ಹೈದೆರಬಾದ್ ಹೋಟೆಲ್-ನಲ್ಲಿ ಕನ್ನಡ ಚಾನೆಲ್ ಬರುತ್ತಿಲ್ಲ ಎಂದು ಹೋಟೆಲ್-ನವರಿಗೆ ಕ್ಲಾಸ್ ತಗೊಂಡು, ಕನ್ನಡ ಪ್ರೀತಿ ಮೆರೆದ ದರ್ಶನ್

0
866

ಕನ್ನಡಕ್ಕಾಗಿ ಹೈದರಾಬಾದ್ ಹೋಟೆಲ್ನಲ್ಲಿ ಜಗಳವಾಡಿದ ದರ್ಶನ್..!

ದರ್ಶನ್ ಇದ್ದಲ್ಲಿ ಕನ್ನಡ ಬೆಳಗಬೇಕು.ಕಳೆದ ನಾಲ್ಕು ತಿಂಗಳುಗಳಿಂದ ಹೈದರಾಬಾದ್ನ ರಾಮೋಜಿ ಫಿಲಂ ಸಿಟಿಯಲ್ಲಿ ಕುರುಕ್ಷೇತ್ರ ಶೂಟಿಂಗ್ ನಡೆಯುತ್ತಿದೆ. ದರ್ಶನ್ ಅಲ್ಲೇ ಸ್ಟಾರ್ ಹೋಟೆಲ್ನಲ್ಲಿ ತಂಗಿದ್ದಾರೆ. ಬೆಳಿಗ್ಗೆ ಎದ್ದರೆ ಮೇಕಪ್, ಶೂಟಿಂಗ್ ಮತ್ತೆ ಹೋಟೆಲ್ ಇವೆ ದರ್ಶನ್ ಅವರ ದಿನದ ಕೆಲಸಗಳು. ಇವೆಲ್ಲವುಗಳಿಂದ ದರ್ಶನ್ಗೆ ತುಂಬಾ ಬೋರ್ ಕೂಡ ಆಗುತಿತ್ತು.

darshan-kurukshetra-2

ಹೋಟೆಲ್ಗೆ ಹೋಗಿ ಸ್ವಲ್ಪ ಹೊತ್ತು ಟಿವಿ ನೋಡೋಣ ಎಂದರೆ ಹೋಟೆಲ್ನಲ್ಲಿ ಕನ್ನಡ ಚಾನೆಲ್ ಬರುತ್ತಿರಲಿಲ್ಲ. ಯಾವಾಗ ಹೈದರಾಬಾದ್ ಹೋಟೆಲ್ನಲ್ಲಿ ಕನ್ನಡ ಚಾನೆಲ್ ಬರುತ್ತಿರಲಿಲ್ಲವೋ ಅದನ್ನ ನೋಡಿ ದರ್ಶನ್ ರಕ್ತ ಕುದಿಯುತ್ತಿತ್ತು. ಹೋಟೆಲ್ನಲ್ಲಿ ಕೇಳಿದರೆ ಕನ್ನಡ ಚಾನೆಲ್ ಬರುವುದಿಲ್ಲ ಎಂದು ಹೇಳಿದರು ಇದರಿಂದ ದರ್ಶನ್ ಕೋಪ ಇನ್ನು ಹೆಚ್ಚಾಯಿತು. ನಮ್ಮೂರಿಗೆ ಬನ್ನಿ ಎಲ್ಲಾ ಚಾನೆಲ್ಗಳು ಬರುತ್ತವೆ ಇಲ್ಲಿ ಯಾಕೆ ಕನ್ನಡ ಬರುವುದಿಲ್ಲ ಇದು ತಾರತಮ್ಯ ಎಂದು ಹೋಟೆಲ್ ಮ್ಯಾನೇಜ್ಮೆಂಟ್ ಜೊತೆ ಜಗಳಕ್ಕೆ ಇಳಿದರು ದರ್ಶನ್ ಮತ್ತು ಕನ್ನಡ ಚಾನೆಲ್ ಹಾಕಬೇಕು ಎಂದು ಹಠಕ್ಕೆ ಕುಳಿತರು.

ಹೇಳಿಕೇಳಿ ದರ್ಶನ್ ಕನ್ನಡದ ಸೂಪರ್ ಸ್ಟಾರ್ ಅವರನ್ನ ಎದುರು ಹಾಕಿಕೊಳ್ಳುವ ಧೈರ್ಯ ಹೋಟೆಲ್ ಮ್ಯಾನೇಜ್ಮೆಂಟ್ ಗೆ ಇರಲಿಲ್ಲ, ಕೊನೆಗೆ ದರ್ಶನ್ ಹಠಕ್ಕೆ ಮಣಿದು ಹೋಟೆಲ್ನವರು ಕನ್ನಡ ಚಾನೆಲ್ ಹಾಕಿದ್ದಾರೆ. ಬರಿ ಕರ್ನಾಟಕ ಅಲ್ಲ ಎಲ್ಲೇ ಆದರೂ ಕನ್ನಡಕ್ಕಾಗಿ ಮಾತನಾಡಲು ನಾನು ಸಿದ್ದ ಎಂದು ದರ್ಶನ್ ತೋರಿಸಿಕೊಟ್ಟಿದ್ದಾರೆ.