ಅಂತ್ಯಸಂಸ್ಕಾರಕ್ಕೂ ದಾರಿ ಬಿಡದ ಮೇಲ್ವರ್ಗದವರು; ಶವಕ್ಕೆ ಹಗ್ಗ ಕಟ್ಟಿಸೇತುವೆಯಿಂದ ಇಳಿಸಿ ಅಂತ್ಯಕ್ರಿಯೆ ಮಾಡುತ್ತಿರುವ ದಲಿತರು..

0
283

ಅಂತ್ಯಕ್ರಿಯೆ ಸಮಯದಲ್ಲಿ ಅಡ್ಡಿ ಮಾಡದೆ, ಬೇಕಾದ ಸಹಾಯ ಮಾಡುವುದು ಎಲ್ಲರೂ ತಿಳಿದಿರುವ ವಿಚಾರವಾದರೆ ಇಲ್ಲೊಂದು ಊರಿನಲ್ಲಿ ಕೆಳಜಾತಿಯ ಜನರಿಗೆ ಮೇಲ್ಜಾತಿಯ ಜನರು ಹೆಣವನ್ನು ಹೊತ್ಯೋಯಲು ದಾರಿ ಸಹ ಬಿಡದೆ ಇರುವ ಇಡಿ ದೇಶದಲ್ಲೇ ವೈರಲ್ ಆಗಿದ್ದು, ಇಡಿ ಮಾನವ ಕುಲಕ್ಕೆ ಅಪಮಾನ ಎನ್ನುವ ಮಾತುಗಳು ಕೇಳಿಬರುತ್ತಿವೆ. ಏಕೆಂದರೆ ದಾರಿ ಇಲ್ಲದ ಕಾರಣ ಎಷ್ಟೋ ವರ್ಷಗಳಿಂದ ಹೆಣವನ್ನು 40 ಅಡಿ ಆಳದ ಸೇತುವೆಯಿಂದ ಹಗ್ಗ ಮೂಲಕ ಕೆಳಗೆ ಇಳಿಸಿ ಅಂತ್ಯ ಸಂಸ್ಕಾರ ಮಾಡಲಾಗುತ್ತಿದೆ. ಇದರ ವಿಡಿಯೋ ಈಗ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಭಾರಿ ವೈರಲ್ ಆಗಿದೆ.

ಹೌದು ಇಂತಹ ಹಿನ ಕೆಲಸ ನಡೆದಿದ್ದು ಸದ್ಯ ಕರ್ನಾಟಕದಲ್ಲಿ ಅಂತು ಅಲ್ಲವಾದರೂ ಸ್ಮಶಾನಕ್ಕೆ ತೆರಳಲು ದಾರಿ ಕೊಡುವುದಿಲ್ಲ ಎಂದು ಮೇಲ್ಜಾತಿ ಜನರು ಅಡ್ಡಿಪಡಿಸಿದ ಪರಿಣಾಮ ದಲಿತ ವ್ಯಕ್ತಿಯ ಶವವನ್ನು ಸೇತುವೆ ಮೇಲಿಂದ ಹಗ್ಗ ಕಟ್ಟಿ ಕೆಳಗಿಳಿಸಿ ಅಂತ್ಯಸಂಸ್ಕಾರಕ್ಕೆ ಹೊತ್ತೊಯ್ಯುತ್ತಿರುವ ಘಟನೆ ತಮಿಳುನಾಡಿನ ವೆಲ್ಲೂರ್ ಜಿಲ್ಲೆಯಲ್ಲಿ ನಡೆಯುತ್ತಿದೆ, ಹಗ್ಗದ ಮೂಲಕ ಸ್ಟ್ರೇಚರ್ ಸಹಿತ ದಲಿತ ವ್ಯಕ್ತಿ ಶವವನ್ನು ಸುಮಾರು 40 ಅಡಿ ಆಳದ ಸೇತುವೆ ಮೇಲಿನಿಂದ ನಿಧಾನಕ್ಕೆ ಕೆಳಗಿಳಿಸುತ್ತಿದ್ದು, ಈ ಸಂದರ್ಭದಲ್ಲಿ ಶವದ ಮೇಲೆ ಹಾಕಿದ್ದ ಹೂವಿನ ಹಾರ ತುಂಡಾಗಿ ಕೆಳಗೆ ಬೀಳುತ್ತಿರುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ.

