ಪ್ರತಿನಿತ್ಯ ಮದ್ಯಪಾನ ಮಾಡುವುದರಿಂದ ದೇಹಕ್ಕೆ ಎಂಥ ಹಾನಿ ಮಾಡುತ್ತೆ ಅಂತ ತಿಳಿದುಕೊಂಡರೆ, ಖಂಡಿತ ಕುಡಿತ ಕಡಿಮೆ ಮಾಡ್ತೀರ!!

0
1930

ಮದ್ಯಪಾನ ಸೇವನೆ ಮೊದಲಿನ ಕಾಲದಿಂದ ಬಂದಿರುವ ಒಂದು ರೂಡಿಯಾಗಿದ್ದು ಈಗಿನ ಕಾಲದಲ್ಲಿ ಪುರುಷರು ಮಾತ್ರವಲ್ಲ ಮಹಿಳೆಯರು ಕೂಡ ಮದ್ಯಪಾನ ಪ್ರಿಯರಾಗಿದ್ದಾರೆ ಹಾಗೆಯೇ ಪ್ರತಿಯೊಬ್ಬರು ಅವರದೇ ಬ್ರಾಂಡ್’ ಗೆ ಮಾರುಹೊಗುತ್ತಿದ್ದಾರೆ. ಈ ವಿಷಯವಾಗಿ ಮೊದಲು ಹಲವಾರು ಸಂಶೋಧನೆಗಳನ್ನು ಮಾಡಿ ಆಲ್ಕೋಹಾಲ್ ಆರೋಗ್ಯಕ್ಕೆ ಒಳ್ಳೆಯದು ಇದರಿಂದ ದೇಹಕ್ಕೆ ಬೇಕಾದ ಕೆಲವೊಂದು ಅಂಶಗಳು ಸಿಗುತ್ತೇವೆ ಆದರಿಂದ ಮಿತವಾಗಿ ಸೇವಿಸಿದರೆ ಯಾವುದೇ ಅಪಾಯವಿಲ್ಲ ಅತೀಯಾಗಿ ಸೇವಿಸಿದರೆ ಸಾವು ಕಚಿತವಾಗುತ್ತೆ ಎಂದು ಹಲವಾರು ಸಂಶೋದನೆಗಳು ಮಾಹಿತಿ ನೀಡಿದ್ದವು.

Also read: ಪ್ರತಿದಿನ ಬಿಸಿನೀರಿನಲ್ಲಿ ಸ್ನಾನ ಮಾಡುವ ಪುರುಷರು ಓದಲೇಬೇಕಾದ ಸುದ್ದಿ..!

ಈಗ ಮತ್ತೊಂದು ಸಂಶೋಧನೆಯನ್ನು ಅಮೆರಿಕದ ಮೆಡಿಸಿನ್ ವಾಷಿಂಗ್ಟನ್​ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್ ಸಂಶೋಧಕರು ಈ ಹೊಸ ಸಂಶೋಧನೆ ನಡೆಸಿದ್ದು, ದಿನನಿತ್ಯ ವೈನ್​ ಕುಡಿಯುವುದರಿಂದ ಹೃದ್ರೋಗ, ಮಧುಮೇಹ ಮತ್ತು ಕ್ಯಾನ್ಸರ್ ಸೇರಿದಂತೆ ಹಲವು ರೋಗಗಳು ಹೆಚ್ಚಾಗುವ ಸಾಧ್ಯತೆ ಇದೆ, ಪ್ರತಿನಿತ್ಯ ಒಂದು ಗ್ಲಾಸ್​ ವೈನ್ ಸೇವಿಸಿದರೂ ಸಾವಿನ ಕದ ತಟ್ಟುವ ಸಾಧ್ಯತೆ ಹೆಚ್ಚಿರುತ್ತದೆ, ಎಂದು ಹೊಸ ಅಧ್ಯಯನದಿಂದ ತಿಳಿದು ಬಂದಿದೆ. ಅದರಲ್ಲಿ ದಿನನಿತ್ಯ ವೈನ್​ ಸೇವಿಸುವವರಲ್ಲಿ ಶೇ.20ರಷ್ಟು ಬೇಗ ಸಾವು ಸಂಭವಿಸುವ ಸಾಧ್ಯತೆಯಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

Also read: ಪ್ರತಿಯೊಬ್ಬರೂ ಕ್ಯಾನ್ಸರ್ ಬಗ್ಗೆಗಿನ ಈ ಸಂಗತಿಗಳನ್ನು ತಿಳಿದಿರಲೇಬೇಕು!!!

