ಸಂಬಂಧಿತ ಕೌಟುಂಬಿಕ ವಿಚಾರಗಳಿಗೆ ಹೆಚ್ಚು ಗಮನ ಕೊಡಬೇಕಾಗಿ ಬರಬಹುದು. ನೂತನ ಆಭರಣ ಖರೀದಿ ಮಾಡುವಿರಿ.

ಮಿಥುನ:

ದಿನ ಭವಿಷ್ಯ

ಎಲ್ಲರನ್ನೂ ಏಕಕಾಲಕ್ಕೆ ಸಂಭಾಳಿಸುವುದು ಕಷ್ಟಸಾಧ್ಯ. ಹಾಗಾಗಿ ಕೆಲವು ಕೆಲಸಗಳನ್ನು ಮನೆಯ ಸದಸ್ಯರಿಗೆ ಹಂಚಿಬಿಡಿರಿ. ಇಲ್ಲವೇ ಗೆಳೆಯರಿಗೆ ಕೆಲಸದ ಜವಾಬ್ದಾರಿಯನ್ನು ಹಂಚಿಕೊಡಿರಿ. ಆಗ ನೀವು ಆರಾಮದಿಂದ ಇರಬಹುದು.

Also read: ಮದುವೆಗೆ ಜಾತಕ ಪರೀಶಲನೆ ಎಷ್ಟು ಮುಖ್ಯ ಹಾಗೂ ಯಾವ ವಿಚಾರಗಳು ಸಂಬಂಧವನ್ನು ಗಟ್ಟಿ ಗೊಳಿಸುತ್ತವೆ ಅಂತ ತಿಳ್ಕೊಳ್ಳಿ..

ಕಟಕ:

ದಿನ ಭವಿಷ್ಯ

ಅಂದುಕೊಂಡಿದ್ದಕ್ಕಿಂತ ಸುಲಭವಾಗಿ ಕೆಲವು ಸಮಸ್ಯೆಗಳು ಬಗೆಹರಿಯುವುದರಿಂದ ನೆಮ್ಮದಿಯ ವಾತಾವರಣ ಕಂಡು ಬರುವುದು. ನಿಮ್ಮಿಂದಾಗಿ ಕೆಲವರ ಮುಖವಾಡ ಕಳಚಿ ಬೀಳುವುದು. ಇನ್ನೊಬ್ಬರನ್ನು ದೂರವಿರಿಸುವುದನ್ನು ಬಿಟ್ಟುಬಿಡಿರಿ.

ಸಿಂಹ:

ದಿನ ಭವಿಷ್ಯ

ಕೆಲಸಗಳಲ್ಲಿ ಇತರರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಿರಿ. ಇಲ್ಲದಿದ್ದರೆ ಕಷ್ಟವಾದೀತು. ಸ್ವೇಚ್ಛಾಪ್ರವೃತ್ತಿ ಸಲ್ಲದು. ಸೋಗಲಾಡಿ ಗೆಳೆಯರ ಬಗ್ಗೆ ಕೊಂಚ ಎಚ್ಚರವಿರಲಿ. ವೈಯಕ್ತಿಕ ವಿಚಾರಗಳಲ್ಲಿ ಗೌಪ್ಯತೆ ಕಾಪಾಡಿಕೊಳ್ಳುವುದು ಒಳ್ಳೆಯದು.

ಕನ್ಯಾ:

ದಿನ ಭವಿಷ್ಯ

ಈದಿನ ಸ್ನೇಹಿತರಿಂದ ಅನೇಕ ರೀತಿಯ ಅನುಕೂಲಗಳು ಕಂಡುಬರುವುದು. ಮುಖ್ಯವಾಗಿ ಆರ್ಥಿಕ ಸಹಾಯ ಒದಗಿ ಬರುವುದು. ಕುಟುಂಬದ ಹಿರಿಯರ ಅನಾರೋಗ್ಯ ಸ್ವಲ್ಪ ತಲೆಬಿಸಿ ಉಂಟುಮಾಡುವುದು. ವೃತ್ತಿಯಲ್ಲಿ ಒಳ್ಳೆಯ ಅವಕಾಶಗಳು ಕಂಡು ಬರುತ್ತವೆ.

Also read: ಈ ಎರಡು ರಾಶಿಯವರ ಪ್ರೇಮ ಜೀವನ ತುಂಬಾ ಸ್ಪೆಷಲ್ ಅಂತೆ, ನೀವು ಇದೆ ರಾಶಿಯವರ ನೋಡಿಕೊಳ್ಳಿ…

ತುಲಾ:

ದಿನ ಭವಿಷ್ಯ

ಕಿಸೆ ಭರ್ತಿಯಾದದ್ದೂ ಗೊತ್ತಾಗುವುದಿಲ್ಲ. ಖಾಲಿಯಾದದ್ದೂ ತಿಳಿಯುವುದಿಲ್ಲ. ಅಂತಹ ಸ್ಥಿತಿಯನ್ನು ಈದಿನ ನೀವು ಕಾಣುವಿರಿ. ಅನಗತ್ಯ ವಸ್ತುಗಳ ಖರೀದಿಗೆ ಮನಸು ಮಾಡದಿರುವುದು ಒಳ್ಳೆಯದು. ಬಹುದಿನಗಳ ಕನಸುಗಳು ಈಡೇರಲಿವೆ.

