ಕುಸ್ತಿಪೈಲ್ವಾನ್ ಆಗಲು ದರ್ಶನ್ ದಿನಕ್ಕೆ 3 ಕೋಳಿ, 25 ಚಪಾತಿ, 15 ಕಲಂಗಡಿ ಜ್ಯೂಸ್ ಸೇವಿಸಿ ಪೈಲ್ವಾನ್ ಆಗ್ತಿರೋ ತಯಾರಿ ಕೇಳಿದ್ರೆ ದರ್ಶನ್-ರ ಶ್ರಮಕ್ಕೆ ಸಲ್ಯೂಟ್ ಹೊಡಿತೀರ!!

1
853

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪಾತ್ರದ ಮೂಲಕ ಹೆಸರುಮಾಡಿ ಜನರ ಮನಗೆದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸದೇ ಇರುವ ಪಾತ್ರ ಯಾವುದು ಬಾಕಿಯಿದೆ ಹೇಳಿ? ಲವರ್ ಬಾಯ್, ಮಚ್ಚು ಲಾಂಗ್, ಸ್ವಾತಂತ್ರ ಹೋರಾಟಗಾರ, ಕೂಲಿ, ಪೊಲೀಸ್, ಆಟೋ ಡ್ರೈವರ್, ಫ್ಯಾಮಿಲಿ ಸ್ಟೋರಿ, ಕನ್ನಡ ಅಭಿಮಾನ, ಪೌರಾಣಿಕ, ಇಂತಹ ಇತಿಹಾಸ ಮತ್ತು ಸಂದೇಶವನ್ನು ಸಾರುವ ದರ್ಶನ ಅಭಿನಯದ ಸಿನಿಮಾಗಳು 50 ರ ಗಡಿದಾಟಿವೆ ಈ ಎಲ್ಲ ಸಿನಿಮಾಗಳಲ್ಲಿ ಅಚ್ಚಕನ್ನಡದ ಅಭಿಮಾನ ಮತ್ತು ಕನ್ನಡಿಗರ ಪ್ರೀತಿಯನ್ನು ಆಡುಭಾಷೆಯಲ್ಲಿ ಜನರಿಗೆ ತಿಳಿಸಿಕೊಡುವ ದರ್ಶನ್ ಗೆ ಇದೆ ಕಾರಣಕ್ಕೆ ಜನ್ರು ಇಷ್ಟೊಂದು ಹಚ್ಚಿಕೊಂಡಿರೋದು ಅನ್ಸುತ್ತೆ.

ದರ್ಶನ್ ಅವರ ಹೊಸ ಸಿನಿಮಾ ಬರುವುದು ಗೊತ್ತಾದರೆ ಸಾಕು ಅಭಿಮಾನಿಗಳ ಮನದಲ್ಲಿ ಪ್ರಶ್ನೆಗಳ ಸುರಿಮಳೆನೆ ಮೂಡುತ್ತೆ ಏಕೆಂದರೆ ವರ್ಷದಲ್ಲಿ ಎರಡು ಮೂರೂ ಸಿನಿಮಾ ಮಾಡುವ ಮೂಲಕ ಪ್ರತಿಯೊಂದು ಸಿನಿಮಾದಲ್ಲಿ ಹೊಸ ಹೊಸ ಪಾತ್ರದಲ್ಲಿ ದರ್ಶನವಾಗುವ ದರ್ಶನ ಹೊಸ ಸಿನಿಮಾದಲ್ಲಿ ಯಾವ ಪಾತ್ರಮಾಡಿದ್ದಾರೋ ಎಂಬ ಯೋಚನೆ, ಕಾತುರ ಎಲ್ಲರಮನದಲ್ಲಿರುತ್ತೆ. ಈಗಾಗಲೇ ಎಲ್ಲ ಪಾತ್ರದಲ್ಲಿ ಮಿಚಿದ ದರ್ಶನ್ ಈಗ “ಕುಸ್ತಿಪಟು” ಆಗಿ ತೆರೆಯಮೇಲೆ ಬರುತ್ತಿದ್ದಾರೆ. ಈ ಸಿನಿಮಾಕ್ಕೆ ಒಪ್ಪಿಕೊಳುವ ಮೊದಲು ಒಂದು ಕಂಡೀಷನ್ ಮಾಡಿದ್ರು ಅಂತೆ ಅದು ಏನ್ ಅಂದ್ರೆ “ಈ ಸಿನಿಮಾದಲ್ಲಿ ಸಂಪೂರ್ಣವಾಗಿ ಕನ್ನಡಿಗರೇ ಇರಬೇಕು” ಅಂತ ಇನ್ನೂ ಪ್ಯೂರ್ ಕನ್ನಡಿಗರಿಂದ ಹೊರಬರುತ್ತಿರುವ ಈ ಸಿನಿಮಾ ನೋಡಲು ಎರಡು ಕಣ್ಣುಗಳು ಸಾಲುತೋ ಇಲ್ಲೋ ಗೊತ್ತಿಲ್ಲ, ಅಂತಹ ಕದರ್ ಈ ಸಿನಿಮಾದಲ್ಲಿದೆ. ಆ ಕದರ್ ಏನ್ ಅಂದ್ರೆ ಇಲ್ಲಿದೆ ನೋಡಿ.

