ಈ ವಜ್ರ ವ್ಯಾಪಾರಿ ತನ್ನ ನೌಕರರಿಗೆ ಎಂಥಾ ದುಬಾರಿ ಗಿಫ಼್ಟ್ ಕೊಟ್ಟ ಗೊತ್ತಾ??

0
1535

ಸೂರತ್ ಮೂಲದ ಡೈಮೊಂಡ್ ವ್ಯಾಪಾರಿಯೊಬ್ಬರು ಬರೋಬ್ಬರಿ 51 ಕೋಟಿ ರೂಗಳನ್ನು ಬೋನಸ್ ರೂಪದಲ್ಲಿ ತನ್ನ ಕಂಪನಿಯ ಉದ್ಯೋಗಿಗಳಿಗೆ ನೀಡಿದ್ದಾರೆ. ನಂಬಿದರೆ ನಂಬಿ ಬಿಟ್ಟರೆ ಬಿಡಿ, ಸರಿ ಸುಮಾರು 51 ಕೋಟಿ ವೆಚ್ಚದಲ್ಲಿ 1260 ಕಾರುಗಳನ್ನು ಮತ್ತು 400 ಮನೆಗಳನ್ನು ಖರೀದಿಸಿರುವ ಸಾವಜಿ ಧೋಲಾಕಿಯಾ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕಂಪನಿಯ ‘ಉತ್ತಮ ಕೆಲಸ’ ಗಾರರನ್ನು ಗುರುತಿಸಿ ಈ ಕೊಡುಗೆಗಳನ್ನು ನೀಡಿದ್ದಾರೆ.

ಧೋಲಾಕಿಯಾ ಅವರ ಹರೇ ಕೃಷ್ಣಾ ಎಕ್ಸ್ ಪೋರ್ಟ್ಸ್ ಸಂಸ್ಥೆ ತನ್ನ ಉದ್ಯೋಗಿಗಳಿಗಾಗಿ ಈ ವರ್ಷದ ದೀಪಾವಳಿಗೆ ಬರೋಬ್ಬರಿ 51 ಕೋಟಿ ರೂಪಾಯಿಯಷ್ಟು ಖರ್ಚು ಮಾಡಿದೆ. ಸುಮಾರು 1,716 ಉದ್ಯೋಗಿಗಳು ಕಂಪನಿಯ ಉತ್ತಮ ಕೆಲಸಗಾರರು ಎಂದು ಹೆಸರಿಸಲಾಗಿತ್ತಂತೆ.ವರುಷಕೊಮ್ಮೆ ತಮ್ಮ ಉದ್ಯೋಗಿಗಳಿಗೆ ಬೋನಸ್, ಗಿಫ್ಟ್ ಕೊಡುವುದು ಸಂಪ್ರದಾಯ ಆದರೆ ಈ ಕಲಿಯುಗದ ಈ ಕೊಡುಗೈ ದಾನಿ ಸೂರತ್ ನ ಕೋಟ್ಯಧೀಶ್ವರ ವಜ್ರ ವ್ಯಾಪಾರಿ ತನ್ನ ಉದ್ಯೋಗಿಗಳಿಗೆ ಈ ಬಾರಿ 400 ಫ್ಲ್ಯಾಟ್ಸ್ ಹಾಗೂ 1260 ಕಾರುಗಳನ್ನು ದೀಪಾವಳಿ ಬೋನಸ್ ಆಗಿ ನೀಡಿದ್ದಾರೆ!

ಕಳೆದ 5 ವರ್ಷಗಳಿಂದ ಈ ಬೋನಸ್ ಪದತ್ತಿಯನ್ನು ನೆಡೆಸಿಕೊಂಡು ಬರುತ್ತಿರುವ ಧೋಲಾಕಿಯಾ ಕಳೆದ ವರ್ಷವೂ ಕೂಡ ಮಾತು ಕೊಟ್ಟಂತೆ ಉತ್ತಮ ಕೆಲಸ ಮಾಡಿದವರಿಗೆ 491 ಕಾರುಗಳನ್ನು ಮತ್ತು 200 ಫ್ಲಾಟ್ ಗಳನ್ನು ಬೋನಸ್ ರೂಪದಲ್ಲಿ ನೀಡಿದ್ದರು.

