ಈ ನಿಯಮಗಳನ್ನು ಪಾಲಿಸಿದರೆ ನಿಮ್ಮ ಕಣ್ಣಿನ ಕೆಳಗೆ ಡಾರ್ಕ್‌ ಸರ್ಕಲ್‌ ಸಮಸ್ಯೆ ಒಂದೇ ವಾರದಲ್ಲಿ ಕಡಿಮೆಯಾಗುತ್ತದೆ ಗೊತ್ತಾ?

0
2748

ಕಣ್ಣಿನ ರಕ್ಷಣೆ ಬಗ್ಗೆ ಪ್ರತಿಯೊಬ್ಬರೂ ವಿಶೇಷ ಕಾಳಜಿ ವಹಿಸುತ್ತಾರೆ. ನಮ್ಮಲ್ಲಿ ಶೇಕಡಾ 50 ರಷ್ಟು ಜನಕ್ಕೆ ಡಾರ್ಕ್ ಸರ್ಕಲ್ ಸಮಸ್ಯೆ ಇರುತ್ತದೆ. ತಡರಾತ್ರಿಯವರೆಗೂ ಎದ್ದಿರುವುದು, ಕೆಲಸ ಮಾಡುವುದರ ಕೊಡುಗೆಯೇ ಈ ಡಾರ್ಕ್ ಸರ್ಕಲ್. ಇದರಿಂದ ತೊಂದರೆ ಏನಿಲ್ಲವಾದರೂ ಸಹ ನಮ್ಮ ಮುಖದ ಕಾಂತಿಯನ್ನು ಕಮ್ಮಿ ಮಾಡುತ್ತದೆ. ಇದನ್ನ ವಾಸಿ ಮಾಡಲು ಬ್ರಹ್ಮ ವಿದ್ಯೆಯೇನೂ ಬೇಡ. ನಿಮ್ಮಮನೆಯಲ್ಲಿ ಆಲೂಗಡ್ಡೆ ಇದ್ದಾರೆ ಸಾಕು. ನಿಮ್ಮ ಕಣ್ಣಿನ ಕೆಳಗೆ ಡಾರ್ಕ್‌ ಸರ್ಕಲ್‌ ಸಮಸ್ಯೆ ಒಂದೇ ವಾರದಲ್ಲಿ ಕಡಿಮೆಯಾಗುತ್ತದೆ.

ಆಲೂಗಡ್ಡೆಯಲ್ಲಿ ವಿಟಮಿನ್ ಸಿ, ವಿಟಮಿನ್ ಬಿ, ಕಬ್ಬಿಣ, ಕ್ಯಾಲ್ಸಿಯಂ, ಮ್ಯಾಂಗನೀಸ್, ರಂಜಕ ಗಮನಾರ್ಹ ಪ್ರಮಾಣದಲ್ಲಿ ಕಂಡು ಬರುತ್ತವೆ. ಆಲೂಗಡ್ಡೆ ಪೋಷಕಾಂಶಗಳಲ್ಲದೆ ಅವಶ್ಯಕ ಅಮೈನೋ ಆಮ್ಲಗಳು ಕೂಡ ಹೇರಳವಾಗಿ ಇರುತ್ತದೆ. ಹಾಗಾಗಿ ಕಣ್ಣುಗಳ ಕೆಳಗಿರುವ ಕಪ್ಪು ಕಲೆಗಳನ್ನು ಹೋಗಲಾಡಿಸಲು ಆಲೂಗಡ್ಡೆ ಉತ್ತಮ ಔಷಧಿ.

ಈ ಕೆಳಗೆ ನೀಡಿರುವ ಕೆಲವು ನಿಯಮಗಳು ನಿಮ್ಮ ಕಣ್ಣಿನ ಡಾರ್ಕ್ ಸರ್ಕಲ್ ಗಳಿಂದ ಮುಕ್ತವಾಗಿಸಬಹುದು.

  1. ಆಲೂಗಡ್ಡೆಯ ಹೊಳನ್ನು ತೆಗೆದುಕೊಂಡು ನಿಮ್ಮ ಕಲೆಗಳ ಮೇಲೆ ನೇರವಾಗಿ ಉಜ್ಜಿಕೊಂಡು ಹದಿನೈದು ನಿಮಿಷಗಳಲ್ಲಿ ತೊಳೆಯಿರಿ.

2. ಆಲೂಗಡ್ಡೆ ಜ್ಯೂಸ್‌ನ ಕೆಲವು ಹನಿಗಳನ್ನು ಕಲೆ ಇರುವಂತಹ ಜಾಗಕ್ಕೆ ಹಚ್ಚಿ, ನಿಧಾನವಾಗಿ ಮಸಾಜ್ ಮಾಡಿ. ನಂತರ ತಣ್ಣೀರಿನಿಂದ ತೊಳೆಯಿರಿ.

