ಕೇವಲ ಪ್ಯಾಶನ್ ಎಂದು ಟ್ಯಾಟೂ ಹಾಕಿಸಿಕೊಳ್ಳುವ ಮುನ್ನ ಎಚ್ಚರ; ಸ್ವಲ್ಪ ಹೆಚ್ಚು ಕಡಿಮೆಯಾದರೆ ಬರುತ್ತವೆ ಈ ಕಾಯಿಲೆಗಳು.!

0
637

ಈಗಿನ ಯುವಪಿಳಿಗೆ ಯಾವುದೇ ಪ್ಯಾಶನ್ ಬೆನ್ನು ಹತ್ತಿದರೆ ಅದನ್ನು ಸುಲಭವಾಗಿ ಬಿಡುವ ಮಾತೇ ಇಲ್ಲ. ಕೆಲವು ಪ್ಯಾಶನ್-ಗಳಿಂದಲೇ ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತೆ ಎನ್ನುವ ಅರಿವಿದರೂ ಕೂಡ ಅದನ್ನೇ ಬೆನ್ನು ಹತ್ತಿ ಹೋಗುವರ ಸಂಖ್ಯೆಗೇನು ಕಡಿಮೆಯಿಲ್ಲ. ಇಂತಹ ಪ್ಯಾಶನ್ ಹೆಚ್ಚಾಗಿರುವುದು ಮೈಮೇಲೆ ಹಾಕಿಸಿಕೊಳ್ಳುವ ಟ್ಯಾಟೂಗಳು ಭಾರಿ ಸದ್ದು ಮಾಡುತ್ತಿದ್ದು, ಹಚ್ಚೆ ಇಂದಲೇಎಚ್‌ಐವಿ, ಮಲೇರಿಯಾ ಮತ್ತು ಡೆಂಘಿನಂತಹ ಭಯಾನಕ ಮತ್ತು ಮಾರಕ ಕಾಯಿಲೆಗಳಿಗೆ ಕಾರಣವಾಗುತ್ತಿದೆ ಎಂಬ ನಗ್ನ ಸತ್ಯವನ್ನು ಆ್ಯಕ್ಷನ್ ವೆಲ್​ನೆಸ್​​ ಆರ್ಗನೈಸೇಷನ್ ಜನರ ಮುಂದಿಟ್ಟಿದೆ.

Also read: ಚಿಕನ್ ಪ್ರಿಯರೆ ಎಚ್ಚರ; ಬೆಂಗಳೂರಿನಲ್ಲಿ ರೋಗದಿಂದ ಸತ್ತ ಕೋಳಿ ಮಾಂಸದಿಂದ ತಯಾರಾಗುತ್ತೆ ಚಿಕನ್ ಕಬಾಬ್..!

ಟ್ಯಾಟೂ ಹಾಕಿಸಿಕೊಳ್ಳುವುದು ಒಳ್ಳೆಯದ?

ಹೌದು ಹೀಗೊಂದು ಪ್ರಶ್ನೆಯನ್ನು ಪ್ಯಾಶನ್ ಲೋಕದಲ್ಲಿ ಮುಳಿಗಿ ಟ್ಯಾಟೂ ಗಿಳಿಗೆ ಬಿಳ್ಳುತ್ತಿರುವ ಹದಿ ಹರೆಯರು ಕೇಳಿದರೆ ಇಂತಹ ಸಾಹಸದಿಂದ ದೂರವಿರುವುದರಲ್ಲಿ ಅನುಮಾನವಿಲ್ಲ, ಏಕೆಂದರೆ ಸಿನಿ ನಟರು – ಕ್ರಿಕೆಟ್​ ತಾರೆಗಳಿಂದ ಶುರುವಾಗಿದ್ದ ಈ ಕ್ರೇಜ್ ಬಳಿಕ ಸಮಾನ್ಯ ಜನರಿಗೂ ತಲುಪಿತ್ತು. ಇತ್ತೀಚಿನ ದಿನಗಳಲ್ಲಿ ಸ್ಟೈಲಿನ ಭಾಗವಾಗಿರುವ ಟ್ಯಾಟೂ ಹಾಕಿಸಿಕೊಳ್ಳುವ ಮುನ್ನ ಎಚ್ಚರಿಕೆ ವಹಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದನ್ನು ಒಪ್ಪಿಕೊಳ್ಳಲೇಬೇಕಾಗಿದೆ. ಒಂದು ವೇಳೆ ಇಂತಹ ಎಚ್ಚರಿಕೆಗಳನ್ನು ಗಮನಿಸದೆ ಇದ್ದರೆ ಜೀವನಕ್ಕೆ ಕುತ್ತು ಬರುತ್ತದೆ. ಹಾಗಾದ್ರೆ ಟ್ಯಾಟೂ ಗಿಳಿನಿಂದ ಯಾವೆಲ್ಲ ಕಾಯಿಲೆಗಳು ಬರುತ್ತೇವೆ ಎನ್ನುವುದು ಇಲ್ಲಿದೆ ನೋಡಿ.

