ದಿನ ಭವಿಷ್ಯ: 9 ಸೆಪ್ಟೆಂಬರ್, 2018!!

0
543

ದಿನ ಭವಿಷ್ಯ: 9 ಸೆಪ್ಟೆಂಬರ್, 2018!!

Astrology in kannada | kannada news

ಮೇಷ:

ದಿನ ಭವಿಷ್ಯ

ಮೇಷ:- ಕೆಲಸದ ಸ್ಥಳದಲ್ಲಿ ಹೆಚ್ಚಿನ ಒತ್ತಡವಿರುತ್ತದೆ. ಆದರೆ ನಿಮ್ಮ ಕೈಕೆಳಗಿನ ಕೆಲಸಗಾರರು ಸಕಾಲದಲ್ಲಿ ಕೆಲಸವನ್ನು ಮುಗಿಸಿ ನಿಮ್ಮ ಹೆಚ್ಚಿನ ಒತ್ತಡವನ್ನು ಕಡಿಮೆ ಮಾಡುವರು. ಮನೋನಿಯಾಮಕ ರುದ್ರ ದೇವರನ್ನು ಭಜಿಸಿರಿ.

ವೃಷಭ:

ದಿನ ಭವಿಷ್ಯ

ವೃಷಭ:- ಸ್ವಾವಲಂಬನೆಯ ಜೀವನವನ್ನು ನಡೆಸುವುದು ನಿಮ್ಮ ಉದ್ದೇಶವಾಗಿರುತ್ತದೆ. ಹಂಗಿನ ಅರಮನೆಗಿಂತ ಹಿಂಗದ ಗುಡಿ ಲೇಸು ಎಂಬಂತೆ ನಿಮ್ಮ ವಿಚಾರಧಾರೆಯನ್ನು ಎಲ್ಲರೂ ಗೌರವಿಸುವರು.

ಮಿಥುನ:

ದಿನ ಭವಿಷ್ಯ

ಮಿಥುನ:- ಇತರೆಯವರಿಗಿಂತ ಭಿನ್ನವಾಗಿ ಚಿಂತಿಸುವ ನೀವು ಸಮಾಜದಲ್ಲಿ ಗುರುತಿಸಲ್ಪಡುವಿರಿ. ಎದುರಾಳಿಗಳನ್ನು ಮಾತಿನ ವರಸೆಯಿಂದ ಗೆಲ್ಲುವಿರಿ. ಹಣಕಾಸು ಕೂಡಾ ಒದಗಿ ಬರುವುದು.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ:- ನೆರೆಮನೆಯ ಹಿರಿಯರೊಬ್ಬರು ನಿಮಗೆ ಸಹಾಯ ಮಾಡುವ ಸಾಧ್ಯತೆಯಿದೆ. ನೀವು ಕೂಡಾ ಅವರ ಅನುಭವವನ್ನು ತಿಳಿದು ಆ ಮಾರ್ಗದಲ್ಲಿ ನಡೆದಾಗ ಹೆಚ್ಚಿನ ಯಶಸ್ಸನ್ನು ಹೊಂದುವಿರಿ. ಮಕ್ಕಳ ವಿಷಯದಲ್ಲಿ ತುಸು ಜಾಗ್ರತೆ ವಹಿಸಿರಿ.

ಸಿಂಹ:

