ದಿನ ಭವಿಷ್ಯ: 9 ಜುಲೈ, 2018!!

0
466
ದಿನ ಭವಿಷ್ಯ

Astrology in kannada | kannada news

ದಿನ ಭವಿಷ್ಯ: 9 ಜುಲೈ, 2018!!

ಮೇಷ:

ದಿನ ಭವಿಷ್ಯ

ಕೋರ್ಟು, ಕಚೇರಿ ಕೆಲಸಗಳಲ್ಲಿ ಹಿನ್ನಡೆ ತೋರುವ ಸಾಧ್ಯತೆ ಇದೆ. ಈ ಬಗ್ಗೆ ನಿಮ್ಮ ಕೇಸನ್ನು ನಡೆಸುತ್ತಿರುವ ವಕೀಲರನ್ನೇ ಬದಲಿಸಬೇಕೆಂಬ ಇಚ್ಛೆ ಮನದಲ್ಲಿ ಸುಳಿಯುವುದು. ಆದರೆ ಹಾಗೆ ಮಾಡುವುದು ಈ ಹಂತದಲ್ಲಿ ಸರಿಯಲ್ಲ.

ವೃಷಭ:

ದಿನ ಭವಿಷ್ಯ

ವೃಥಾ ಕಾಡುಹರಟೆಯಿಂದ ಸಮಯ ಕಳೆಯಲು ಸೂಕ್ತ ಸಮಯವಲ್ಲ. ಮೈತುಂಬಾ ಕೆಲಸಗಳು ಇದ್ದು, ಯಾವ ಕೆಲಸ ಮಾಡಲು ಹೋದರೂ ಟೀಕೆಗೆ ಗುರಿ ಆಗುವಿರಿ. ಆದರೆ ಬಂದದ್ದೆಲ್ಲಾ ಬರಲಿ ಗೋವಿಂದನ ದಯೆ ಇರಲಿ ಎಂದು ಭಾವಿಸಿರಿ.

ಮಿಥುನ:

ದಿನ ಭವಿಷ್ಯ

ಗುರುಕಾರುಣ್ಯದಿಂದ ಪಾಪರಾಶಿಗಳು ಸುಟ್ಟುಹೋಗುವುದು. ದೇಹದಲ್ಲಿ ನವಚೈತನ್ಯ ತುಂಬುವುದು. ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸುವಿರಿ. ಲೌಕಿಕ ಕಾರ್ಯ ಮಾಡಲು ಬಿಡುವು ಸಿಗದೆ ಹೋಗುವ ಸಾಧ್ಯತೆ ಇರುವುದು.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕುಟುಂಬದ ಜನರೊಂದಿಗೆ ಬೆರೆತು ಉಲ್ಲಾಸದ ದಿನವನ್ನಾಗಿ ಪರಿವರ್ತಿಸಿ ಕೊಳ್ಳುವಿರಿ. ಮಡದಿ, ಮಕ್ಕಳು ನಿಮ್ಮ ಸಂತೋಷದಲ್ಲಿ ಪಾಲ್ಗೊಳ್ಳುವರು. ಹಣಕಾಸು ಅಲ್ಪಮಟ್ಟಿಗೆ ಕೈಬಿಡಬಹುದು. ಆ ಬಗ್ಗೆ ಯೋಚಿಸದೆ ಸಂತೋಷವನ್ನು ಹೊಂದುವಿರಿ.

ಸಿಂಹ:

ದಿನ ಭವಿಷ್ಯ

ದೂರ ದೂರದ ಊರಿನ ಪ್ರಯಾಣದಿಂದ ಅನೇಕ ಉತ್ತಮ ಅವಕಾಶಗಳು ಲಭ್ಯವಾಗಲಿದೆ. ಧೈರ್ಯವನ್ನು ಕಳೆದುಕೊಳ್ಳಬೇಡಿ. ದೈವಕೃಪೆಯಿಂದ ಎಲ್ಲವೂ ಒಳಿತಾಗಲಿದೆ. ಕುಲದೇವತಾ ಪ್ರಾರ್ಥನೆ ಮಾಡಿ.

