ಆಧುನಿಕ ಮಹಿಳೆಯರಿಗೆ ಸ್ಪೂರ್ತಿ ದರ್ಶನ್ ರಂಗ ನಾಥನ್!!!

0
1021

ರಸಾಯನಶಾಸ್ತ್ರ ಪ್ರವೀಣರಾದ ದರ್ಶನ್ ರಂಗ ನಾಥನ್ ಭಾರತದ ಅತ್ಯುನ್ನತ ಹತ್ತು ಮಹಿಳಾ ವಿಜ್ಞಾನಿಗಳ ಪೈಕಿ ಒಬ್ಬರು. ಇಂಗಾಲೀಯ ರಸಾಯನಶಾಸ್ತ್ರದಲ್ಲಿ ಪದವಿ ಪಡೆದಿದ್ದರೂ ಜೈವಿಕ ರಸಾಯನ ಶಾಸ್ತ್ರದಲ್ಲಿ ಇವರ ಹೆಸರು ಚಿರಪರಿಚಿತ. ನ್ಯಾನೋ ಟ್ಯೂಬ್‍ಗಳ ಉತ್ಪತ್ತಿ, ಜೈವಿಕ ಸಾವಯವ ರಸಾಯನಶಾಸ್ತ್ರ, ಅಣು ವಿನ್ಯಾಸ, ಪ್ರಮುಖ ಜೈವಿಕ ಪ್ರಕ್ರಿಯೆಗಳ ರಾಸಾಯನಿಕ ಸಿಮ್ಯೂಲೇಷನ್ ಇತ್ಯಾದಿ ಕ್ಷೇತ್ರಗಳಲ್ಲಿ ಇವರ ಕೊಡುಗೆ ಅಪಾರ.

ವೈಯಕ್ತಿಕ ಜೀವನ
4.6.1940ರಂದು ದೆಹಲಿಯಲ್ಲಿ ಜನನ. ತಂದೆ ಶಾಂತಿ ಸ್ವರೂಪ್. ತಾಯಿ ವಿದ್ಯಾವತಿ. ವಿದ್ಯಾಭ್ಯಾಸವೆಲ್ಲ ದೆಹಲಿಯಲ್ಲೇ ಪೂರೈಸಿದ ಇವರು ಐಐಟಿ ಕಾನ್ಪುರ್‍ದ ಬೋಧನಾ ವಿಭಾಗದ ಸದಸ್ಯರಾಗಿದ್ದ ಸುಬ್ರಮಣ್ಯ ರಂಗನಾಥ್‍ರನ್ನು ವಿವಾಹವಾದರು. ಇವ-ರಿಗೆ ಆನಂದ್ ಹೆಸರಿನ ಓರ್ವ ಪುತ್ರನಿದ್ದಾನೆ.

ವೃತ್ತಿ ಜೀವನ

ರಸಾಯನಶಾಸ್ತ್ರದಲ್ಲಿ ಪದವಿ ಪಡೆದ ದರ್ಶನ್ ಅವರು ಮಿರಾಂಡಾ ಹೌಸ್ ನಲ್ಲಿ ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿದರು. 1976ರಲ್ಲಿ ಪಿಎಚ್‍ಡಿ ಪದವಿ ಪಡೆದರು. ರಾಯಲ್ ಕಮಿಷನ್ ಫಾರ್ ದ ಎಕ್ಸಿಬಿಷನ್ ವತಿಯಿಂದ ರೀಸರ್ಚ್ ಫೆಲೋಶಿಪ್, ಲಂಡನ್ನಿನ ಇಂಪೀರಿಯಲ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಪಡೆದು 1969ರಲ್ಲಿ ಭಾರತಕ್ಕೆ ಮರಳಿದರು. ಮುಂದೆ ಐಐಟಿ ಕಾನ್ಪುರದಲ್ಲಿ ಸ್ವತಂತ್ರವಾಗಿ ಸಂಶೋಧನೆಗಳನ್ನು ಆರಂಭಿಸಿದರು. ಒಂದೇ ಇಲಾಖೆಯಲ್ಲಿ ಪತಿ ಮತ್ತು ಪತ್ನಿ ಉದ್ಯೋಗ ಮಾಡುವಂತಿಲ್ಲ ಎಂಬ ನಿಯಮದಿಂದಾಗಿ ಸಂಶೋಧನೆಗೆ ಬೇಕಾದ ಧನಸಹಾಯವ್ನು ಶಿಷ್ಯವೃತ್ತಿಗಳಿಂದ ಪಡೆದು ಪ್ರೋಟಿನ್ ಫೋಲ್ಡಿಂಗ್‍ನಲ್ಲಿ ಕೆಲಸ ಆರಂಭಿಸಿದರು.

