ತಲೆ ಹೊಟ್ಟು ನಿಯಂತ್ರಣಕ್ಕೆ ಇಲ್ಲಿದೆ ನೋಡಿ ಮನೆ ಮದ್ದು..!

0
2159

Kannada News | Health tips in kannada

ತಲೆ ಹೊಟ್ಟು ನಿಯಂತ್ರಣಕ್ಕೆ ಮನೆಮದ್ದುಗಳು..

  • ವಿಟಮಿನ್ ಬಿ, ಸಿ ಹಾಗೂ ಈ ಮತ್ತು ಸಂಸ್ಕರಿಸಿದ ಶರ್ಕರ ಪದಾರ್ಥಗಳನ್ನು ಕಟ್ಟುನಿಟ್ಟಾಗಿ ಆಹಾರ ಕ್ರಮದಲ್ಲಿ ಬಳಸುವುದರಿಂದ ತಲೆಹೊಟ್ಟನ್ನು ಗಣನೀಯ ಪ್ರಮಾಣದಲ್ಲಿ ನಿಯಂತ್ರಿಸಬಹುದಾಗಿದೆ.
  • ಬೆಚ್ಚಗಿನ ಎಣ್ಣೆಯ ಉಪಚಾರ ತಲೆಹೊಟ್ಟನ್ನು ನಿವಾರಿಸಲು ಅತ್ಯಂತ ಸರಳ ಉಪಾಯವಾಗಿದೆ.ಆಲಿವ್ ಅಥವಾ ಬಾದಾಮಿ ಎಣ್ಣೆಯನ್ನು ಬಿಸಿ ಮಾಡಿ ತಲೆ ಬುರುಡೆಗೆ ಮಸಾಜ್ ಮಾಡಿ ಕೊಳ್ಳಬೇಕು. ಸ್ವಲ್ಪ ಸಮಯದ ನಂತರ ಬಿಸಿ ನೀರಿನಲ್ಲಿ ಅದ್ದಿದ ಬಟ್ಟೆಯನ್ನು ತಲೆಗೆ ಸುತ್ತಿಕೊಂಡು ನಂತರ ತಲೆಯನ್ನು ತೊಳೆದುಕೊಳ್ಳಬೇಕು.
  • ಬಿಸಿ ಎಣ್ಣೆಯನ್ನು ರಾತ್ರಿಯೇ ತಲೆಗೆ ಹಚಿಕ್ಕೊಂಡು , ಒಡೆದ ಹಾಲಿನ ಸಾರವನ್ನು ಅಂತಿಮ ತೊಳೆತಕ್ಕೆ ಬಳಸಬೇಕು.

  • ಸೇಬಿನ್ ವಿನೆಗರ್ ಅನ್ನು ಬಿಸಿ ನೀರಿನಲ್ಲಿ ಬೆರೆಸಿ ತಲೆಗೆ ಪೂರ್ತಿಯಾಗಿ ಹಚ್ಚಿಕೊಳ್ಳಬೇಕು. ರಾತ್ರಿಯಿಡೀ ಹಾಗೆ ಬಿಟ್ಟು ಬೆಳ್ಳಗ್ಗೆ ಮೊಟ್ಟೆಯಿಂದ ಮಾಡಿದ ಶಾಂಪುವಿನಿಂದ ತೊಳೆದುಕೊಳ್ಳಬೇಕು.
  • ವಾರಕ್ಕೊಮ್ಮೆ ಚೆನ್ನಾಗಿ ಗೋಟಾಯಿಸಿದ ಹಸಿ ಮೊಟ್ಟೆ(ಹಳದಿ) ಲೋಳೆಯನ್ನು ತಲೆ ಬುರುಡೆಗೆ ಹಚ್ಚಿಕೊಳ್ಳಬೇಕು.
  • ರೋಸಮೇರಿ ಗಿಡದ ಕಡುವಾದ ಕಷಾಯವನ್ನು ತಲೆಬುರುಡೆಗೆ ಹಚ್ಚಿಕೊಳ್ಳುವುದು ತಲೆ ಹೊಟ್ಟಿನ ನಿವಾರಣೆಗೆ ಪರಿಣಾಮಕಾರಿ ವಿಧಾನ.
  • ನಾಲ್ಕು ಟೇಬಲ್ ಚಮಚದಷ್ಟು ಒಡೆದ ಹಾಲಿನ ಸಾರ,ನಾಲ್ಕು ಟೇಬಲ್ ಚಮಚ ಕರ್ಪುರ ಮಿಶ್ರಿತ ನೀರನ್ನು ಬೆರೆಸಿ, ತಲೆಗೆ ಹಚ್ಚಿಕೊಂಡು ಮೂರು ಗಂಟೆಗಳ ನಂತರ ತೊಳೆದುಕೊಳ್ಳಬೇಕು.