3. ಆಲೂಗಡ್ಡೆ ರಸವನ್ನು ತೆಗೆದು ಪ್ರಿಡ್ಜ್‌ನಲ್ಲಿಡಿ. 15 ರಿಂದ 20 ನಿಮಿಷಗಳ ನಂತರ ತಂಪಾಗಿರೋ ಆಲೂಗಡ್ಡೆ ರಸದಲ್ಲಿ ಹತ್ತಿಯನ್ನು ಅದ್ದಿ ಕಣ್ಣಿಗೆ ಇಟ್ಟುಕೊಳ್ಳಿ. ಹೀಗೆ 15 ನಿಮಿಷಗಳವರೆಗೆ ಇಟ್ಟು, ನಂತರ ತೊಳೆಯಿರಿ. ಹೀಗೆ ಒಂದು ವಾರ ಬಿಡದೆ ಮಾಡುವುದರಿಂದ ಕಣ್ಣುಗಳ ಕೆಳಗಿರುವ ಕಪ್ಪು ಕಲೆ ಮಾಯವಾಗಿತ್ತದೆ.

4. ಕಣ್ಣಿನ ಡಾರ್ಕ್‌ ಸರ್ಕಲ್‌ನ್ನು ಹೋಗಲಾಡಿಸಲು ಆಲೂಗಡ್ಡೆಯ ಸಣ್ಣ ತೆಳುವಾದ ಸ್ಲೈಸ್‌ ಅನ್ನು ಪ್ರಿಡ್ಜ್‌ನಲ್ಲಿಟ್ಟ ನೀರಿನಲ್ಲಿ ಮುಳುಗಿಸಿ ನಂತರ ಆಲೂಗಡ್ಡೆಯ ಸ್ಲೈಸ್‌ ಅನ್ನು 15 ನಿಮಿಷಗಳವರೆಗೆ ಕಣ್ಣಿನ ಮೇಲೆ ಇಟ್ಟುಕೊಳ್ಳಿ, ನಂತರ ತಣ್ಣೀರಿನಲ್ಲಿ ತೊಳೆಯಿರಿ.

5. ಸೌತೆಕಾಯಿಯಲ್ಲಿ ಕೊಲಾಜೆನ್‌ ಗುಣ ಮತ್ತು ಆಲೂಗಡ್ಡೆಯಲ್ಲಿ ಇರುವ ಆ್ಯಂಟಿ ಇಂಫ್ಲಾಮೇಟರಿ ಗುಣಗಳು ಕೇವಲ ಒಂದೇ ವಾರದಲ್ಲಿ ಕಣ್ಣುಗಳ ಕೆಳಗಿರುವ ಕಪ್ಪು ಕಲೆಯನ್ನು ಮಾಯವಾಗುತ್ತವೆ. ಅದಕ್ಕಾಗಿ ಆಲೂಗಡ್ಡೆಯ ಜ್ಯೂಸ್ ನಲ್ಲಿ ಸೌತೆಕಾಯಿ ಜ್ಯೂಸ್‌ ಬೆರೆಸಿ. ಅದನ್ನು ಮುಖಕ್ಕೆ ಹಚ್ಚಿ ಬೆರಳಿನ ಸಹಾಯದಿಂದ 2 ನಿಮಿಷಗಳ ಕಾಲ ಮಸಾಜ್ ಮಾಡಿ. 20 ನಿಮಿಷದ ನಂತರ ತಂಪಾದ ನೀರಿನಿಂದ ತೊಳೆಯಿರಿ. ವಾರದಲ್ಲಿ ಮೂರು ಬಾರಿ ಇದೆ ರೀತಿ ಮಾಡಿ.

6. ಕತ್ತರಿಸಿದ ಆಲೂಗಡ್ಡೆ ಅಥವಾ ತುರಿದ ಬೆಣ್ಣೆಯು ಚರ್ಮದ ಹೊಳಪುಗೆ ಸಹಾಯ ಮಾಡುತ್ತದೆ. ಇದು ಬಿಳಿಮಾಡುವ ಚರ್ಮದಲ್ಲಿ ದೊಡ್ಡ ಏಜೆಂಟ್ಗಳಲ್ಲಿ ಒಂದಾಗಿದೆ, ಮತ್ತು ಡಾರ್ಕ್ ಕಲೆಗಳು ಮತ್ತು ಕಲೆಗಳನ್ನು ತೆಗೆದುಹಾಕುವಲ್ಲಿ ಹೆಚ್ಚು ಪ್ರಯೋಜನಕಾರಿಯಾಗಿದೆ.

7. ಒಂದು ಸಣ್ಣ ಆಲೂಗಡ್ಡೆಯನ್ನು ರುಬ್ಬಿಕೊಳ್ಳೀ ಹಾಗೂ ರುಬ್ಬಿಕೊಂಡ ಆಲೂಗಡ್ದೆಗೆ ಸ್ವಲ್ಪ ಜೇನುತುಪ್ಪವನ್ನು ಬೆರಸಿ ಈ ಮಿಶ್ರಣವನ್ನು ಕಲೆಗಳ ಮೇಲೆ ಹಚ್ಚಿಕೊಳ್ಳಿ ಅಥವಾ ಇಡೀ ಮುಖಕ್ಕೂ ಹಚ್ಚಿಕೊಳ್ಳಬಹುದು. ಹದಿನೈದು ನಿಮಿಷಗಳ ನಾನಾತರ ಮಿಶ್ರಣವನ್ನು ನೀರಿನಿಂದ ತೊಳೆಯಬಹುದು.