ಟ್ಯಾಟೂ ಕಾಯಿಲೆ ತರುತ್ತ?

ಟ್ರೆಂಡ್ ರೀತಿಯಲ್ಲಿ ನಾವೆಲ್ಲರೂ ಹಾಕಿಸಿಕೊಳ್ಳುವ ಟ್ಯಾಟೂಗಳೂ ಕೂಡ ಎಚ್‌ಐವಿ, ಮಲೇರಿಯಾ ಮತ್ತು ಡೆಂಘಿನಂತಹ ಭಯಾನಕ ಮತ್ತು ಮಾರಕ ಕಾಯಿಲೆಗಳಿಗೆ ಕಾರಣವಾಗುತ್ತಿದೆ ಎಂಬ ನಗ್ನ ಸತ್ಯವನ್ನು ಆ್ಯಕ್ಷನ್ ವೆಲ್​ನೆಸ್​​ ಆರ್ಗನೈಸೇಷನ್ ಜನರ ಮುಂದಿಟ್ಟಿದೆ. ಇದಕ್ಕೆ ಮುಖ್ಯ ಕಾರಣ ನಿರ್ಲಕ್ಷ್ಯ ಎಂಬುದು ಅಷ್ಟೇ ದೊಡ್ಡ ಸತ್ಯ. ಅನೇಕರು ಟ್ಯಾಟೂ ಬಗೆಗಿನ ಯಾವುದೇ ಮಾಹಿತಿಯಿಲ್ಲದೆ ಹಚ್ಚೆ ಹಾಕಿಸಿಕೊಳ್ಳುತ್ತಾರೆ. ಈ ವೇಳೆ ಕನಿಷ್ಠ ಕಾಳಜಿ ಸಹ ವಹಿಸುವುದಿಲ್ಲ ಎಂಬುದೇ ಇಲ್ಲಿ ದುರಂತ. ಟ್ಯಾಟೂಗಾಗಿ ಬಳಸಲಾಗುವ ಇಂಕ್, ಸೂಜಿ ಮುಂತಾದವುಗಳಿಂದ ರೋಗಗಳು ಹರಡುತ್ತವೆ. ಆರಂಭದಲ್ಲಿ ಇದರ ಬಗ್ಗೆ ಯಾವುದೇ ಕಲ್ಪನೆ ಇರುವುದಿಲ್ಲ. ಆದರೆ ಭವಿಷ್ಯದಲ್ಲಿ ನೀವು ಟ್ಯಾಟೂ ಹಾಕಿಕೊಳ್ಳುವಾಗ ವಹಿಸಿದ ನಿರ್ಲಕ್ಷ್ಯ ಮಾರಕ ರೋಗಕ್ಕೆ ಕಾರಣವಾಗಬಹುದು.

Also read: ನೀವೂ ಗೂಗಲ್ ಪೇ app ಬಳಕೆ ಮಾಡುತ್ತಿರಾ? ಹಾಗಾದ್ರೆ ಎಚ್ಚರ; ವ್ಯಕ್ತಿ ಕರೆಂಟ್ ಬಿಲ್ ಕಟ್ಟಲು ಹೋಗಿ 96 ಸಾವಿರ ರೂ ಕಳೆದುಕೊಂಡಿದು ಹೇಗೆ ಗೊತ್ತಾ??

ಟ್ಯಾಟೂ ಕಲಾವಿದರು ಸೂಜಿಯ ಮೂಲಕ ಚರ್ಮದೊಳಗೆ ಬಣ್ಣವನ್ನು ಹಾಕುತ್ತಾರೆ. ಇದರಿಂದಾಗಿ ಸೂಜಿ ಚುಚ್ಚಿ ರಕ್ತದ ಸಂಪರ್ಕದಲ್ಲಿರುತ್ತದೆ. ನಿಮಗಿಂತ ಮೊದಲು ಯಾರಾದರೂ ಎಚ್‌ಐವಿ, ಮಲೇರಿಯಾ ಮತ್ತು ಡೆಂಘಿ ರೋಗಿಗೆ ಈ ಸೂಜಿ ಬಳಸಿದ್ದರೆ ಆ ಅಪಾಯಕಾರಿ ರೋಗ ನಿಮಗೆ ಹರಡುವುದರಲ್ಲಿ ಸಂದೇಹವೇ ಇಲ್ಲ. ಹೀಗಾಗಿ ಟ್ಯಾಟೂ ಹಾಕುವ ವೇಳೆ ಸೂಜಿ ಬಳಕೆ ಬಗ್ಗೆ ಅತೀ ಎಚ್ಚರವಹಿಸಬೇಕು.