ಕನ್ಯಾ:

ದಿನ ಭವಿಷ್ಯ

ಮನೆಗೆದ್ದು ಮಾರುಗೆಲ್ಲು ಎಂದರು ಹಿರಿಯರು. ಹಾಗಾಗಿ ಮನೆಯ ವಾತಾವರಣವನ್ನು ನಿರ್ಲಕ್ಷಿಸದಿರಿ. ಮಗ ಅಥವಾ ಮಗಳಿನ ವಿದ್ಯಾಭ್ಯಾಸದ ವಿಚಾರವಾಗಿ ಸ್ವಲ್ಪ ಗಮನಹರಿಸಿ. ಸಾಧ್ಯವಾದರೆ ಅವರ ಓದಿಗೆ ಸಹಾಯ ಮಾಡಿ.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ಮಾತು ಬೆಳ್ಳಿ ಮೌನ ಬಂಗಾರ ಎನ್ನುವ ಮಾತಿದೆ. ಹಾಗಾಗಿ ನೀವಾಡುವ ಮಾತುಗಳು ಹಿತಮಿತವಾಗಿರಲಿ. ಸೂಜಿಗೆ ಮುತ್ತು ಕೊಟ್ಟಂತೆ ನಿಮ್ಮ ಮಾತುಗಳು ಹೊರಗೆ ಬರಲಿ. ಇದರಿಂದ ಗೌರವ ಘನತೆ ನಿಮ್ಮದಾಗುವುದು.

ವೃಶ್ಚಿಕ:

ದಿನ ಭವಿಷ್ಯ

ವೃಥಾ ಸಂಯಮ ಕಳೆದುಕೊಳ್ಳಬೇಡಿ. ಗುರು, ಹಿರಿಯರು ತೋರಿದ ಮಾರ್ಗದಲ್ಲಿ ನಡೆಯಿರಿ. ನಿಮ್ಮ ಬಾಲ್ಯ ಸ್ನೇಹಿತರ ಭೇಟಿ ಸಂಭವ ಇದೆ. ಹಣಕಾಸಿನ ವಿಷಯದಲ್ಲಿ ಜಾಗ್ರತೆ ಇರಲಿ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ.

ಧನಸ್ಸು:

ದಿನ ಭವಿಷ್ಯ

ನಿಮ್ಮ ಸನಿಹದ ಜನರಿಂದ ಪ್ರಶಂಸೆಗೆ ದಾರಿ ಇರುವುದು. ನಿಮ್ಮ ಸೌಮ್ಯ ಸ್ವಭಾವದಿಂದಾಗಿ ನೀವು ಎಲ್ಲರ ಗಮನ ಸೆಳೆಯುವಿರಿ. ನಿಮ್ಮಲ್ಲಿ ಮೂಡಿದ ಹೊಸ ವಿಚಾರವನ್ನು ಗೆಳೆಯರ ಮುಂದೆ ಪ್ರಕಟಗೊಳಿಸುವಿರಿ.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

‘ನಂಬಿ ಕೆಟ್ಟವರಿಲ್ಲವೋ ರಂಗಯ್ಯನ’ ಎಂದು ದಾಸರು ಹಾಡಿದ್ದಾರೆ. ಅಂತೆಯೇ ಬಲವಾಗಿ ನಿಮ್ಮ ಇಷ್ಟದೈವವನ್ನು ನೆನೆಯಿರಿ. ಇದರಿಂದ ಕೆಲಸ ಕಾರ್ಯಗಳು ಸುಗಮವಾಗಿ ಆಗುವುದು.

ಕುಂಭ:

ದಿನ ಭವಿಷ್ಯ

ಮಾಡಿ ಮುಗಿಸಲೇಬೇಕಾದ ಕೆಲಸವನ್ನು ಆದಷ್ಟು ಜಾಗ್ರತೆಯಾಗಿ ಮುಗಿಸಿರಿ. ಏಕೆಂದರೆ ಮನೆಗೆ ಬಂದು ಹೋಗುವ ಬಂಧುಗಳ ಸಂಖ್ಯೆ ಅಧಿಕವಾಗಿರುತ್ತದೆ. ಅವರ ಇಷ್ಟನಿಷ್ಟಗಳನ್ನು ಪೂರೈಸುವುದರಲ್ಲಿಯೇ ದಿನ ಕಳೆದು ಹೋಗುವುದು.

ಮೀನ:

ದಿನ ಭವಿಷ್ಯ

ಕೆಲಸದ ಒತ್ತಡದ ದೆಸೆಯಿಂದ ಗೊಂದಲದ ಗೂಡಾಗಿರುವ ಮನಸ್ಸಿನಲ್ಲಿ ಯಾವ ಕೆಲಸವನ್ನು ಮೊದಲು ಮುಗಿಸಬೇಕು ಎಂದು ಚಿಂತಿಸುವಿರಿ. ಮೊದಲು ಮಾಡಿಕೊಂಡ ಒಪ್ಪಂದದ ಕೆಲಸವನ್ನು ಬೇಗನೆ ಮುಗಿಸಿ ಮತ್ತೊಂದು ಕೆಲಸವನ್ನು ಕೈಗೆತ್ತಿಕೊಳ್ಳಿ.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ ಭವಿಷ್ಯ: 9 ಜುಲೈ, 2018!!