ನಾನು ಮತ್ತು ಸುದೀಪ್ ಸ್ನೇಹಿತರಲ್ಲ: ದರ್ಶನ್ ಟ್ವಿಟ್

0
621

ನಾನು ಮತ್ತು ಸುದೀಪ್ ಸ್ನೇಹಿತರಲ್ಲ ಎಂದು ದರ್ಶನ್ ಟ್ವಿಟರ್ ನಲ್ಲಿ ಹೇಳಿದ್ದಾರೆ. ಇದು ಸ್ಯಾಂಡಲ್ ವುಡ್ ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಸ್ಯಾಂಡಲ್ ವುಡ್ ಬಿಗ್ ಸ್ಟಾರ್ ಗಳಾದ ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ನಡುವೆ ಬಿರುಕು ಕಾಣಿಸಿಕೊಂಡಂತಿದೆ.

“ನಾನು ಮತ್ತು ಸುದೀಪ್ ಸ್ನೇಹಿತರಾಗಿ ಉಳಿದಿಲ್ಲ. ನಾವಿಬ್ಬರು ಕನ್ನಡ ಚಿತ್ರರಂಗಕ್ಕಾಗಿ ಕೆಲಸ ಮಾಡುತ್ತಿರುವ ನಟರಷ್ಟೇ. ಮತ್ಯಾವುದೇ ಊಹಾಪೋಹಗಳು ಬೇಡ. ಇಲ್ಲಿದೆ ಇದು ಸಾಕು” ಎಂದು ದರ್ಶನ್ ತೂಗುದೀಪರ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.

ನಾನು, ಸುದೀಪ್ ಸ್ನೇಹಿತರಲ್ಲ ಎಂದು ಹೇಳಿರುವುದು ಅಭಿಮಾನಿಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಆದರೆ, ಈ ಕುರಿತು ಇಬ್ಬರೂ ನಟರು ಪ್ರತಿಕ್ರಿಯೆ ನೀಡಿಲ್ಲ.

Me & Sudeep aren’t Friends Anymore. We are just Actors working for Kannada Industry. No more speculations please. That’s the end of it.

– Darshan Thoogudeepa (@dasadarshan) March 5, 2017

ದರ್ಶನ್ ಹಾಗೂ ಸುದೀಪ್ ಸ್ನೇಹಿತರಾಗಿದ್ದಾರೆ. ದರ್ಶನ್ ಅವರ ಹೆಸರಲ್ಲಿ 3-4 ಟ್ವಿಟರ್ ಖಾತೆಗಳಿದ್ದು, ಹ್ಯಾಕ್ ಮಾಡಿ ಹೀಗೆ ಮೆಸೇಜ್ ಪೋಸ್ಟ್ ಮಾಡಿರಬಹುದೆಂದು ಹೇಳಲಾಗಿದೆ.