ಕಣ್ಣಿನ ಸುತ್ತ ಕಪ್ಪು ಮಾಯ!

0
2350

*ಆಲೂಗಡ್ಡೆ ಅಥವಾ ಸವತೆಕಾಯಿಯನ್ನು ಚೆನ್ನಾಗಿ ತೊಳೆದು ಸಿಪ್ಪೆ ಸಮೇತ ತುರಿದು ಹಚ್ಚಿ.

*ಬಾದಾಮಿಯನ್ನು ನೀರಿನಲ್ಲಿ ನೆನೆಸಿ ಅದನ್ನು ಉಜ್ಜಿ ರಸ ತೆಗೆದು ಹಚ್ಚಿ.

*ಒಣ ದ್ರಾಕ್ಷಿಯನ್ನು ನೆನೆಸಿ ಕಿವುಚಿ ಅದರ ರಸವನ್ನು ಹಚ್ಚಿ.

*ಬೆಳಿಗ್ಗೆ ಎದ್ದು ಕರಿಬೇವಿನ ಎಲೆಗಳನ್ನು ತಿನ್ನಬೇಕು.

*ಕಣ್ಣಿನ ಕೆಳಭಾಗವನ್ನು ಆಗಾಗ ಮೃದುವಾಗಿ ಮಸಾಜ್ ಮಾಡುತ್ತಾ ಇರಬೇಕು.

*ಒಣ ಖರ್ಜೂರವನ್ನು ಗಂಧದ ಕಲ್ಲಿನ ಮೇಲೆ ತೇಯ್ದು ಹಚ್ಚಿ.

*ಕಾಫಿ, ಟೀ ಮಾಡಿದ ಚರಟವನ್ನು ಮತ್ತೆ ಬಟ್ಟೆಯಲ್ಲಿ ಸೋಸಿದ ತಕ್ಷಣ ಬಿಸಿ ಇರುವವಾಗಲೇ ಕಣ್ಣಿನ ಕೆಳಭಾಗದಲ್ಲಿ ಇಟ್ಟುಕೊಳ್ಳಿ.

*ಗರಿಕೆ ಹುಲ್ಲಿನ ಮೇಲೆ ಬಿದ್ದ ಇಬ್ಬನಿಯ ನೀರನ್ನು ಹತ್ತಿಯಲ್ಲಿ ಅದ್ದಿ ಕಣ್ಣಿನ ಮೇಲೆ ಇಟ್ಟುಕೊಳ್ಳಬಹುದು.

*ತಾಯಿಯ ಎದೆಯ ಹಾಲನ್ನು ತೆಗೆದುಕೊಂಡು ಹತ್ತಿಯಲ್ಲಿ ನೆನೆಸಿ ಇಟ್ಟು ವಾಶ್ ಮಾಡಿ.

*ವ್ಯಾಕ್ಸಿಂಗ್, ಬ್ಲೀಚಿಂಗ್ ನಿಂದ ಮಾಡಬಹುದು.

*ನಿಂಬೆಹಣ್ಣಿನ ಸಿಪ್ಪೆಗೆ ಸ್ವಲ್ಪ ಉಪ್ಪು ಅರಿಶಿಣ ಸೇರಿಸಿ ಹಚ್ಚಿ.

*ಅನ್ನದ ಬಸಿದ ಗಂಜಿಗೆ ಹರ್ಬಲ್ ಪೌಡರ್ ನಿಂದ ಪ್ಯಾಕ್ ಮಾಡಿ ವಾಶ್ ಮಾಡಬೇಕು.

*ವಾರಕ್ಕೆ ಒಂದು ಸಲ ಬೆಣ್ಣೆಯಿಣದ ಉಜ್ಜಿ.

*ಟರ್ಕಿ ಟವೆಲನ್ನು ಬಿಸಿನೀರಿನಲ್ಲಿ ಅದ್ದಿ ಹಿಂಡಿ ಅದರ ಬಿಸಿ ಹಬೆಯನ್ನು ಕೊಡುತ್ತಾ ಇರಿ.

*ಚೇವಳು/ಚವಳು ಮಣ್ಣನ್ನು ರೋಸ್ ವಾಟರ್ ನಲ್ಲಿ ಕಲಸಿ ಹಚ್ಚಿ ವಾಶ್ ಮಾಡಿ.

* ಗೋಧಿಯ ಹಿಟ್ಟನ್ನು ಜರಡಿ ಮಾಡಿ ಬಿಳಿ ವೆನಿಗರ್ ಜೊತೆ ಹಚ್ಚಿ ಇದರಿಂದ ಕಣ್ಣಿನ ಸುತ್ತ ಇರುವ ಕಪ್ಪು ಕಲೆ ಮಾಯವಾಗುತ್ತದೆ.