ದರ್ಶನ್ ಅವರು ರಾಷ್ಟ್ರೀಯ ಕುಸ್ತಿಪಟು “ಕಾರ್ತಿಕ್ ಕಾಟೇ” ಅವರ ಜೀವನ ಚರಿತ್ರೆ ಆಧಾರಿತ ಚಿತ್ರದಲ್ಲಿ ಕುಸ್ತಿ ಪಟುವಾಗಿ ಮಾಡುತ್ತಿರುವ ಸಿನಿಮಾ “ಕಾಟೇರಾ” ಈ ಸಿನಿಮಾ ಸೆಟ್ಟೇರಲಿದೆ. ಹಾಗಂತ ಗಾಂಧಿನಗರದಲ್ಲಿ ಹೆಸರು ಹರದಾಡುತ್ತಿದೆ. ಈ ಚಿತ್ರಕ್ಕೆ ನಾಯಕ ನಟ ದರ್ಶನ ಈಗಾಗಲೇ ಸಾಕಷ್ಟು ತಯಾರಿ ನಡೆಸಿದ್ದಾರೆ ಆ ತಯಾರಿ ಹೇಗೆ ಇದೆ ಅಂದ್ರೆ ದಿನಕ್ಕೆ 3 ಕೋಳಿ 25 ಚಪಾತಿ 15 ಗ್ಲಾಸ್ ಕಲಂಗಡಿ ಜ್ಯೂಸ್ ಕುಡಿದು ತಾಲೀಮು ನಡೆಸಿದ್ದಾರೆ. ಈ ಸಿನಿಮಾದ ಇನ್ನೊಂದು ‘ಜಲಕ್ ಅಂದ್ರೆ’ ದರ್ಶನಗೆ ಕನ್ನಡಿಗರ ಮೇಲೇನೆ ತುಂಬಾ ಪ್ರೀತಿ ಅದರಲ್ಲಿ ಕಷ್ಟದಿಂದ ಮೇಲೆ ಬಂದ ಕನ್ನಡಿಗರನ್ನು ನೋಡಿದ್ರೆ ಎಲ್ಲಿಲದ ಗೌರವ, ಇದೆ ಕಾರಣಕ್ಕೆ ಹಾವೇರಿ ಮೂಲದ ಬಡ ಕುಸ್ತಿಪಟು ಕಾರ್ತಿಕ ಕಾಟೇ ಅವರ ಜೀವನ ಆಧಾರಿತ ಸಿನಿಮಾ ಮಾಡುತ್ತಿದ್ದಾರೆ.

ಈ ಕಥೆಯ ರಿಯಲ್​ ಹೀರೊ ಕಾರ್ತಿಕ್ ಕಾಟೇ ಚಿಕ್ಕ ಬಡ ಕುಟುಂಬದಲ್ಲಿ ಹುಟ್ಟಿ ರಾಷ್ಟೀಯ ಮಟ್ಟದಲ್ಲಿ ಅದ್ಭುತ ಕುಸ್ತಿ ಪಟುವಾಗಿ ಎರಡು ಬಾರಿ ದಸರಾ ಕೇಸರಿ ಪ್ರಶಸ್ತಿ ಗೆದ್ದಿದ್ದಾರೆ. 2017ರಲ್ಲಿ ದಸರಾ ಕಂಠೀರವ ಎನಿಸಿಕೊಂಡು ಕರ್ನಾಟಕ-ಮಹಾರಾಷ್ಟ್ರದಲ್ಲಿ ಕಾಟೇರಾ ಹೆಸರು ಮನೆಮಾತಾಗಿದೆ. ಈ ಎಲ್ಲಾ ಸಾಧನೆ ಅರಿತ “ತರುಣ್ ಸುಧೀರ್” ಚಿತ್ರ ಕಥೆ ಬರೆದಿದ್ದು, ಈ ಸಿನಿಮಾದಲ್ಲಿ ನಾಯಕನಾಗಿ ನಟಿಸಲು ದರ್ಶನ್ ಖುಷಿಯಿಂದ ಒಪ್ಪಿಕೊಂಡಿದ್ದಾರೆ ಹಾಗೆ ಕುಸ್ತಿಪಟು ಕಾರ್ತೀಕ್​ ಕಾಟೇರಾ ಅವರನ್ನು ದರ್ಶನ್​ ಈಗಾಗಲೇ ಎರಡು ಬಾರಿ ಭೇಟಿಯಾಗಿ ಅವರ ಜೀವನ ಕ್ರಮದ ಬಗ್ಗೆ ಮಾಹಿತಿ ಹೊಂದಿರುವ ದರ್ಶನ್‌, ದಿನಕ್ಕೆ 25 ಚಪಾತಿ, 3 ಕೋಳಿ, 15 ಗ್ಲಾಸ್​ ಕಲ್ಲಂಗಡಿ ಜ್ಯೂಸ್ ಸೇವಿಸಿ ಕುಸ್ತಿ ಅಭ್ಯಾಸದಲ್ಲಿ ಭರ್ಜರಿಯಾಗಿ ತಯಾರಿ ನಡೆಸಿದ್ದಾರೆ. ಒಟ್ಟಾರೆಯಾಗಿ ಸಿನಿಮಾದ ಬ್ಯುಸಿ ಜೀವನದಲ್ಲಿರುವ ದರ್ಶನ್ ಅವರ ಮೃದು ಮನಸ್ಸಿನ ಸೂಕ್ಷ್ಮ ಕಣ್ಣುಗಳು ಕರ್ನಾಟಕದಲ್ಲಿ ಕಷ್ಟಪಟ್ಟು ಸಾಧನೆ ಮಾಡುತ್ತಿರುವ ಕನ್ನಡಿಗರ ಮೇಲೆ ಹರಿದಾಡಿ ಮತ್ತಷ್ಟು ಸಾಧನೆ ಮಾಡಲು ಹುರಿದುಂಬಿಸುತ್ತಿರುವ ದರ್ಶನ್ ಸಿನಿಮಾದಲ್ಲಿ ಮಾತ್ರವಲ್ಲ ನೀಜಜೀವನದಲ್ಲಿವೂ ಹೀರೋನೆ ಅಲ್ವ?