ದರ್ಶನ್ ‘ಕುರುಕ್ಷೇತ್ರ’ಕ್ಕೆ ಮತ್ತೊಬ್ಬ ಸ್ಟಾರ್ ಎಂಟ್ರಿ…!

0
713

ನಿರ್ಮಾಪಕ ಮುನಿರತ್ನ ತಮ್ಮ ಹುಟ್ಟುಹಬ್ಬದ ದಿನವಾದ ಜುಲೈ ೨೩ ರಂದು ‘ಕುರುಕ್ಷೇತ್ರ’ ಸಿನೆಮಾಗೆ ಚಾಲನೆ ನೀಡಲು ಮುಂದಾಗಿದ್ದಾರೆ. ಹೈದರಾಬಾದಿನ ರಾಮೋಜಿ ಸ್ಟುಡಿಯೋಸ್ ನಲ್ಲಿ ಇದಕ್ಕಾಗಿ ಬೃಹತ್ ಸೆಟ್ ಸೃಷ್ಟಿಸಲಾಗುತ್ತಿದ್ದು, ಚಿತ್ರೀಕರಣ ಶೀಘ್ರದಲ್ಲಿಯೇ ಪ್ರಾರಂಭವಾಗಲಿದೆ.

ಮತೊಬ್ಬ ಸ್ಟಾರ್ ಎಂಟ್ರಿ ಯಾರು ಅಂತೀರಾ ಕನ್ನಡ ಚಿತ್ರ ರಂಗದ ರಸಿಕ ವಿ. ರವಿಚಂದ್ರನ್ ಎಸ್ ಕುರುಕ್ಷೇತ್ರ’ಕ್ಕೆ ರವಿಚಂದ್ರನ್ ಎಂಟ್ರಿ ಕೊಟ್ಟಿದ್ದಾರೆ ಅಧಿಕೃತವಾಗಿ ಈ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ.
ಕಲಾ ನಿರ್ದೇಶಕ ಕಿರಣ್ ಈ ಸೆಟ್ ನಿರ್ಮಿಸಲು ದುಡಿಯುತ್ತಿದ್ದು, ಇದಕ್ಕೆ ಕನಿಷ್ಠ ಎರಡು ವರೆ ತಿಂಗಳು ಹಿಡಿಯಲಿದೆ ಎನ್ನುತ್ತವೆ ನಿರ್ಮಾಣ ತಂಡದ ಮೂಲಗಳು. ಆಗಸ್ಟ್ ಮೊದಲ ವಾರದಿಂದ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆ ಇದೆಯಂತೆ.
ದರ್ಶನ್ ಫೋಟೋ ಶೂಟ್ ಕೂಡ ನಡೆದಿದೆ ಎಂದು ತಿಳಿಸುವ ಮೂಲಗಳು “ದರ್ಶನ್ ಈಗ ಸದ್ಯಕ್ಕೆ ‘ತಾರಕ್’ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.
“ಇದು ಐತಿಹಾಸಿಕ-ಪುರಾಣ ಚಿತ್ರವಾಗಿರುವುದರಿಂದ ಅವರ ಉಡುಪುಗಳನ್ನು ಸಿದ್ಧಪಡಿಸಲು ನಿರ್ಧಿಷ್ಟ ಅಳತೆ ಬೇಕಾಗುತ್ತದೆ. ದುರ್ಯೋಧನದ ಪಾತ್ರ ಮಾಡಲಿರುವ ದರ್ಶನ್ ನಾಲ್ಕು ವಿಭಿನ್ನ ಅವತಾರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ” ಎನ್ನುತ್ತವೆ.
ಉಳಿದ ತಾರಾಗಣದ ಆಯ್ಕೆಯಲ್ಲಿ ನಿರತರಾಗಿರುವ ಚಿತ್ರತಂಡ ಹಂಸಲೇಖ ಅವರ ಸಂಗೀತ ಚಿತ್ರಕ್ಕಿರಲಿದೆ ಎಂದು ಧೃಢೀಕರಿಸಿದೆ.