ಅಮೆರಿಕದ ಮೆಡಿಸಿನ್ ವಾಷಿಂಗ್ಟನ್​ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್ ಸಂಶೋಧಕರು 18 ರಿಂದ 85 ವಯಸ್ಸಿನ 340,668 ಜನರನ್ನು ಮತ್ತು 40 ರಿಂದ 60 ವಯಸ್ಸಿನ 93,653 ವ್ಯಕ್ತಿಗಳ ಮೇಲೆ ಸಂಶೋಧನೆ ನಡೆಸಿದ ಬಳಿಕ ಈ ಸತ್ಯ ಹೊರಬಿದ್ದಿದು. ಪ್ರತಿನಿತ್ಯ ಕುಡಿಯುವವರಲ್ಲಿ ಶೇ.20ರಷ್ಟು ಮುಂಚಿತವಾಗಿ ಸಾವು ಎದುರಾಗುವ ಸಾಧ್ಯತೆಯಿದೆ ಎಂಬುದು ಸಾಬೀತಾಗಿದೆ. ಈ ಅಧ್ಯಯನಕ್ಕೆ ಒಳಪಡಿಸಿದ ಹಿರಿಯರು ಈಗಾಗಲೇ ಸಾವಿನ ಅಪಾಯದಲ್ಲಿರುವುದು ಕಂಡು ಬಂದಿದ್ದು, ಮತ್ತಷ್ಟು ಮಂದಿ 20ರ ದಶಕದಲ್ಲಿ ಸಾವನ್ನು ಎದುರಿಸಲಿದ್ದಾರೆ. ಹಾಗೆಯೇ . ಆಲ್ಕೋಹಾಲ್ ಸೇವನೆಯ ನಿರ್ದಿಷ್ಟ ಮಟ್ಟದ ಕುರಿತಾದ ಇತ್ತೀಚಿನ ಅಧ್ಯಯನವನ್ನು ಕೇಂದ್ರೀಕರಿಸಿ ಈ ಹೊಸ ಅಧ್ಯಯನ ನಡೆಸಲಾಗಿದೆ ಎಂದು ಸಂಶೋಧಕ ಹಾರ್ಟ್ಜ್​ ತಿಳಿಸಿದ್ದಾರೆ.


ಈ ಸಂಶೋಧನೆಯಿಂದ ಮಖ್ಯವಾಗಿ ತಿಳಿದಿರುವ ವಿಷಯ ಅಂದ್ರೆ. ಇತ್ತೀಚಿನ ದಿನಗಳಲ್ಲಿ ವಯಸ್ಸಿನ ಮೊದಲೇ ಸಾಯಿವುದು ಮದ್ಯಪಾನ ಮಾಡುವುದರಿಂದ ಎಂದು ತಿಳಿದು ಬಂದಿದೆ. ಆದರಿಂದ ಪ್ರತಿದಿನವೂ ಕುಡಿಯಿವ ಜನರು ಒಂದೇ ಒಂದು ಪೆಗ್ ಕುಡಿದರು ಕೂಡ ಹಲವಾರು ಖಾಯಿಲೆಗಳ ಜತೆಗೆ ಸಾವು ಬರುತ್ತೆ. ಕೆಲವೊಬ್ಬರು ಕುಡಿಯೋದ್ದನ್ನೇ ಫ್ಯಾಷನ್ ಮಾಡಿಕೊಂಡಿದ್ದಾರೆ ಇನ್ನು ಕೆಲವರು ಯಾವುದೇ ಒಂದು ಕಾರಣದಿಂದ ಶುರುವಾದ ಚಟ ಸಾಯಿವರೆಗೂ ಮಾಡುತ್ತಾನೆ ಇರುತ್ತಾರೆ. ಆದರಿಂದ ಮದ್ಯಪಾನ ಪ್ರಿಯರು ಕುಡಿಯಿವ ಮೊದಲು ಎಚ್ಚರ ವಹಿಸುವುದು ಒಳ್ಳೆಯದು.