ದಿನ-ಭವಿಷ್ಯ: 7 ಮಾರ್ಚ್, 2019!!

0
278

Astrology in kannada | kannada news ದಿನ-ಭವಿಷ್ಯ: 7 ಮಾರ್ಚ್, 2019!!

ದಿನ-ಭವಿಷ್ಯ: 7 ಮಾರ್ಚ್, 2019!!

ಮೇಷ:

ದಿನ ಭವಿಷ್ಯ

ಮೇಷ:- ಕಚೇರಿಯಲ್ಲಿ ಸಹೋದ್ಯೋಗಿ ಮಿತ್ರರು ನಿಮ್ಮ ಸಾಧನೆಯನ್ನು ಅಭಿನಂದಿಸುವರು. ಆರ್ಥಿಕ ತೊಂದರೆ ಇರುವುದಿಲ್ಲ. ಅದು ನಿಮ್ಮ ಉದ್ಯೋಗದಲ್ಲಿ ಮಹತ್ತರ ಬದಲಾವಣೆಯನ್ನು ತಂದುಕೊಡುವುದು. ಹೊಸ ಸ್ನೇಹಿತರ ಪರಿಚಯವಾಗುವುದು. ಮಾತಿನಲ್ಲೇ ಬಂಡವಾಳ ಹುಟ್ಟಿಸುವ ಜಾಣತನ ನಿಮ್ಮಲ್ಲಿದೆ..

ವೃಷಭ:

ದಿನ ಭವಿಷ್ಯ

ವೃಷಭ:- ಮನೆ ಕಟ್ಟುವ ವಿಚಾರದಲ್ಲಿ ಸ್ನೇಹಿತರ ಸಲಹೆ ಸೂಚನೆಗಳನ್ನು ಪಾಲಿಸಿರಿ. ವೈವಾಹಿಕ ಜೀವನದಲ್ಲಿ ನೆಮ್ಮದಿಯನ್ನು ಕಾಣುವಿರಿ. ಉದ್ಯೋಗದಲ್ಲಿ ಅನಿರೀಕ್ಷಿತ ಬದಲಾವಣೆ ಅಥವಾ ವರ್ಗಾವಣೆ ಉಂಟಾಗುವುದು. ಚಿತ್ತ ಚಾಂಚಲ್ಯಕ್ಕೆ ಅವಕಾಶ ಕೊಡಬೇಡಿ. ಮಕ್ಕಳು ವಾಹನದಲ್ಲಿ ಸಂಚರಿಸುವಾಗ ರಸ್ತೆ ನಿಯಮಗಳನ್ನು ಪಾಲಿಸಿರಿ. ಸಾಮಾಜಿಕ ಸೇವೆಯಲ್ಲಿ ತಪ್ತಿ ದೊರೆಯುವುದು. ಆರೋಗ್ಯದ ಕಡೆ ಗಮನ ನೀಡಿ..

ಮಿಥುನ:

ದಿನ ಭವಿಷ್ಯ

ಮಿಥುನ:- ಸ್ನೇಹಿತರ ಕೆಲಸ ಕಾರ್ಯಗಳಿಗೆ ಸಹಾಯ ಹಸ್ತ ನೀಡುವಿರಿ. ನಿರೀಕ್ಷಿತ ಸಂತಸದ ಸುದ್ದಿಯು ನಿಮಗೆ ಆನಂದವನ್ನುಂಟು ಮಾಡಲಿದೆ. ಮನೆಯಲ್ಲಿನ ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ನಿಮ್ಮ ಪ್ರಯತ್ನ ಹಾಗೂ ಜಾಣತನ ಎರಡೂ ಕೂಡಾ ಫಲಪ್ರದವಾಗಲಿದೆ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಗಮನ ನೀಡಿರಿ.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ:- ದ್ವಂದ್ವನೀತಿ ಅನುಸರಿಸಿದರೆ ಆರ್ಥಿಕವಾಗಿ ದೊಡ್ಡ ಪೆಟ್ಟು ಬೀಳುವ ಸಾಧ್ಯತೆ ಇರುತ್ತದೆ. ಮಧ್ಯಸ್ಥಿಕೆ ವ್ಯವಹಾರದಲ್ಲಿ ಎಚ್ಚರಿಕೆಯಿಂದ ಇರುವುದು ಒಳಿತು. ಮಾನಸಿಕ ಚಂಚಲತೆಯಿಂದಾಗಿ ರಕ್ತಸಂಬಂಧಿಗಳು ಸಮಸ್ಯೆಯನ್ನು ಎದುರಿಸಬೇಕಾಗುವುದು.ಮಹತ್ತರ ಕೆಲಸ ಕಾರ್ಯಗಳನ್ನು ಮುಂದೂಡುವುದು ಒಳಿತು. ಶತ್ರುಗಳ ಬಾಧೆ ದೂರವಾಗುವುದು. ಆತ್ಮವಿಶ್ವಾಸದಿಂದ ಕಾರ್ಯ ನಿರ್ವಹಿಸಿರಿ.