ಸ್ವಯಂ ಜೋಡಣೆ ಪೆಪ್ಪೈಡ್ ಬಳಸಿಕೊಂಡು ವಿವಿಧ ನ್ಯಾನೋ ರಚನೆಗಳಿಗೆ ವಿವಿಧ ಪ್ರೋಟಿನ್ ವಿನ್ಯಾಸ ಕಂಡು ಹಿಡಿದರು. 1993ರಲ್ಲಿ ತಿರುವನಂತಪುರದಲ್ಲಿ ಪ್ರಾದೇಶಿಕ ಸಂಶೋಧನಾ ಘಟಕದಲ್ಲಿ ಉದ್ಯೋಗ ಪ್ರಾರಂಭಿಸಿದರು. ಇದೇ ಅವಧಿಯಲ್ಲೇ ಅಮೆ-ರಿಕಾಧ ನೌಕಾ ರೀಸರ್ಚ್ ಲ್ಯಾಬೋರೇಟರಿಯ ಇಸಾಬೆಲ್ಲಾ ಕಾರ್ಲೆ ಅವರೊಂದಿಗೆ ಸಹಯೋಗ ನಡೆಸಿ, 1998ರಲ್ಲಿ ಹೈದ್ರಾಬಾದ್‍ನಲ್ಲಿರುವ ಇಂಡಿಯನ್ ಇನ್ಸ್‍ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿಯಲ್ಲಿ ನಿರ್ದೇಶಕರಾಗಿ ಆಯ್ಕೆಯಾದರು.

ಹಿಸ್ಟಡಿನ್ ಮತ್ತು ಹಿಸ್ಟಮಿನ್‍ನ ಇಮಿಡಾಝೋಲ್‍ನ ಸ್ವಾಯತ್ತ ಸಂತಾನೋತ್ಪತ್ತಿ ಪ್ರೋಟೋಕಾಲ್ ಸೃಷ್ಟಿಸಿದರು. ವರ್ಕಿಂಗ್ ಸಿಮ್ಯೂಲೇಷನ್ ಯೂರಿಯ ಸೈಕಲ್ ಅನ್ನು ಅಭಿವೃದ್ಧಿಗೊಳಿಸಿದ ಹೆಗ್ಗಳಿಕೆ ಇವರದು. 1990ರಲ್ಲಿ ಇಂಡಿಯನ್ ಅಕಾಡೆಮಿಯ ಫೆಲೋಶಿಪ್‍ಗೆ ಆಯ್ಕೆ. 1996ರಲ್ಲಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್‍ನ್ ಫೆಲೋಶಿಪ್, 1999ರಲ್ಲಿ ಎ.ವಿ.ರಮಾರಾವ್ ಫೌಂಡೇಷನ್ ಪ್ರಶಸ್ತಿ, 2000ದಲ್ಲಿ ಜವಾಹರಲಾಲ್ ನೆಹರು ಜನ್ಮ ಶತಮಾನೋತ್ಸವ ಸಂದರ್ಶಕ ಫೆಲೋಶಿಪ್, ಸುಖದೇವ್ ಎಂಡೋಮೆಂಟ್ ಲೆಕ್ಚರ್‍ಶಿಪ್.