ಈ ವಿಷಯ ದರ್ಶನ್ ಅಭಿಮಾನಿಗಳಿಗೆ ಭಾರಿ ಸಂತಸ ಉಂಟು ಮಾಡೋದಂತೂ ಗ್ಯಾರಂಟಿ!!

0
1075

ಚಾಲೆಂಜಿಂಗ್ ಸ್ಟಾರ್ ದರ್ಶನ್-ರವರ ಪ್ರತಿಯೊಂದು ಸಿನೆಮಾಗೂ ಬಹಳ ಬೇಡಿಕೆ ಇರೋದಂತು ಎಲ್ಲರಿಗು ಗೊತ್ತಿರೋ ವಿಷಯಾನೇ, ಅವರ ಕೋಟ್ಯಾಂತರ ಅಭಿಮಾನಿಗಳಿಗಂತೂ ಯಾವಾಗ ದರ್ಶನ್-ರವರ ಸಿನೆಮಾ ಬಿಡುಗಡೆ ಆಗುತ್ತೋ ಅಂತ ಕಾಯುತ್ತಾನೆ ಇರ್ತಾರೆ.

ಈ ಮಧ್ಯೆ, ದರ್ಶನ್ ಅಭಿನಯದ ಬಹುಕೋಟಿ ನಿರ್ಮಾಣದ ಕುರುಕ್ಷೇತ್ರ, ಪ್ರತಿವಾರನೂ ಗಾಂಧಿನಗರದಲ್ಲಿ ಸುದ್ದಿ ಮಾಡ್ತಾನೆ ಇದೆ. ಕುರುಕ್ಷೇತ್ರ ಒಂದು ಸಾಮಾನ್ಯ ಸಿನಿಮಾ ಅಂತೂ ಅಲ್ವೇ ಅಲ್ಲ, ಬೃಹತ್ ಸೆಟ್-ಗಳು, ಆಧುನಿಕ ಅನಿಮೇಷನ್ ತಂತ್ರಜ್ಞಾನ, ಅದ್ಭುತ ನಟರುಗಳು. ಒಟ್ಟಾರೆಯಾಗಿ ಹೇಳಬೇಕು ಅಂದ್ರೆ ಕುರುಕ್ಷೇತ್ರ ಸಿನಿಮಾ ಕನ್ನಡ ಚಿತ್ರರಂಗದ ಎಲ್ಲ ದಾಖಲೆಗಳನ್ನು ಮುರಿದು ಹಾಕುವುದರಲ್ಲಿ ಸಂಶಯವೇ ಇಲ್ಲ. ಅದೇ ರೀತಿಯ ಒಂದು ಸುದ್ದಿ ಗಾಂಧಿನಗರದಿಂದ ಕೇಳಿ ಬಂದಿದೆ.

ಚಿತ್ರದ ನಿರ್ಮಾಪಕರಾದ ಮುನಿರತ್ನರವರು, ಕುರುಕ್ಷೇತ್ರ ಚಿತ್ರದ ಹಿಂದಿ ಡಬ್ಬಿಂಗ್ ಹಕ್ಕನ್ನು ಬರೋಬ್ಬರಿ ೯ ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿದ್ದಾರೆ. ಇದು ಕೇವಲ ದರ್ಶನ್ ಫ್ಯಾನ್ಸ್ ಮಾತ್ರವಲ್ಲ ಇಡೀ ಕನ್ನಡ ಚಿತ್ರದ ಪ್ರೇಕ್ಷಕರೆಲ್ಲರೂ ಹೆಮ್ಮೆ ಪಡುವ ವಿಚಾರ. ಕನ್ನಡ ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ ೯ ಕೋಟಿ ಗಳಿಸುವುದೇ ದೊಡ್ಡ ವಿಚಾರ, ಅದರಲ್ಲಿ ಸಿನಿಮಾ ಚಿತ್ರೀಕರಣದ ಮುಂಚೆಯೇ ಡಬ್ಬಿಂಗ್ ಹಕ್ಕುಗಳಿಗೆ ಭಾರಿ ಬೇಡಿಕೆ ಇರುವುದು ಕನ್ನಡ ಚಿತ್ರೋದ್ಯಮಕ್ಕೆ ಹೆಮ್ಮೆಯ ವಿಷಯ.

ಡಬ್ಬಿಂಗ್ ಹಕ್ಕುಗಳಿಗೆ ಭಾರಿ ಬೇಡಿಕೆ ಕೇವಲ ತೆಲುಗು ಮತ್ತೆ ತಮಿಳು ಚಿತ್ರಗಳಿಗೆ ಇರುತಿತ್ತು, ಈಗ ಕನ್ನಡ ಚಿತ್ರವೊಂದು ಇಷ್ಟೊಂದು ದೊಡ್ಡ ದಾಖಲೆ ಬರೆದಿರುವುದು, ಕುರುಕ್ಷೇತ್ರದ ಥರಾನೇ ದೊಡ್ಡ ಬಜೆಟ್ ಚಿತ್ರ ಕನ್ನಡ ಚಿತ್ರಗಳಿಗೆ ಬರಬಹುದು ಎಂದು ಪರಿಣಿತರ ಅಭಿಪ್ರಾಯ. ಒಟ್ಟಿನಲ್ಲಿ ತೆಲುಗಿನ ಬಾಹುಬಲಿ ವಿಶ್ವದಾದ್ಯಂತ ದೊಡ್ಡ ಹೆಸರು ಮಾಡಿತ್ತು, ಅದೇ ರೀತಿ ನಮ್ಮ ಕನ್ನಡದ ಕುರುಕ್ಷೇತ್ರ ದೊಡ್ಡ ಮಟ್ಟದಲ್ಲಿ ಹೆಸರು ಮಾಡಲಿ ಎಂಬುದೇ ನಮ್ಮ ಆಶಯ.