ಸಿಂಹ:

ದಿನ ಭವಿಷ್ಯ

ಸಿಂಹ:- ನಿಮ್ಮ ಕಡೆಯಿಂದ ಉಂಟಾದ ಸಮಸ್ಯೆಗಳಿಗೆ ನೀವೇ ಖುದ್ದಾಗಿ ಪರಿಹಾರಗಳನ್ನು ಕಂಡುಕೊಳ್ಳಬೇಕಿದೆ. ಕಾರ್ಮಿಕ ವರ್ಗದವರಿಗೆ ಆರೋಗ್ಯ ಸಮಸ್ಯೆ ಎದುರಾಗುವುದು. ಪೂರ್ವ ತಯಾರಿ ಇಲ್ಲದೆ ಪ್ರಯಾಣ ಬೆಳೆಸುವುದು ಒಳ್ಳೆಯದಲ್ಲ. ಕೋರ್ಟು ಕಚೇರಿಯ ಕೆಲಸಗಳಲ್ಲಿ ಆಶಾದಾಯಕ ಬೆಳವಣಿಗೆ ಕಂಡು ಬರುವುದು. ಸರಿಯಾದ ಸಮಯಕ್ಕೆ ಆಹಾರ-ವಿಹಾರಗಳನ್ನು ರೂಢಿಸಿಕೊಳ್ಳುವುದು ಉತ್ತಮ.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ಹೊಸ ಮಿತ್ರರ ಪರಿಚಯದಿಂದ ಆತ್ಮವಿಶ್ವಾಸ ಹೆಚ್ಚಾಗಲಿದೆ. ಮನಸ್ಸು ಉಲ್ಲಾಸದಿಂದ ಇರುವುದು. ಮಕ್ಕಳ ನಡಾವಳಿಯಿಂದ ತೀವ್ರ ಮುಜುಗರಕ್ಕೆ ಒಳಗಾಗುವಿರಿ. ಬಂಧು ವರ್ಗದವರಿಂದ ಸಕಾಲಿಕ ನೆರವು ಸಿಗುವುದು. ವಿದ್ಯಾರ್ಥಿಗಳು ಚಾಂಚಲ್ಯ ಬಿಟ್ಟು ಅಧ್ಯಯನ ಮಾಡುವುದು ಒಳ್ಳೆಯದು.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ:- ಹಿರಿಯರ ಮೇಲೆ ನಿಮ್ಮ ಕೋಪ ತಾಪ ತೋರಬೇಡಿ. ಅವರ ಸಲಹೆ ಸೂಚನೆಗಳನ್ನು ಪಾಲಿಸಿದರೆ ನಿಮಗೆ ಲಾಭವುಂಟಾಗುವುದು. ಜೊತೆಗೆ ಅವು ನಿಮ್ಮ ಕಷ್ಟಗಳನ್ನು ಕಳೆಯುವವು. ವ್ಯವಹಾರದಲ್ಲಿ ಜಾಣ್ಮೆ ತೋರುವುದರಿಂದ ವಿಶೇಷ ಲಾಭ.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ದುಡಿಮೆಯೆ ದುಡ್ಡಿನ ತಾಯಿ ಎಂದು ಅರಿತಿರುವ ನಿಮ್ಮನ್ನು ಮೇಲಾಧಿಕಾರಿಗಳು ಕೊಂಡಾಡುವರು. ಜೀವನೋಪಾಯಕ್ಕೆ ಸ್ವಂತ ಉದ್ಯೋಗ ಮಾಡುವ ಬಗ್ಗೆ ಚಿಂತಿಸುವಿರಿ. ಕೆಲವೊಂದು ಕೆಟ್ಟ ಸ್ನೇಹಿತರ ಪ್ರಭಾವದಿಂದ ದುಶ್ಚಟಗಳಿಗೆ ದಾಸರಾಗುವ ಸಂದರ್ಭವಿದ್ದು ಈಬಗ್ಗೆ ಎಚ್ಚರಿಕೆಯಿಂದ ಇರುವುದು ಒಳ್ಳೆಯದು.

