ದರ್ಶನ್ ಕುರುಕ್ಷೇತ್ರಕ್ಕೆ ಕರ್ಣನಾಗಿ ಎಂಟ್ರಿ ಕೊಟ್ಟ ಶಿವರಾಜ್ ಕುಮಾರ್ ಇದನ್ನು ದರ್ಶನ್ ಒಪ್ಪಿಕೊಳ್ಳುತ್ತಾರ…!

0
1285

ಚಾಲೆಂಜಿಂಗ್ ಸ್ಟಾರ್ ದರ್ಶನ್ 50 ನೇ ಸಿನಿಮಾ ಭಾರಿ ಸುದ್ದಿ ಮಾಡುತ್ತಿದ್ದು ಇದರ ಬೆನ್ನಲ್ಲೇ ಮತ್ತೊಂದು ಸುದ್ದಿ ಬಂದಿದೆ.
ಶಿವರಾಜ್ ಕುಮಾರ್ ಕುರುಕ್ಷೇತ್ರ ಸಿನಿಮಾದಲ್ಲಿ ಕರ್ಣನ ಪಾತ್ರ ಮಾಡಲಿದ್ದಾರೆ ಅನ್ನೋ ಸುದ್ದಿ. ಆದ್ರೆ ಇದಕ್ಕೆ ದರ್ಶನ್ ಒಪ್ಪಿಕೊಳ್ಳುತ್ತಾರ ಅನ್ನೋದೇ ದೊಡ್ಡ ವಿಚಾರ.

darshan kurukshetra-1

ಯಾಕೆ ಅಂದ್ರೆ ದರ್ಶನ್ ಆಪ್ತ ಮೂಲಗಳ ಪ್ರಕಾರ ದರ್ಶನ್ ಮತ್ತು ಶಿವರಾಜ್ ಕುಮಾರ್ ನಡುವೆ ಸರಿಯಾದ ಸ್ನೇಹ ಸಂಬಂಧ ಇಲ್ಲ ಎನ್ನುವ ಸುದ್ದಿ ಇದೆ. ಮತ್ತು ದರ್ಶನ್ ಕೆಲವೊಂದು ವಿಚಾರದ್ಲಲಿ ಶಿವರಾಜ್ ಕುಮಾರ್ ಅವರನ್ನು ಒಪ್ಪುವುದಿಲ್ಲ ಯಾಕೆ ಅಂದ್ರೆ ಈ ಹಿಂದೆ ದರ್ಶನ್ ಮತ್ತು ಶಿವಣ್ಣ ನಡುವೆ ಮುಸುಕಿನ ಗುದ್ದಾಟ ಇತ್ತು ಎಂದು ಹೇಳಲಾಗಿದೆ ಹೀಗಿರುವ ದರ್ಶನ್ ೫೦ ನೇ ಸಿನಿಮಾದಲ್ಲಿ ಶಿವಣ್ಣ ಕರ್ಣನ ಪಾತ್ರ ಮಾಡುವುದನ್ನು ಹೇಗೆ ಒಪ್ಪಿಕೊಳ್ಳುತ್ತಾರೆ ಅನ್ನೋದು ಅಭಿಮಾನಿಗಳ ಮುಂದಿರುವುವ ಪ್ರಶ್ನೆಯಾಗಿದೆ.

darshan kurukshetra-3
source:youtube

ಮೆಗಾ ಪ್ರಾಜೆಕ್ಟ್ ಆಗಿರುವ ಕುರುಕ್ಷೇತ್ರವನ್ನು ತ್ರಿಡಿ ಎಫೆಕ್ಟ್ ನಲ್ಲಿ ನಿರ್ದೇಶಕ ನಾಗಣ್ಣ ತಯಾರಿಸುತ್ತಿದ್ದಾರೆ. ಅಂಬರೀಷ್, ರವಿಚಂದ್ರನ್, ಸ್ನೇಹ, ಹರಿಪ್ರಿಯಾಸ ರೆಜಿನಾ ಕಾಸ್ಸಂದ್ರ, ಶಶಿಕುಮಾರ್, ಲಕ್ಷ್ಮಿ, ಸಾಯಿ ಕುಮಾರ್, ದ್ಯಾನಿಶ್ ಅಖ್ತರ್ ಸೈಫಿ ಸೇರಿದಂತೆ ಹಲವು ಪಾತ್ರದಾರಿಗಳ ಆಯ್ಕೆ ಈಗಾಗಲೇ ಅಂತಿಮವಾಗಿದೆ.

darshan kurukshetra-4
source:Rediffmail

ಪ್ರಮುಖ ಪಾತ್ರಗಳಾದ ಕರ್ಣ ಮತ್ತು ಅರ್ಜುನನ ಪಾತ್ರಗಳನ್ನು ಯಾರು ನಿರ್ವಹಿಸಲಿದ್ದಾರೆ ಎಂಬ ಬಗ್ಗೆ ಸಿನಿಮಾ ತಂಡ ಎಲ್ಲಿಯೂ ಮಾಹಿತಿ ನೀಡಿರಲಿಲ್ಲ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕುರುಕ್ಷೇತ್ರದಲ್ಲಿ ಪಾಂಡವರ ತಂಡದಲ್ಲಿ ನಟಿಸಲು ಅರ್ಜುನ್ ಸರ್ಜಾ ಒಪ್ಪಿದ್ದಾರೆ. ಮತ್ತೊಂದು ವಿಷಯವೆಂದರೇ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಚಿತ್ರದಲ್ಲಿ ನಟಿಸಲು ಒಪ್ಪಿದ್ದಾರೆ.

darshan kurukshetra-2