ಚಾಲೆಂಜಿಂಗ್ ಸ್ಟಾರ್ ಬಿಡುವಿನ ವೇಳೆಯಲ್ಲಿ ಏನು ಮಾಡುತ್ತಾರೆ ಗೊತ್ತ??

0
844

ತೆರೆಯ ಮೇಲೆ ಮಾಸ್.. ಇವರ ನಟನೆಗೆ ಅಭಿಮಾನಿಗಳು ಫಿದಾ.. ಮಚ್ಚು ಹಿಡದರೆ ದಾಸ.. ಕಲಾತ್ಮಕ ಚಿತ್ರಗಳಿಗೆ ಜೀವ ತುಂಬುವನಮ್ಮ ಪ್ರೀತಿಯ ರಾಮು. ವಿಭಿನ್ನ ಗೆಟಪ್ ಮಾಡಿ ಮಿಂಚುವ ಹೀರೋ.. ಇವರು ಯಾರು ಎಂಬ ಹಿಂಟ್ ನಿಮಗೆ ಸಿಕ್ಕಿರಬುದು.

Image result for darshan farming

ಎಸ್ ಕರ್ನಾಟಕದ ಚಲಚಿತ್ರ ರಂಗದ ಚಾಲೆಜಿಂಗ್ ಸ್ಟಾರ್ ದರ್ಶನ್. ನಟರು ಬಿಡುವಿನ ವೇಳೆಯಲ್ಲಿ ಹೀಗೂ ಜೀವನ ನಡೆಸುತ್ತಾರಾ ಎನ್ನುವ ರೀತಿಯ  ಇವರ ಜೀವನ ಶೈಲಿ.

ಶೂಟ್ ಇಲ್ಲದ ವೇಳೆ ಇವರು ತಮ್ಮ ತೋಟದಲ್ಲಿ ಪಕ್ಕಾ ರೈತನಂತೆ ಕಾಣಿಸಿಕೊಳ್ಳುತ್ತಾರೆ. ಕೈಯಲ್ಲಿ ಸಲಕಿ, ನೆಗಿಲು, ಗುದ್ದಲಿ, ತಲೆಗೆಟವಲ್ ಸುತ್ತಿಕೊಂಡು ಕೆಲಸ ಶುರು ಮಾಡಲು ಆರಂಭಿಸದರೆ ಮುಗಿತು. ದಿನ ಕಳೆಯುವುದು ಇವರಿಗೆ ಅರ್ಥಚಾಗಲ್ಲ.

ದರ್ಶನ್ ಅವರ ಮೈಸೂರು ಬಳಿಯ ಫಾರ್ಮ್ ಹೌಸ್ ಎಂಟ್ರಿ ನೀಡಿದ್ರೆ ಮನಸಿಗೆ ಆನಂದ ಸಿಗುತ್ತದೆ. ಇಲ್ಲಿ ಭಿನ್ನ. ಹಸು, ಎತ್ತು, ಕುದುರೆ, ಮೇಕೆ, ಕುರಿ, ಹಂದಿ, ವಿವಿಧ ರೀತಿಯ ಪಕ್ಷಗಳು, ನಾಯಿ, ಕೋತಿ… ಹೀಗೆ ಪ್ರಾಣಿ ಜಗತ್ತೇ ಅಲ್ಲಿದೆ.

Image result for darshan farming

ಇನ್ನು ತೋಟದಲ್ಲಿ ಮಾವು, ತೆಂಗು, ಜೋಳ, ಬಾಳೆ ಗಿಡಗಳು ಇವೆ. ಇನ್ನು ಕೆಲವು ಪ್ರದೇಶದಲ್ಲಿ ತರಕಾರಿ ಸಹ ಬೆಳೆಯಲಾಗಿದೆ.

ಭೂಮಿ ಊಳುವುದು, ದನಕರ ಲಾಲನೆ ಪಾಲನೆ, ಹಾಲು ಕರೆಯುವುದು, ಸಗಣಿ ಎತ್ತುವ ಕೆಲಸವನ್ನು ದರ್ಶನ್ ತಮ್ಮ ಬಿಡುವಿನವೇಳೆಯಲ್ಲಿ ಮಾಡುತ್ತಾರೆ.

8 ಏಮು ಪಕ್ಷಿಗಳು, 5 ಟರ್ಕಿ ಕೋಳಿಗಳು, ಹತ್ತಾರು ಕೋತಿಗಳು, 5 ಕುದುರೆ, 30 ಹಸು, 4 ಎತ್ತು, 30 ಕುರಿಗಳು, 10 ಬಾತುಕೋಳಿಗಳು, 8 ನಾಯಿಗಳು ಇವರ ತೋಟದಲ್ಲಿವೆ. ಇನ್ನು ದರ್ಶನ್ ಅವರಿಗೆ ಕುದುರೆ ಅಂದ್ರೆ ಬಲು ಪ್ರೀತಿ ಅದಕ್ಕೆ ಏನಾದರೂ ಆದಲ್ಲಿ ತಮಗೆನೋವಾ ದುಷ್ಟ ದುಃಖ ಪಡುತ್ತಾರೆ.

ತೆರೆಯ ಮೇಲೆ ಐಶಾರಾಮಿ, ಕಷ್ಟದ ಜೀವನ ನಡೆಸುವ ದರ್ಶನ್ ನಿಜ ಜೀವನದಲ್ಲೂ ಹೀರೋ ಎನ್ನುವುದರಲ್ಲಿ ಎರಡು ಮಾತಿಲ್ಲ.