ಧನಸ್ಸು:

ದಿನ ಭವಿಷ್ಯ

ಧನುಸ್ಸು:- ಜೀವನದಲ್ಲಿ ಹೊಂದಾಣಿಕೆ ಅನಿವಾರ್ಯ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿರಿ. ಕೆಲವು ವಿಚಾರಗಳಲ್ಲಿ ವಿರೋಧಿಗಳ ಹುನ್ನಾರವನ್ನು ಅಲಕ್ಷಿಸುವುದು ಸರಿಯಲ್ಲ. ಪ್ರಸಂಗ ಬಂದಲ್ಲಿ ಸರಿಯಾದ ಪ್ರತಿಕ್ರಿಯೆಯನ್ನು ತೋರಿರಿ. ಆಂಜನೇಯ ಸ್ತೋತ್ರವನ್ನು ಪಠಿಸಿರಿ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಮಕರ:- ನಿಮ್ಮಲ್ಲಿರುವ ಅಸಹನಾ ಪ್ರವತ್ತಿಯನ್ನು ಬಿಡದಿದ್ದಲ್ಲಿ ನಿಷ್ಠುರಕ್ಕೆ ಒಳಗಾಗುವಿರಿ. ಕೆಲಸ ಕಾರ್ಯಗಳ ಒತ್ತಡದಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ವ್ಯವಹಾರದಲ್ಲಿ ಜಾಣತನದಿಂದ ಸಾಲ ತೀರುವಳಿ ಬಗ್ಗೆ ಒಂದು ಉತ್ತಮ ಯೋಜನೆಯನ್ನು ಹಾಕುವಿರಿ.

ಕುಂಭ:

ದಿನ ಭವಿಷ್ಯ

ಕುಂಭ:- ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸಗಳು ನಿಮ್ಮ ಅರಸಿಕೊಂಡು ಬರುವುದು. ಸ್ನೇಹಿತರೆಂದು ನಂಬಿದವರಿಂದಲೇ ಉಂಟಾದ ಸಮಸ್ಯೆಗಳು ನಿಮ್ಮನ್ನು ಚಿಂತೆಗೆ ಈಡುಮಾಡುವುದು. ವ್ಯಾಪಾರ-ವ್ಯವಹಾರದಲ್ಲಿ ಉತ್ತಮ ನಿರ್ವಹಣೆಯಿಂದ ಅಧಿಕ ಲಾಭವುಂಟಾಗುವುದು. ಆರೋಗ್ಯದ ಮೇಲೆ ಅಲಕ್ಷ್ಯ ಬೇಡ.

ಮೀನ:

ದಿನ ಭವಿಷ್ಯ

ಮೀನ:- ಯೋಜನಾಬದ್ಧ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯುವುದು. ಉದ್ಯೋಗ ನಿಮಿತ್ತ ಉತ್ತಮ ಅವಕಾಶಗಳು ಬರಲಿವೆ. ಪ್ರೇಮಿಗಳು ಕುಂಟು ನೆಪ ಹೇಳದೆ ಒಂದು ದಢ ನಿರ್ಧಾರಕ್ಕೆ ಬರುವುದು ಒಳ್ಳೆಯದು. ನೆರೆಹೊರೆಯವರೊಂದಿಗೆ ಉತ್ತಮ ಸಂಬಂಧ ಮೂಡಿಬರಲಿದೆ. ಮತ್ತೊಬ್ಬರ ವ್ಯವಹಾರದಲ್ಲಿ ಮೂಗು ತೂರಿಸಲು ಹೋಗಬೇಡಿ.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ-ಭವಿಷ್ಯ: 7 ಮಾರ್ಚ್, 2019!!