ಧೋಲಾಕಿಯಾ ಹಿನ್ನೆಲೆ :

ಧೋಲಾಕಿಯಾ ಗುಜರಾತ್ ರಾಜ್ಯದ ಅಂರೇಲಿ ಜಿಲ್ಲೆಯ ಒಂದು ಪುಟ್ಟ ಗ್ರಾಮದಲ್ಲಿ ಬಡ ಕುಟುಂಬದಲ್ಲಿ ಜನಿಸಿದರೂ ಕೂಡ ತನ್ನ ಪರಿಶ್ರಮದಿಂದ ಮೇಲೆ ಬಂದವರು, ಧೋಲಾಕಿಯಾ ತನ್ನ ಚಿಕ್ಕಪ್ಪನ ಬಳಿ ಸಾಲ ಮಾಡಿ ತಂದ ಹಣದಿಂದ ವ್ಯವಹಾರ ಮಾಡುವ ಯೋಜನೆ ಕೈ ಹಾಕಿದರು. ತನ್ನ ಸತತ ಪರಿಶ್ರಮ ಮತ್ತು ಸಮರ್ಪಣಾ ಮನೋಬಾವದಿಂದ ಯಶಸ್ಸು ಕಂಡ ಇವರು ಮುಂದೆ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿದರು.

ಕಳೆದ ಕೆಲವು ತಿಂಗಳ ಹಿಂದೆ ಮತ್ತೆ ಸುದ್ದಿಯಲ್ಲಿ ಇದ್ದರು, ಆದರೆ ಕಾರಣ ಮಾತ್ರ ಅಚ್ಚರಿ ಮೂಡಿಸುತ್ತದೆ, ಅದೇನೆಂದರೆ ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟಿದ್ದ ತನ್ನ ಏಕೈಕ ಮಗನನ್ನು ಶ್ರೀಸಾಮಾನ್ಯನಂತೆ ತಿಂಗಳ ಸಂಬಳಕ್ಕಾಗಿ ದುಡಿಯುವಂತೆ ಕೇರಳಕ್ಕೆ ಕಳುಹಿಸಿದ್ದಾರೆ!! ಆಶ್ಚರ್ಯವಾದರೂ ನೀವು ನಂಬಲೇ ಬೇಕು. ವಿಶ್ವದ ಸುಮಾರು 71 ದೇಶಗಳಲ್ಲಿ ಕಂಪನಿ ಹೊಂದಿರುವ ಢೋಲಕಿಯ ಅವರು ತಮ್ಮ ಮಗನಾದ ದ್ರವ್ಯ ಢೋಲಕಿಯ (21)ರನ್ನು ತಿಂಗಳ ಸಂಬಳಕ್ಕೆ ದುಡಿಯಲು ಕಳುಹಿಸಿದ್ದರು.

ಮೊದ ಮೊದಲು ಕೆಲಸ ಸಿಗುತ್ತದೆ ಎಂಬ ಹುಮ್ಮಸ್ಸಿನಲ್ಲಿ ಇದ್ದ ದ್ರವ್ಯ ಢೋಲಕಿ 6 ದಿನಗಳಾದರೂ ಕೆಲಸ ಸಿಗದಿದ್ದಾಗ ಕಾಲ್ ಸೆಂಟರ್, ಶೂ ಮಾರ್ಟ್, ಮೆಕ್ಡೊನಾಲ್ಡ್ನಲ್ಲಿ ಕೆಲಸ ಮಾಡಿ ದಿನಕ್ಕೆ 250 ರುಪಾಯಿ ಬಾಡಿಗೆಯ ಲಾಡ್ಜ್ನಲ್ಲಿ ನೆಲೆಸಿ ಊಟಕ್ಕೆ ಪರದಾಡಿ ಕಡೆಗೂ ಕಷ್ಟ ಅಂದರೆ ಏನೆಂದು ಅರಿತುಕೊಂಡು ಬಳಿಕ ಸೂರತ್ನ ತನ್ನ ಮನೆಗೆ ವಾಪಸಾಗಿದ್ದರು.

ಐಶ್ವರ್ಯ ಬಂದ್ರೆ ಅರ್ಧ ರಾತ್ರೀಲಿ ಕೊಡೆ ಹಿಡಿಯೋ ಜನಗಳ ಮದ್ಯೆ ಇಷ್ಟೆಲ್ಲಾ ಒಳ್ಳೆಯ ಗುಣಗಳನ್ನು ಹೊಂದಿರುವ ಧೋಲಾಕಿಯಾ ಅವರು ವಿಭಿನ್ನವಾದ ವೆಕ್ತಿತ್ವದಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದನ್ನು THENEWSISM ತಂಡ ಶ್ಲಾಘಿಸುತ್ತದೆ.