ದಿನ ಭವಿಷ್ಯ: 7 ಅಕ್ಟೋಬರ್, 2018!!

0
703

Astrology in kannada | kannada news | ದಿನ ಭವಿಷ್ಯ: 7 ಅಕ್ಟೋಬರ್, 2018!!

ಮೇಷ:

ಕೆಲವೊಮ್ಮೆ ಅತಿಯಾದ ಜಾಣತನ ನಿಮಗೆ ಮುಳುವಾಗುವ ಸಾಧ್ಯತೆ ಇದೆ. ಹಾಗಾಗಿ ಅನ್ಯರ ವಿಚಾರಧಾರೆಗಳನ್ನು ಲಕ್ಷ ್ಯಕೊಟ್ಟು ಆಲಿಸಿರಿ. ಇದರಿಂದ ಪತ್ನಿ ಪುತ್ರರಲ್ಲಿನ ಅನಗತ್ಯ ಸಂಶಯಗಳು ನಿವಾರಣೆ ಆಗುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

ವೃಷಭ:

ವ್ಯಾಪಾರ-ವ್ಯವಹಾರಗಳಲ್ಲಿ ಲಾಭಾಂಶ ಅಧಿಕವಾಗುವುದು. ಕೋರ್ಟು ಕಚೇರಿಯಲ್ಲಿನ ಕೇಸು ನಿಮ್ಮ ಪರವಾಗಿ ಆಗುವುದು. ಸರಕಾರದ ವತಿಯಿಂದ ಬರಬೇಕಾದ ಹಣ ಕೈ ಸೇರುವುದರಿಂದ ಹಣಕಾಸು ಪರಿಸ್ಥಿತಿ ಉತ್ತಮಗೊಳ್ಳುವುದು.

ಮಿಥುನ:

ದುಂದು ವೆಚ್ಚ ಕಡಿಮೆ ಮಾಡುವುದು ಸೂಕ್ತ. ಹಣದ ವ್ಯವಹಾರ ಗುಪ್ತವಾಗಿರಲಿ. ಅದರಿಂದ ನೀವು ಅಂದುಕೊಂಡ ಎಲ್ಲ ಕಾರ್ಯಗಳಲ್ಲೂ ಜಯಶೀಲರಾಗುವಿರಿ. ಮನೆಯಲ್ಲಿನ ಹಿರಿಯರ ಆಶೀರ್ವಾದ ಪಡೆಯಿರಿ. ಆರೋಗ್ಯ ಉತ್ತಮವಾಗಿರುವುದು.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ನಿಮ್ಮ ಅದೃಷ್ಟವನ್ನು ಮುಂದೆ ತಳ್ಳಲು ಇಂದು ಸೂಕ್ತ ದಿನವಲ್ಲ. ತಾಳ್ಮೆಯಿಂದ ಕಾರ್ಯದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿರಿ. ಯಶಸ್ಸು ಎಂಬುದು ನೆರಳಿನಂತೆ ನಿಮ್ಮನ್ನು ಹಿಂಬಾಲಿಸಿಕೊಂಡು ಬರುವುದು. ಆರ್ಥಿಕ ಸದೃಢತೆ ಇರುವುದು.

ಸಿಂಹ:

ಸಂಕಲ್ಪಿತ ಕಾರ್ಯ ಯೋಜನೆಗಳಿಗೆ ಅಡೆತಡೆ ಉಂಟಾಗುವ ಸಾಧ್ಯತೆ. ಹಣಕಾಸಿನ ಪರಿಸ್ಥಿತಿ ಬಿಗಡಾಯಿಸುವುದು. ಗುರು-ಹಿರಿಯರ ಜತೆ ವಿರೋಧ ಸಲ್ಲದು. ಸ್ನೇಹಿತರು ನಿಮ್ಮನ್ನು ಅಪಹಾಸ್ಯ ಮಾಡುವ ಸಂದರ್ಭವಿರುತ್ತದೆ.

ಕನ್ಯಾ:

ಗೃಹ ಕೈಗಾರಿಕೆಗೆ ಪೂರಕ ವಾತಾವರಣ. ವ್ಯಾಪಾರ ವ್ಯವಹಾರಗಳಲ್ಲಿ ಲಾಭಾಂಶ ಹೆಚ್ಚಾಗಿ ಹಣಕಾಸಿನ ಸ್ಥಿತಿ ಸುಧಾರಿಸುವುದು. ಮನೆಯಲ್ಲಿ ಮಂಗಳ ಕಾರ್ಯಗಳ ಚಿಂತನೆ ನಡೆಯುವುದು. ಬಂಧು ಬಾಂಧವರು ಇಷ್ಟಮಿತ್ರರು ನಿಮ್ಮ ಕಾರ್ಯವನ್ನು ಶ್ಲಾಘಿಸುವರು.