ದಿನ ಭವಿಷ್ಯ

ಸಿಂಹ:- ಯೋಜನಾಬದ್ಧವಾದ ಕಾರ್ಯದಲ್ಲಿ ಯಶಸ್ಸು ದೊರೆಯುವುದು. ಮಹತ್ತರವಾದ ಕಾರ್ಯವನ್ನು ಮಾಡಿ ಮುಗಿಸಿದ ಬಗ್ಗೆ ಸಮಾಜದ ಜನತೆಯು ನಿಮಗೆ ಗೌರವ ಮತ್ತು ಔತಣಕೂಟವನ್ನು ಏರ್ಪಡಿಸುವ ಸಾಧ್ಯತೆ ಇರುತ್ತದೆ.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ಮುಟ್ಟಿದರೆ ಮುನಿ ಎಂಬ ಸಿಟ್ಟಿನ ಗುಣವನ್ನು ಬಿಟ್ಟುಬಿಡಿ. ನಿಮ್ಮ ಈ ಸ್ವಭಾವದಿಂದಲೇ ಕೆಲವರು ನಿಮ್ಮ ಮುಂದೆ ವಿಷಯವನ್ನು ಪ್ರಸ್ತಾಪಿಸಲು ಹಿಂಜರಿಯುವರು. ಮುಖದಲ್ಲಿ ನಗುವನ್ನು ತಂದುಕೊಂಡು ಮಾತನಾಡಿದಲ್ಲಿ ಹೊಸ ವಿಷಯ ತಿಳಿಯುವಿರಿ.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ:- ಸಾಡೇಸಾತ್‌ ಶನಿಯ ಕಾಡಾಟದಿಂದ ಮುಕ್ತರಾಗಿದ್ದರೂ ಗುರುವಿನ ಬೆಂಬಲವಿಲ್ಲದೆ ಕೆಲಸ ಕಾರ್ಯಗಳಲ್ಲಿ ಹಣದ ಕೊರತೆಯು ಕಂಡು ಬರುವುದು. ನೀವು ನಿಮ್ಮ ಮಾತಿಗೆ ಬದ್ಧರಾದರೆ ಹಲವು ಜನರು ನಿಮಗೆ ಸಹಾಯ ಮಾಡುವರು.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ಮನಬಂದಂತೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಸುಲಭ. ಆದರೆ ಅವುಗಳನ್ನು ಪೂರ್ಣಗೊಳಿಸುವಲ್ಲಿ ವಿಫಲರಾಗುವಿರಿ. ಈ ಬಗ್ಗೆ ಅನುಭಾವಿಗಳ ಸಹಾಯ ಪಡೆಯುವುದು ಒಳ್ಳೆಯದು. ಹಣಕಾಸಿನ ವಿಷಯದಲ್ಲಿ ಕೊರತೆಯಿಲ್ಲ.

ಧನಸ್ಸು:

ದಿನ ಭವಿಷ್ಯ

ಧನಸ್ಸು:- ನಡೆಯುವ ವ್ಯಕ್ತಿಯು ಎಡವುವಂತೆ ಮಾಡುವುದೇ ಶನಿ ಕಾಡಾಟದ ಕುರುಹು ಆಗಿರುತ್ತದೆ. ಆದರೆ ಅದರಿಂದ ವಿಚಲಿತರಾಗದೆ ಮುಂದೆ ಹೆಜ್ಜೆ ಹಾಕಿರಿ. ದಶರಥ ಕೃತ ಶನಿ ಸ್ತೋತ್ರವನ್ನು ಪಠಿಸಿರಿ.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಮಕರ:– ಸಮುದ್ರ ನೆಂಟಸ್ತನ ಉಪ್ಪಿಗೆ ಬಡತನ ಎಂಬಂತೆ ಸಮಾಜದಲ್ಲಿ ಗಣ್ಯವ್ಯಕ್ತಿಗಳ ಪರಿಚಯ, ಒಡನಾಟವಿದ್ದರೂ ಅವರಿಂದ ಕಿಂಚಿತ್‌ ನಿಮಗೆ ಸಹಾಯ ದೊರೆಯದೆ ಇರುವುದರಿಂದ ಮಾನಸಿಕ ಕಿರಿಕಿರಿ ಎನಿಸುವುದು.

ಕುಂಭ:

ದಿನ ಭವಿಷ್ಯ

ಕುಂಭ:- ಈ ದಿನ ನಿಮ್ಮ ಪಾಲಿನ ಕರ್ತವ್ಯವನ್ನು ಮಾಡಬೇಕು. ಆದರೆ ಆ ಬಗ್ಗೆ ಪ್ರತಿಫಲವನ್ನು ಅಪೇಕ್ಷಿಸುವಂತಿಲ್ಲ. ಆದಾಗ್ಯೂ ಕೊನೆಗೆ ನಿಮಗೆ ಸಲ್ಲಬೇಕಾದ ಎಲ್ಲಾ ಸವಲತ್ತುಗಳು ನಿಧಾನ ರೀತಿಯಾಗಿ ನಿಮ್ಮನ್ನು ಸೇರುವುದು.

ಮೀನ:

ದಿನ ಭವಿಷ್ಯ

ಮೀನ:- ‘ಆರೋಗ್ಯಂ ಭಾಸ್ಕರಾತ್‌ ಚೇತ್‌’ ಎನ್ನುವಂತೆ ಉತ್ತಮ ಆರೋಗ್ಯ ರಕ್ಷ ಣೆಗಾಗಿ ಸೂರ್ಯನಾರಾಯಣನನ್ನು ಪ್ರಾರ್ಥಿಸಿರಿ. ಸಾಧ್ಯವಾದರೆ ಈ ದಿನ ಒಪ್ಪತ್ತು ಊಟ ಮಾಡಿರಿ. ಬೌದ್ಧಿಕ ಹೆಜ್ಜೆಗಳಿಂದ ಸಿದ್ದಿಯನ್ನು ಪಡೆಯುವಿರಿ.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ ಭವಿಷ್ಯ: 9 ಸೆಪ್ಟೆಂಬರ್, 2018!!