ಒತ್ತು(ವರಿ) ಸಂಕಟದಲ್ಲಿ ನಟ ದರ್ಶನ್ ನಿವಾಸ; ‘ಹಳ್ಳ’ ನುಂಗಿದ ಎಸ್.ಎಸ್. ಹಾಸ್ಪಿಟಲ್

0
1969

darshan_big[1]

ಐಡಿಯಲ್ ಹೋಮ್ಸ್ ಲೇಔಟ್ ನಲ್ಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ ರವರ ನಿವಾಸ ಈಗ ‘ಒತ್ತುವರಿಯ’ ಭೀತಿಯಲ್ಲಿದೆ. ಕಂದಾಯ ಇಲಾಖೆಯ ನಕ್ಷ್ಯೆಗಳನ್ನು superimpose ಮಾಡಿದಾಗ ಒತ್ತುವರಿಯಾಗಿರ ಬಹುದೆಂದು ಬಿ.ಬಿ.ಎಂ.ಪಿ ಮೂಲಗಳು ತಿಳಿಸಿವೆ.

ನಿಖರ ಮಾಹಿತಿ ಇಲ್ಲ ?

ಪಾಲಿಕೆಯ ಜಂಟಿ ಆಯುಕ್ತರು ಮಾಧ್ಯಮಗಳಿಗೆ ಮಾಹಿತಿ ನೀಡುತ್ತಾ “ನಮಗೆ ಈ ಬಗ್ಗೆ ನಿಖರ ಮಾಹಿತಿ ಇಲ್ಲ”. ಕಂದಾಯ ಇಲಾಖೆ, ಸರ್ವೇ ಇಲಾಖೆ ಮತ್ತು ಪಾಲಿಕೆಯ ರಾಜಕಾಲುವೆ ಸಂಬಂಧಪಟ್ಟ ಅಧಿಕಾರಿಗಳು ಸ್ಕೆಚ್ ಮ್ಯಾಪ್ ತಯಾರು ಮಾಡಿ, ಅದನ್ನು assess ಮಾಡಿದ ನಂತರವಷ್ಟೇ ತೆರವು ಮಾಡಬೇಕೆ; ಇಲ್ಲವೆ ಎಂದು ಹೇಳಬಹುದು ಎಂದು ಹೇಳಿದರು.

ರಂಗೋಲಿ ಹಳ್ಳ ಒತ್ತುವರಿ

ರಾಜ ರಾಜೇಶ್ವರಿ ನಗರದ ಸ್ಥಳೀಯರು ಎಸ್.ಎಸ್.ಹಾಸ್ಪಿಟಲ್ ನಿಂದ ಇಲ್ಲಿದ್ದ ತುಂಬಾ ವರ್ಷಗಳಿಂದಿರುವ ‘ಹಳ್ಳ’ ಒತ್ತುವರಿಯಾಗಿದೆ. ಗಮನಿಸಿಬೇಕಾದ ಸಂಗತಿಯೇನೆಂದರೆ ಈ ಹಳ್ಳದಲ್ಲಿ ಕನ್ನಡ ಚಿತ್ರದ ಚಿತ್ರೀಕರಣವೂ ಆಗಿದೆ. ಸಮಾಜಕ್ಕೆ ಮಾದರಿಯಾಗಿರಬೇಕಾದ ಪ್ರಭಾವೇ ರಾಜಕೀಯ ಕುಟುಂಬವೊಂದು ‘ಹಳ್ಳದ’ ಮೇಲೆ ಆಸ್ಪತ್ರೆ ಕಟ್ಟಿರುವುದು ಎಷ್ಟರ ಮಟ್ಟಿಗೆ ಸರಿ; ನ್ಯಾಯಯುತ ಎಂದು ಹೇಳುತ್ತಾರೆ.

