ದರ್ಶನ್ ಅಭಿನಯದ ಕುರುಕ್ಷೇತ್ರ ಸಿನಿಮಾದ ಅಧಿಕೃತ ಫೋಟೋಸ್ ಬಿಡುಗಡೆಯಾಗಿವೆ ದರ್ಶನ್ ಲುಕ್ ಸೂಪರ್ ನೀವು ನೋಡಿ..!

0
1528

ಕನ್ನಡ ಸಿನಿಮಾ ಇತಿಹಾಸದಲ್ಲಿ ದರ್ಶನ್ ನಟಿಸಲಿರುವ ಕುರುಕ್ಷೇತ್ರ ಸಿನಿಮಾ ಭಾರಿ ಸುದ್ದಿ ಮಾಡುತ್ತಿದ್ದು ಎಲ್ಲಾರ ಕಣ್ಣು ಕನ್ನಡ ಸಿನಿಮಾದತ್ತ ನೋಡುವಂತೆ ಮಾಡುತ್ತಿರುವ ಸಿನಿಮಾ ಅಂದ್ರೆ ಅದು ಕುರುಕ್ಷೇತ್ರ ಸಿನಿಮಾ.

darshan-kurukshetra-1

ಚಾಲೆಂಜಿಂಗ್ ಸ್ಟಾರ್ ದರ್ಶನ್ ದುರ್ಯೋಧನನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಇವರ 50ನೇ ಚಿತ್ರವಾಗಿದೆ. ದರ್ಶನ್ ಅವರ ದುರ್ಯೋಧನ ಪಾತ್ರದ ಫೋಟೋ ಶೂಟ್ ಇದಾದ್ರೆ, ಇನ್ನು ಜಾಗ್ವಾರ್ ಖ್ಯಾತಿಯ ನಿಖಿಲ್ ಕುಮಾರ್ ಅವರು ಈ ಚಿತ್ರದಲ್ಲಿ ಅಭಿಮಾನ್ಯು ಪಾತ್ರವನ್ನ ಮಾಡಲಿದ್ದಾರೆ.

darshan-kurukshetra-2

ಈ ಚಿತ್ರಲ್ಲಿ ರೆಬಲ್ ಸ್ಟಾರ್ ಅಂಬರೀಶ್, ಕ್ರೇಜಿಸ್ಟಾರ್ ರವಿಚಂದ್ರನ್, ಆ್ಯಕ್ಷನ್-ಕಿಂಗ್ ಅರ್ಜುನ್ ಸರ್ಜಾ, ಡೈಲಾಗ್ ಕಿಂಗ್ ಸಾಯಿಕುಮಾರ್, ಶಶಿಕುಮಾರ್, ಆರ್ಮುಗಂ ಖ್ಯಾತಿಯ ರವಿಶಂಕರ್, ಶ್ರೀನಿವಾಸ್ ಮೂರ್ತಿ ಹಾಗೂ ಪ್ರಣಯಾ ರಾಜ ಶ್ರೀನಾಥ್ ಕುರುಕ್ಷೇತ್ರದಲ್ಲಿ ಕಾಣಿಸಿಕೊಳ್ಳುವುದು ಪಕ್ಕಾ ಎಂದು ಫೋಟೋ ಶೂಟ್ ಹೇಳುತ್ತಿದೆ.

darshan-kurukshetra-3

ದ್ರೌಪದಿ ಪಾತ್ರದಲ್ಲಿ ಬಹುಭಾಷ ನಟಿ ಸ್ನೇಹ ಕಂಗೊಳಿಸೊದು ಖಚಿತವಾಗಿದೆ. ಜೊತೆಗೆ ನೀರ್‍ದೊಸೆ ಬೆಡಗಿ ಹರಿಪ್ರಿಯಾ, ಹಿರಿಯ ನಟಿ ಲಕ್ಷ್ಮೀ, ಪವಿತ್ರಾ ಲೋಕೇಶ್ ಕೂಡ ಈ `ಕುರುಕ್ಷೇತ್ರ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

darshan-kurukshetra-4

ಈ ತಿಂಗಳ 6ನೇ ತಾರೀಕು ಈ ಸಿನಿಮಾ ಮೂರ್ತ ನೆಡೆಯಲಿದೆ ಈ ಮೂರ್ತ ಕಾರ್ಯಕ್ರಮಕ್ಕೆ ಹಲವು ಗಣ್ಯರು ಭಾಗವಹಿಸುವ ಸಾಧ್ಯತೆ ಹೆಚ್ಚಿದೆ.ಕುರುಕ್ಷೇತ್ರ ಬರೋಬ್ಬರಿ 50 ರಿಂದ 60ಕೋಟಿ ವೆಚ್ಚದಲ್ಲಿ ವೃಷಭಾದ್ರಿ ಪ್ರೊಡಕ್ಷನ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ನೂತನ ತಂತ್ರಜ್ಞನದಲ್ಲಿ ಬಾಹುಬಲಿ ಚಿತ್ರಕ್ಕಾಗಿ ದುಡಿದ ತಂತ್ರಜ್ಞಾನಿಗಳ ಕೈಚಳದಲ್ಲಿ ಕನ್ನಡದ ಕುರುಕ್ಷೇತ್ರ ನಿರ್ಮಾಣವಾಗಲಿದೆ. ಈ ಸಿನಿಮಾ ಹೇಗಿರುತ್ತೆ ಅನ್ನೋದು ಕನ್ನಡ ಅಭಿಮಾನಿಗಳ ಕಾತುರವಾಗಿದೆ.

darshan-kurukshetra-5