ಕೆಲವು ದಿನಗಳ ಹಿಂದೆ ಅಪಘಾತದಲ್ಲಿ ಕುಪ್ಪನ್(65ವರ್ಷ) ದಲಿತ ವ್ಯಕ್ತಿ ಸಾವನ್ನಪ್ಪಿದ್ದರು. ಇದೀಗ ಘಟನೆ ಕುರಿತ ವೀಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಸೇತುವೆ ಕೆಳಗೆ ನಿಂತಿದ್ದ ಜನರ ಶವವನ್ನು ಇಳಿಸಿಕೊಂಡು ಅಂತ್ಯಸಂಸ್ಕಾರ ನಡೆಸುವ ಸ್ಥಳದತ್ತ ಕೊಂಡೊಯ್ಯುತ್ತಿರುವ ಘಟನೆ ವೆಲ್ಲೂರಿನ ನಾರಾಯಣಪುರಂ ಗ್ರಾಮದಲ್ಲಿ ನಡೆದಿದ್ದು, ವಾಣಿಯಂಬಾಡಿ ತಾಲೂಕಿನಲ್ಲಿರುವ ದಲಿತ ಕಾಲೋನಿಗೆ ಅಂತ್ಯ ಸಂಸ್ಕಾರ ನಡೆಸಲು ಯಾವುದೇ ಸ್ಮಶಾನ ಇಲ್ಲ. ಇದೇ ನಮ್ಮ ಸ್ಮಶಾನ. ಹೀಗಾಗಿ ಪ್ರತಿ ಬಾರಿ ನಾವು ಶವವನ್ನು ಸೇತುವೆ ಮೇಲಿನಿಂದ ಕೆಳಗಿಳಿಸಿ ಅಂತ್ಯಸಂಸ್ಕಾರ ನಡೆಸುತ್ತೇವೆ ಎಂದು ಮೃತ ಸಂಬಂಧಿಯೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇಲ್ಲಿರುವ ಸ್ಮಶಾನಕ್ಕೆ ತೆರಳಲು ಮೇಲ್ವರ್ಗದ ಜನರ ಜಾಗದಿಂದ ತೆರಳಬೇಕು. ಆದರೆ ಈಗ ಆ ಜಾಗದ ಸುತ್ತ ಬೇಲಿಯನ್ನು ನಿರ್ಮಿಸಿದ್ದಾರೆ. ನಾವು ಕೇಳಿದರೂ ನಮಗೆ ದಾರಿ ಕೊಡುವುದಿಲ್ಲ ಎಂಬುದು ಮೇಲ್ವರ್ಗದ ಜನರ ವಾದವಾಗಿದೆ. ಈ ಗ್ರಾಮದಲ್ಲಿ ದಲಿತರಿಗೆ ಮೃತದೇಹವನ್ನು ಅಂತ್ಯಕ್ರಿಯೆ ಮಾಡಲು ಇರುವುದು ಒಂದೇ ಸ್ಮಶಾನ. ಶವವನ್ನು ತೆಗೆದುಕೊಂಡು ಹೋಗುವ ಮಾರ್ಗ ಮಧ್ಯೆ ಮೇಲ್ವರ್ಗದವರ ಕೃಷಿ ಜಮೀನನ್ನು ದಾಟಿಕೊಂಡು ಹೋಗಬೇಕು. ಮೇಲ್ವರ್ಗದ ಜನರು ತಮ್ಮ ಜಮೀನಿನಲ್ಲಿ ಶವ ತೆಗೆದುಕೊಂಡು ಹೋಗಲು ಅಡ್ಡಿಪಡಿಸುತ್ತಾರೆ. ಹೀಗಾಗಿ ಚಟ್ಟಕ್ಕೆ ಎರಡು ಕಡೆ ಹಗ್ಗ ಕಟ್ಟಿ ಕೆಲವರು ಮೇಲಿನಿಂದ ಇಳಿಸುತ್ತಾರೆ. ಕೆಳಗೆ ಕೆಲವರು ಶವವನ್ನು ಇಳಿಸಿಕೊಳ್ಳುತ್ತಾರೆ.

Also read: ಸಾಯುತ್ತೇನೆಂದು ಮಗಳ ನಿಶ್ಚಿತಾರ್ಥ ಮಾಡಲು ನಿರ್ಧರಿಸಿದ ತಾಯಿ; ನಿಶ್ಚಿತಾರ್ಥ ನಿಲ್ಲಿಸಿ ಬಾಂಗ್ಲಾದಿಂದ ಬೆಂಗಳೂರಿಗೆ ಬಂದು ತಾಯಿಗೆ ಕಿಡ್ನಿ ದಾನ ಮಾಡಿದ ಮಗಳು!!