ವೃಶ್ಚಿಕ:

ದಿನ ಭವಿಷ್ಯ

ಜನರೊಡನೆ ವ್ಯವಹರಿಸುವಾಗ ಎಚ್ಚರ ಇರಲಿ. ಗುಟ್ಟಿನ ವಿಚಾರಗಳನ್ನು ರಟ್ಟು ಮಾಡಿಕೊಳ್ಳಬೇಡಿರಿ. ವ್ಯವಹಾರಿಕ ಜಾಣ್ಮೆ ಬೆಳೆಸಿಕೊಳ್ಳಿರಿ. ಕಚೇರಿಯಲ್ಲಿ ಕೆಲಸದ ಒತ್ತಡ ಕಾಡುವುದು. ತಲೆನೋವಿನಂತಹ ಕಿರಿಕಿರಿ ಬಗ್ಗೆ ಎಚ್ಚರ ಇರಲಿ.

ಧನಸ್ಸು:

ದಿನ ಭವಿಷ್ಯ

ಸಂಗಾತಿಯೊಂದಿಗೆ ಸಂತಸದ ವಿಷಯ ಹಂಚಿಕೊಳ್ಳುವಿರಿ. ಮಕ್ಕಳ ವಿದ್ಯಾಭ್ಯಾಸದಲ್ಲಿನ ಪ್ರಗತಿ ಖುಷಿಕೊಡುವುದು. ನೂತನ ಆಭರಣಗಳನ್ನು ಖರೀದಿಸುವಿರಿ. ಆಹಾರವನ್ನು ಅಥವಾ ಹಣ್ಣುಹಂಪಲುಗಳನ್ನು ಹಂಚಿ ತಿನ್ನಿರಿ.

Also read: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚಿನ್ನದ ಆಭರಣಗಳನ್ನು ಹೇಗೆ ಧರಿಸಬೇಕೆಂದು ನಿಮಗೆ ತಿಳಿದಿದೆಯೇ..?

ಮಕರ:

ದಿನ ಭವಿಷ್ಯ

ಪತ್ನಿಯ ಆರೋಗ್ಯದ ವಿಚಾರದಲ್ಲಿ ಜಾಗ್ರತೆ ಅಗತ್ಯ. ದಿಢೀರ್‌ ಅನಾರೋಗ್ಯದಿಂದ ಆಸ್ಪತ್ರೆ ಸೇರಬೇಕಾಗಿ ಬರಬಹುದು. ಸ್ವಉದ್ಯೋಗ ವ್ಯಾಪಾರ ನಡೆಸುತ್ತಿರುವವರಿಗೆ ಸ್ವಲ್ಪ ಹಿನ್ನಡೆ ಕಂಡುಬರುವುದು. ಪ್ರಮುಖ ಹೂಡಿಕೆದಾರರ ಬಗ್ಗೆ ಗಮನಹರಿಸಿರಿ.

ಕುಂಭ:

ದಿನ ಭವಿಷ್ಯ

ಈದಿನ ನಿಮ್ಮ ಮಾತಿನ ಮೇಲೆ ಹಿಡಿತವಿರಲಿ. ಸಮಯದ ಸದುಪಯೋಗ ಪಡಿಸಿಕೊಳ್ಳಲು ಪ್ರಯತ್ನಿಸಿ. ವಾಹನ ಚಲಾಯಿಸುವಾಗ ಎಚ್ಚರ ವಹಿಸಿರಿ. ಕಚೇರಿಯಲ್ಲಿ ಅಲ್ಪ ಕಿರಿಕಿರಿ ಆಗುವುದು. ವಿದೇಶಿ ಜನರ ಸಂಪರ್ಕ ಏರ್ಪಡುವುದು.

ಮೀನ:

ದಿನ ಭವಿಷ್ಯ

ಕನಸು ಕಾಣಬೇಕು. ಆದರೆ ಅದೇ ಜೀವನ ಆಗಲಾರದು. ವಾಸ್ತವದ ಕುರಿತಾಗಿಯೂ ಕೊಂಚ ಗಮನ ಕೊಡಿರಿ. ದೂರ ಪ್ರಯಾಣ ಮುಂದೂಡುವುದು ಒಳ್ಳೆಯದು. ಸ್ನೇಹಿತರೊಂದಿಗೆ ಇಂದಿನ ಸಮಯವನ್ನು ಕಳೆಯುವಿರಿ.

Also read: ಭಾರತದ ಪೂರ್ವಜರ ವಿವಾಹ ಪದ್ದತಿಯ ಹಿಂದೆ ಇರುವ ವೈಜ್ಞಾನಿಕ ಅರ್ಥ ಗೊತ್ತಾದ್ರೆ, ಹೆಮ್ಮೆ ಆಶ್ಚರ್ಯ ಎರಡೂ ಆಗುತ್ತೆ!!

ದಿನ ಭವಿಷ್ಯ: 6 ಅಕ್ಟೋಬರ್, 2018!