  • ಬ್ರಾಂಡಿಯನ್ನು ತಲೆಬುರುಡೆಗೆ ಹಚ್ಚಿ ಕೊಳ್ಳುವುದು ತಲೆ ಹೊಟ್ಟಿಗೆ ನಿವಾರಣೆಗೆ ಹೇಳಿ ಮಾಡಿಸಿದ್ದು.
  • ತೆಂಗಿನಕಾಯಿಯ ಗಟ್ಟಿಯಾದ ಸಾರವನ್ನು ಹಿಂಡಿಕೊಂಡು ಅದಕ್ಕೆ ಬಿಸಿ ನೀರು ಮತ್ತು ನಿಂಬೆರಸ ಬೆರೆಸಿ,ಇದ್ದನ್ನು ತಲೆಬುರುಡೆಗೆ ಹಚ್ಚಿಕೊಂಡು,ಅರ್ಧಗಂಟೆ ಬಿಟ್ಟು ನಂತರ ತೊಳೆದುಕೊಳ್ಳಬೇಕು.
  • ಏನು ಮಾಡಿದರು ತಲೆಯಲ್ಲಿ ಹೊಟ್ಟು ಹಾಗೆ ಉಳಿದುಕೊಂಡರೆ ತಜ್ಞರನ್ನು ಬೇಟಿ ಮಾಡುವುದು ಉತ್ತಮ.
  • ಉತ್ತಮವಾದ ತಲೆಹೊಟ್ಟು ನಿವಾರಕ ಶಾಂಪೂ ಬಳಸುವುದು ಉತ್ತಮ.

  • ಆದಷ್ಟು ನೈಸರ್ಗಿಕ ಸಂಪನ್ಮೂಲಗಳಿಂದ ಮಾಡಿದ ಶಾಂಪೂಗಳನ್ನು ಬಳಸಿ.ಉದಾಹರಣೆಗೆ ಪತಂಜಲಿ,ಹಿಮಾಲಯ ಉತ್ಪನ್ನಗಳನ್ನು ಬಳಸಿ.
  • ತಾಜಾ ಮೆಂತ್ಯದ ಸೊಪ್ಪನ್ನು ಅರೆದು ಪೇಸ್ಟನಂತೆ ತಯಾರಿಸಿ ತಲೆಬುರುಡೆಗೆ ಹಚ್ಚಿ ಅರ್ಧಗಂಟೆ ಬಿಟ್ಟು ನಂತರ ತೊಳೆಯಿರಿ.
  • ಆಗಾಗ ಮಜ್ಜಿಗೆಯಿಂದ ತಲೆಗೆ ಸ್ನಾನ ಮಾಡಿದರೆ ತಲೆಹೊಟ್ಟಿನ ಸಮಸ್ಯೆ ನಿವಾರಣೆ ಯಾಗುತ್ತದೆ.
  • ಹುಣಸೆಹಣ್ಣಿನ ನೀರಿಗೆ ಬೆಲ್ಲ ಸೇರಿಸಿ ತಲೆಗೆ ಹಚ್ಚಿ ಸ್ನಾನ ಮಾಡಿದರೆ ತಲೆಯ ಹೊಟ್ಟು ಬರುವುದಿಲ್ಲ.
  • ರಾಗಿ ಹಿಟ್ಟನ್ನು ನೀರಿನಲ್ಲಿ ಬೆರೆಸಿ ತಲೆಗೆ ಹಚ್ಚಿ ಸ್ನಾನ ಮಾಡಿದರೆ ಹೊಟ್ಟು ದೂರವಾಗುತ್ತದೆ.

 • ಬಿಲ್ವ ಪಾತ್ರೆಯ ಕಾಯಿಯ ತಿರುಳನ್ನು ಬೇಯಿಸಿ ತಲೆಗೆ ಹಚ್ಚಿದರೆ ಹೊಟ್ಟು ದೂರವಾಗುತ್ತದೆ.
 • ಮೆಂತ್ಯ ಕಾಳನ್ನು ನೀರಿನಲ್ಲಿ ನೆನೆಸಿ ರುಬ್ಬಿ ಹಚ್ಚಿದರೆ ತಲೆ ಹೊಟ್ಟು ಕಡಿಮೆಯಾಗುತ್ತದೆ.
 • ಬಾಳೆ ದಿಂಡಿನ ರಸವನ್ನು ಎಣ್ಣೆಯ ಜೊತೆಗೆ ಬೆರೆಸಿ ಹಚ್ಚಿದರೆ ತಲೆ ಹೊಟ್ಟು ನಿಯಂತ್ರಣವಾಗುತ್ತದೆ.
 • ಮೂರು ನಾಲ್ಕು ದಿನದ ಹುಳಿಮೊಸರು ಹಚ್ಚಿ ನೋಡಿ ತಲೆ ಹೊಟ್ಟು ಮಾಯವಾಗುತ್ತದೆ.
 • ಎರಡು ಮೊಟ್ಟೆ ಮತ್ತು ಎರಡು ನಿಂಬೆಹಣ್ಣಿನ ರಸವನ್ನು ಮಿಶ್ರಣ ಮಾಡಿ ಹಚ್ಚಿ.ತಲೆ ಹೊಟ್ಟಿನ ಸಮಸ್ಯೆ ಬಗೆಹರಿಯುತ್ತದೆ.
 • ಯಾವುದೇ ಬಣ್ಣದ ದಾಸವಾಳದ ಎಲೆ ರುಬ್ಬಿ ಮೊಸರು ಹಾಕಿ ಕಲೆಸಿ ಹಚ್ಚಿ ತಲೆಹೊಟ್ಟು ಹೋಗುತ್ತದೆ.

Also Read: ಪುರಷರು ರಾತ್ರಿ ಲೇಟಾಗಿ ಮಲಗಿದರೆ ಮಕ್ಕಳಾಗಲ್ವಾ….!