ದರ್ಶನ್-ರವರು ಅವರ ದುಬಾರಿ ಕಾರಿಗೆ ಸರಿಯಾಗಿ ತೆರಿಗೆ ಕಟ್ಟದೆ, ತೆರಿಗೆ ವಂಚನೆ ಮಾಡಿದ್ದಾರೆಯೇ?

0
3073

ಇತ್ತೀಚೆಗಷ್ಟೇ ಚಾಲೆಜಿಂಗ್ ಸ್ಟಾರ್ ಖರೀದಿಸಿದ ದುಬಾರಿ ಲ್ಯಾಂಬೋರ್ಗಿನಿ ಕಾರನ್ನು ನೋಡಲು ದರ್ಶನ್ ಮನೆಗೆ ಸ್ಟಾರ್ ನಂತರ ದಂಡೇ ಹರಿದು ಬಂದಿತ್ತು. ಸಂಕ್ರಾಂತಿ ಹಬ್ಬದ ದಿನದಂದು ದರ್ಶನ್ ಲ್ಯಾಂಬೋರ್ಗಿನಿ ಕಾರು ಖರೀದಿಸಿದ್ದರು. ಈಗ ಆ ಕಾರಿನ ನಂಬರ್ ಪ್ಲೇಟ್ ಮೇಲೆ ರಾಜ್ಯ RTO ಅಧಿಕಾರಿಗಳ ಕಣ್ಣು ಬಿದ್ದಿದೆ.

ಹೌದು, ದರ್ಶನ್ ಅವರ ಹೊಸ ಲ್ಯಾಂಬೋರ್ಗಿನಿ ಅವೆಂಟಡೊರ್ ಹೈ-ಎಂಡ್ ಸ್ಫೋರ್ಟ್ಸ್ ಕಾರಿನ ಮೇಲೆ ಈಗ RTO ಕಣ್ಣುಬಿದ್ದಿದೆ. ಈ ಕಾರು ಪುದುಚೇರಿ ರಿಜಿಸ್ಟ್ರೇಷನ್ ಸಂಖ್ಯೆ (PY01 CD 5008) ಹೊಂದಿರುವುದು ಇದಕ್ಕೆ ಕಾರಣ. ಹಾಗಾದರೆ ಕರ್ನಾಟಕದಲ್ಲಿ ಬಿಟ್ಟು ಬೇರೆ ಎಲ್ಲಿಯೂ ರೆಜಿಸ್ಟ್ರೇಷನ್ ಮಾಡಿಸಬಾರದೇ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ಕಾರನ್ನು ಬೇರೆ ರಾಜ್ಯದಿಂದ ರಿಜಿಸ್ಟ್ರೇಷನ್‌ ಮಾಡಿಸಿಕೊಂಡು ಬರುವುದು ತಪ್ಪಲ್ಲ. ಆದರೆ, ಇಲ್ಲಿಗೆ ಬಂದ ಮೇಲೆ ಇಲ್ಲಿನ ರೋಡ್‌ ಟ್ಯಾಕ್ಸ್‌ ಕಟ್ಟಿ ಅದನ್ನು ಇಲ್ಲಿಗೆ ಟ್ರಾನ್ಸ್‌ಫರ್‌ ಮಾಡಿಸಿಕೊಳ್ಳಬೇಕು. ಅದಕ್ಕೆ ಒಂದು ವರ್ಷಗಳ ಸಮಯ ನೀಡಲಾಗುತ್ತದೆ. ಅಷ್ಟಕ್ಕೂ, ಅಷ್ಟು ದುಬಾರಿ ಬೆಲೆಯ ಕಾರು ಕೊಂಡ ಬಾಕ್ಸ್ ಆಫೀಸ್ ಸುಲ್ತಾನ ಅಲ್ಲಿ ಏಕೆ ರೆಜಿಸ್ಟ್ರೇಷನ್ ಮಾಡಿಸಿದರು, ಕರ್ನಾಟಕದಲ್ಲಿ ಏಕೆ ಮಾಡಿಸಲಿಲ್ಲ ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು ಅಲ್ವಾ.

ನಮ್ಮ ರಾಜ್ಯದಲ್ಲಿ ತೆರಿಗೆ ಹೆಚ್ಚು, ಅದಕ್ಕೆ ದರ್ಶನ್ ಪುದುಚೆರಿಯಲ್ಲಿ ಮಾಡಿಸಿದ್ದಾರೆ. ದರ್ಶನ್, ರಿಜಿಸ್ಟ್ರೇಷನ್ ಮಾಡಿಸದಷ್ಟು ಹೆಚ್ಚು ಟ್ಯಾಕ್ಸ್ ನಮ್ಮ ರಾಜ್ಯದಲ್ಲಿದೆಯೇ ಎನ್ನುತ್ತೀರಾ. ಪುದುಚೇರಿಗೆ ಹೋಲಿಸಿದರೆ ಕರ್ನಾಟಕದಲ್ಲಿ, “ಲೈಫ್‌ಟೈಮ್ ಟ್ಯಾಕ್ಸ್” ತುಂಬಾ (ಕನಿಷ್ಠ ಪಕ್ಷ ಶೇ.20) ಹೆಚ್ಚು ಇದೆ.