ತುಲಾ:

ಮಹತ್ತರ ಕಾರ್ಯ ನಡೆಯುವಾಗಲೇ ಕರೆಂಟು ಕೈ ಕೊಡುವಂತೆ ಈದಿನ ಏಕೋ ಬುದ್ಧಿಗೆ ಮಂಕು ಕವಿದಂತೆ ಆಗುವುದು. ಯಾವುದೂ ಸಮಯಕ್ಕೆ ಸರಿಯಾಗಿ ನೆನಪಿಗೆ ಬಾರದೆ ಕೆಲಸ ಕಾರ್ಯಗಳು ಅರ್ಧಕ್ಕೆ ನಿಲ್ಲುವ ಸಂದರ್ಭ. ಆಂಜನೇಯ ಸ್ತೋತ್ರ ಪಠಿಸಿರಿ.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ವೃಶ್ಚಿಕ:

ಸಂಪಾದನೆಗಿಂತ ವೆಚ್ಚ ಹೆಚ್ಚಾಗುವುದು. ನೆರೆಹೊರೆಯವರ ವ್ಯಾಜ್ಯವನ್ನು ತೀರಿಸಲು ಹೋಗಿ ಅವಮಾನಿತರಾಗುವಿರಿ. ಹಾಗಾಗಿ ಊರ ಉಸಾಬರಿ ನನಗೇಕೆ ಎಂದು ಸುಮ್ಮನಿದ್ದು ಬಿಡಿ. ಸಂಜೆಯ ವೇಳೆಗೆ ಮನಸ್ಸು ಪ್ರಶಾಂತತೆಯಿಂದ ಕೂಡಿರುವುದು.

ಧನಸ್ಸು:

ಇಂದು ಉತ್ಸಾಹ ಮತ್ತು ಆನಂದವನ್ನು ಹೊಂದುವಿರಿ. ಜೀವನದ ಮತ್ತು ವೃತ್ತಿ ಜೀವನದಲ್ಲಿನ ಆಕಾಂಕ್ಷೆಗಳು ಈಡೇರುವುದು. ಹಣಕಾಸು ಕೂಡ ವಿವಿಧ ಮೂಲಗಳಿಂದ ಬರುವ ಸಾಧ್ಯತೆ ಇದ್ದು, ಸಂತಸದ ಕ್ಷಣಗಳನ್ನು ಕಳೆಯುವಿರಿ.

ಮಕರ:

ವ್ಯಾಪಾರ ವ್ಯವಹಾರದಲ್ಲಿ ಪರರ ಪ್ರೋತ್ಸಾಹ ದೊರೆಯುವುದರಿಂದ ನಿಮ್ಮ ವ್ಯಾಪಾರವನ್ನು ವಿಸ್ತರಿಸಿಕೊಳ್ಳುವತ್ತ ಗಮನ ಹರಿಸುವಿರಿ. ನಿಮ್ಮ ಬ್ಯಾಂಕ್‌ ಬ್ಯಾಲೆನ್ಸ್‌ ಹೆಚ್ಚಾಗುವುದು. ಕೌಟುಂಬಿಕವಾಗಿ ಮಡದಿ ಮಕ್ಕಳು ಸಂಭ್ರಮಿಸುವರು.

ಕುಂಭ:

ನಿಮಗೆ ಈದಿನ ಬರುವ ಹಣವನ್ನು ಷೇರು ವ್ಯವಹಾರದಲ್ಲಿ ತೊಡಗಿಸದೆ ಬ್ಯಾಂಕಿಗೆ ಜಮಾ ಮಾಡುವುದರಿಂದ ಒಳಿತಾಗುವುದು. ಕೆಲವು ಪ್ರಮುಖ ಕಾರ್ಯಗಳು ಪೂರ್ಣಗೊಳ್ಳಲಿವೆ. ಮಾನಸಿಕ ನಿರಾಳತೆ ಹೊಂದುವಿರಿ.

ಮೀನ:

Meena1

ಮನೆಗೆ ನೂತನ ಸದಸ್ಯರ ಆಗಮನವು ಮನಸ್ಸಿಗೆ ಹರ್ಷವನ್ನುಂಟು ಮಾಡುವುದು. ಬಾಳಸಂಗಾತಿ ಮತ್ತು ಮಕ್ಕಳು ನಿಮಗೆ ಸಂತಸ ನೀಡಲಿದ್ದಾರೆ. ನಿಮ್ಮ ಜನಪ್ರಿಯತೆ ಹೆಚ್ಚಾಗುವ ಸಂದರ್ಭವಿರುವುದು.

Also read: ಅಧಿಕ ಜ್ಯೇಷ್ಠ ಮಾಸ ಶುರುವಾಗಿದೆ..! ಹಾಗಾದರೆ ಈ ಮಾಸದ ಮಹತ್ವ ಮತ್ತು ವಿಶೇಷತೆಗಳ ಬಗ್ಗೆ ಇಲ್ಲಿದೇ ಸಂಪೂರ್ಣ ಮಾಹಿತಿ..

ದಿನ ಭವಿಷ್ಯ: 7 ಅಕ್ಟೋಬರ್, 2018!!