ಸಿನಿಮಾದಲ್ಲಿ ಮಾತ್ರವಲ್ಲ, ನಿಜ ಜೀವನದಲ್ಲಿಯೂ ಹೀರೋ ಆದ ಚಾಲೆಂಜಿಂಗ್ ಸ್ಟಾರ್ ದರ್ಶನ್…!!

0
822

ಚಾಲೆಂಜಿಂಗ್ ಸ್ಟಾರ್ ದರ್ಶನ್-ರವರ ಪ್ರತಿಯೊಂದು ಸಿನೆಮಾಗೂ ಬಹಳ ಬೇಡಿಕೆ ಇರೋದಂತು ಎಲ್ಲರಿಗು ಗೊತ್ತಿರೋ ವಿಷಯಾನೇ, ಅವರ ಕೋಟ್ಯಾಂತರ ಅಭಿಮಾನಿಗಳಿಗಂತೂ ಯಾವಾಗ ದರ್ಶನ್-ರವರ ಸಿನೆಮಾ ಬಿಡುಗಡೆ ಆಗುತ್ತೋ ಅಂತ ಕಾಯುತ್ತಾನೆ ಇರ್ತಾರೆ. ಆದರೆ ಈ ಬಾರಿ ಅವರು ಸುದ್ದಿಯಲ್ಲಿ ಇರೋದು ಸಿನೆಮಾದಿಂದಲ್ಲ, ಕನ್ನಡ ಅಭಿಮಾನದಿಂದ.

ಹೌದು, ದರ್ಶನ್ ಕೇವಲ ಸಿನಿಮಾದಲ್ಲಿ ಹೀರೋ ಆಗದೇ ನಿಜ ಜೀವನದಲ್ಲೂ ಹೀರೋ ಆಗಿದ್ದಾರೆ. ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆಯ ಬಬಲಾದ್ ಗ್ರಾಮದಲ್ಲಿ ಒಂದು ಕನ್ನಡ ಶಾಲೆ ಇದೆ. ಇಲ್ಲಿಯ ಕನ್ನಡ ಶಾಲೆಯ ಸ್ಥಿತಿ ನೋಡಿದರೆ, ಕನ್ನಡಿಗರಾದ ನಮಗೆ ಬೇಜಾರಾಗುತ್ತದೆ, ಇದನ್ನು ಮನಗಂಡ ದರ್ಶನ್, ಶಾಲೆಯ ಅಭಿವೃದ್ದಿಗಾಗಿ ಒಂದು ಕೊಡುಗೆಯನ್ನು ನೀಡಿದ್ದಾರೆ.

ಸೊಲ್ಲಾಪುರ ಜಿಲ್ಲೆಯ ಬಬಲಾದ್ ಗ್ರಾಮ, ಗಡಿಗ್ರಾಮ ಆಗಿದ್ದರಿಂದ ಈ ಶಾಲೆಯ ಅಭಿವೃದ್ಧಿಗೆ ಎರಡು ರಾಜ್ಯ ಸರ್ಕಾರಗಳು ಇತ್ತ ಗಮನ ಹರಿಸಿಲ್ಲ. ದರ್ಶನ್ ಈ ಶಾಲೆಯ ಬಗ್ಗೆ ಮಾಹಿತಿ ಪಡೆದು, ಅಲ್ಲಿಯ ಶಿಕ್ಷಕರಾದ ಶರಣಪ್ಪ ಪುಲರಿ ಎಂಬವರನ್ನು ಕರೆಸಿ 127 ಮಕ್ಕಳ ಡಿಜಿಟಲ್ ಶಿಕ್ಷಣಕ್ಕಾಗಿ ಒಟ್ಟು 30 ಟ್ಯಾಬ್‍ಗಳನ್ನ ಕೊಡಿಸಿದ್ದಾರೆ.

ರಾಜ್ಯದ ಕನ್ನಡ ಶಾಲೆಗೆ ಮಕ್ಕಳು ಬರುತ್ತಿಲ್ಲ ಎಂಬ ಕಾರಣಕ್ಕೆ ಶಾಲೆಗಳು ಮುಚ್ಚುತ್ತಿವೆ, ಇರುವ ಶಾಲೆಗಳಲ್ಲಿ ಸರಿಯಾದ ಸೌಲಭ್ಯವಿಲ್ಲ. ಇದರ ನಡುವೆ ಬೇರೆ ರಾಜ್ಯದಲ್ಲಿರುವ ಶಾಲೆಗಳನ್ನು ಸರ್ಕಾರ ತಲೆ ಕೆಡಿಸಿಕೊಂಡಿಲ್ಲ. ಸೋಲಾಪುರದ, ಇಂತಹ ದಯನೀಯ ಸ್ಥಿಯಲ್ಲಿರುವ ಶಾಲೆಗೆ ಸಹಾಯ ಮಾಡಿ ಕನ್ನಡಾಭಿಮಾನವನ್ನು ಎತ್ತಿ ಹಿಡಿದಿದ್ದಾರೆ ನಮ್ಮ ಚಾಲೆಂಜಿಂಗ್ ಸ್ಟಾರ್.