ಟ್ಯಾಟೂ ಹಾಕಿಸಿಕೊಳ್ಳುವಾಗ ಎಚ್ಚರ;

ಹಚ್ಚೆ ಹಾಕುವ ಮೊದಲು, ಟ್ಯಾಟೂ ಸೂಜಿಯನ್ನು ಸರಿಯಾಗಿ ಸ್ವಚ್ಛಗೊಳಿಸಿದ್ದಾನೆಯೇ ಎಂಬುದನ್ನು ಗಮನಿಸಿ. ಅದಕ್ಕೂ ಉತ್ತಮ ಹೊಸ ಸೂಜಿಯ ಬಳಕೆ. ಇನ್ನು ಹಳೆಯ ಮಾದರಿ ಅಥವಾ ಸ್ವಚ್ಛಗೊಳಿಸದ ಸೂಜಿಯನ್ನು ಯಾವುದೇ ಕಾರಣಕ್ಕೂ ಬಳಸಬೇಡಿ. ಹಾಗೆಯೇ ಟ್ಯಾಟೂ ಕಲಾವಿದರೂ ಕೂಡ ಪರವಾನಗಿ ಪಡೆದಿರಬೇಕಾಗುತ್ತದೆ. ಹೀಗೆ ಲೈಸೆನ್ಸ್​ ಪಡೆದಿರುವ ಆರ್ಟಿಸ್ಟ್​ಗಳಿಂದ ಮಾತ್ರ ಹಚ್ಚೆ ಹಾಕಿಸಿಕೊಳ್ಳಿ. ಯಾವುದೇ ಕಾರಣಕ್ಕೂ ಸಾಮಾನ್ಯ ಸ್ಥಳ ಅಥವಾ ಬೀದಿ ಬದಿಗಳಲ್ಲಿ ಹಚ್ಚೆ ಹಾಕಿಸಿಕೊಳ್ಳಬೇಡಿ. ಇಂತಹ ಸ್ಥಳಗಳಲ್ಲಿ ಒಂದೇ ಸೂಜಿಯ ಬಳಕೆ ಹಾಗೂ ಇಂಕ್​ನ ಗುಣಮಟ್ಟ ಕಳಪೆ ಮಟ್ಟದಲ್ಲಿರುವ ಸಾಧ್ಯತೆ ಹೆಚ್ಚಿರುತ್ತದೆ.

Also read: ಜಿಮ್-ಗಳಲ್ಲಿ ಬಾಡಿ ಬಿಲ್ಡಿಂಗ್ ಮಾಡಲು ಟ್ರೈನರ್-ಗಳ ಮಾತು ಕೇಳಿ ಔಷಧಿಗಳನ್ನು ತೆಗೆದುಕೊಳ್ಳಬೇಡಿ, ಅದರಿಂದ ನಿಮ್ಮ ಪುರುಷತ್ವಕ್ಕೇ ಕುತ್ತು ಬಂದೀತು!!

ಹಚ್ಚೆ ಹಾಕುವ ಮೊದಲು, ಟ್ಯಾಟೂ ಮಿಶನ್​ನ್ನು ಸ್ವಚ್ಛತಾ ಕ್ರಿಮಿನಾಶಕ ಬಳಸಿ ಶುದ್ಧಗೊಳಿಸಿದ್ದಾನೆಯೇ ಎಂದು ಪರೀಕ್ಷಿಸಿಕೊಳ್ಳಿ. ಹಾಗೆಯೇ ಹಚ್ಚೆ ಹಾಕಿಸಿಕೊಳ್ಳಬೇಕಾದ ನಿಮ್ಮ ದೇಹದ ಭಾಗವನ್ನು ಸಹ ಸಂಪೂರ್ಣ ಸ್ವಚ್ಛಗೊಳಿಸಲು ಮರೆಯದಿರಿ. ಅದೇ ರೀತಿ ಟ್ಯಾಟೂ ಹಾಕಿಸಿಕೊಳ್ಳುವ ಮೊದಲು ಯಾವುದೇ ಕಾರಣಕ್ಕೂ ಮದ್ಯಪಾನ ಅಥವಾ ಕೆಫೇನ್ ಅಂಶವಿರುವ ವಸ್ತುಗಳನ್ನು ಸೇವಿಸಬಾರದು. ಹಚ್ಚೆ ಹಾಕಿಸಿಕೊಳ್ಳುವ ಮೊದಲು ದೇಹ ನಿರ್ಜಲೀಕರಣಕ್ಕೊಳಗಾಗದಂತೆ ನೋಡಿಕೊಳ್ಳುವುದು ಮುಖ್ಯ. ಹೀಗಾಗಿ ಟ್ಯಾಟೂ ಮೊರೆ ಹೋಗುವ ಮುನ್ನ ಸಾಕಷ್ಟು ನೀರು ಕುಡಿಯಬೇಕು. ಒಂದು ಪ್ರಶ್ನೆಯಾಗಿ ಕೇಳಿದರೆ ಟ್ಯಾಟೂ ಬೇಕಾ ಇಲ್ಲ ಆರೋಗ್ಯಬೇಕಾ ಎನ್ನುವುದು ಸರಿಯಾಗಿ ವಿಚಾರ ಮಾಡಿ ಮುಂದಾಗಿ.