ಐಡಿಯಲ್ ಟೌನ್ಶಿಪ್ ನಿಂದ ನಿವೇಶನ ಖರೀದಿ ಮಾಡಿ, ರಾಜ ರಾಜೇಶ್ವರಿ ನಗರದಲ್ಲಿ ಮನೆ ಕಟ್ಟುಕೊಂಡಿರುವ ದರ್ಶನ ರವರ ಮನೆಯ ತೆರವಿನ ವಿಚಾರ ಇಂದು ಸಂಜೆಯೊಳಗೆ ‘ಸ್ಕೆಚ್ ಮ್ಯಾಪ್’ ಆಧಾರದ ಮೇಲೆ ಮತ್ತು ಪಾಲಿಕೆಯ ಅಧಿಕಾರಿಗಳು ಕೊಡುವ ವರದಿಯ ಮೇಲೆ ಅವಲಂಬಿತವಾಗಿದೆ.

ಎಸ್.ಎಸ್.ಆಸ್ಪತ್ರೆಗೆ ಆಗುತ್ತಾ ಜೆ.ಸಿ.ಬಿ-ಗಳಿಂದ ಸರ್ಜರಿ?

ಮಾಜಿ ಸಚಿವರು ಮತ್ತು ಕಾಂಗ್ರೆಸ್ ಪಕ್ಷದ ಹಿರಿಯ ಸಚಿವರಾದ ಶ್ಯಾಮನೂರು ಶಿವಶಂಕರಪ್ಪ ಒಡೆತನದ ಎಸ್.ಎಸ್. ಹಾಸ್ಪಿಟಲ್ ಕೂಡ ‘ಹಳ್ಳ ಒತ್ತುವರಿ’ ಯಾಗಿರಬಹುದೆಂದು ಬಿ.ಬಿ.ಎಂ.ಪಿ ಯ ಉನ್ನತ ಮೂಲಗಳು ಹೇಳಿದೆ. ಬಡವರ, ಕೆಳ ವರ್ಗದ ಕುಟುಂಬಗಳ ಮನೆಗಳನ್ನು ಯಾವುದೇ ಮುಲಾಜಿಲ್ಲದೆ ತೆರವು ಗೊಳಿಸಿರುವ ಪಾಲಿಕೆಯು, ರಾಜ್ಯ ರಾಜಕೀಯದಲ್ಲಿ ಪ್ರಭಾವೀ ಕುಟುಂಬದ ಒಡೆತನದ ಎಸ್.ಎಸ್. ಹಾಸ್ಪಿಟಲ್ ಒತ್ತುವರಿಯ ಕುರಿತು ಯಾವ ರೀತಿಯಾದ ಕ್ರಮ ಜರುಗಿಸುತ್ತದೆ ಎಂದು ಕಾದುನೋಡಬೇಕಾಗಿದೆ.

“ಒಂದು ವೇಳೆ ಒತ್ತುವರಿ ಯಾಗಿರುವುದು ಕಂಡುಬಂದಲ್ಲಿ ಯಾವುದೇ ಮುಲಾಜಿಲ್ಲದೆ, ಹಸ್ತಕ್ಷೇಪ ಮಾಡದೆ; ಒತ್ತಡಕ್ಕೆ ಮಣಿಯದೆ, ಒತ್ತುವರಿಯಾಗಿರುವ ಜಾಗವನ್ನು ತೆರವು ಮಾಡಲಾಗುವುದು”. ಈ ಜಾಗವನ್ನು ಸರ್ವೇ, ಕಂದಾಯ ಮತ್ತು ಪಾಲಿಕೆಯ SWD ಅಧಿಕಾರಿಗಳು ಜಂಟಿಯಾಗಿ ಸರ್ವೇ ಮಾಡಿ, ವರದಿಯನ್ನು ಒಪ್ಪಿಸಿದ ನಂತರ, ನಾವು ಮುಂದಿನ ಕ್ರಮ ಜರಗಿಸುತ್ತೇವೆ ಎಂದು ಜಂಟಿ ಆಯುಕ್ತರು ಹೇಳಿದ್ದಾರೆ