ದಸರಾ ದೀಪಾವಳಿ ಪ್ರಯಕ್ತ ಕೇವಲ 1 ರೂ. ಗೆ ಸ್ಮಾರ್ಟ್​​ಫೋನ್​..?

0
1135

ಎಲ್ಲಿನೋಡಿದರು ಮೊಬೈಲ್-ಗಳದೆ ಸದ್ದು ರೋಡ್, ಬಸ್, ಟ್ರೈನ್, ಹೀಗೆ ಅಪಾಯಕಾರಿ ಪ್ರಯಾಣದಲ್ಲೂ ಮೊಬೈಲ್ ಬಿಟ್ಟು ಬದುಕುತ್ತಿಲ್ಲ ಈ ಯುವಪಿಳಿಗೆ. ಮೊದಲು ಸ್ವಲ್ಪ ಹೆಚ್ಚು ಸಮಯ ಮೊಬೈಲ್ ಹಿಡಿದರೆ ಹಿರಿಯರು ಬೈತ್ತಿದ್ದರು ಈಗ ಅವರೇ ಮೊದಲು ಮಾರು ಹೋಗಿ ಕಿಸೆ ಹಿಡಿಯದಷ್ಟು ದೊಡ್ಡ ಮೊಬೈಲ್ ಬಳಕೆ ಮಾಡುತ್ತಿದ್ದಾರೆ. ಏಕೆಂದರೆ ಮೊಬೈಲ್ ಒಂದು ಇದ್ರೆ ಅರ್ಧಜಿವನ ಟೈಮ್ ಪಾಸ್ ಆದಂಗೆ, ಈಗೀಗ ಮೊಬೈಲ್’ ನಲ್ಲೆ ಬಿಲ್, ಟಿಕೆಟ್ ಬುಕ್, ಆನ್ಲೈನ್ ಖರೀದಿ ಹೀಗೆ ಸಾವಿರಾರು ಉಪಯೋಗಳು ಬಂದಿರುವುದರಿಂದ ಎಲ್ಲರ ಮನೆಯಲ್ಲಿ, ಮನದಲ್ಲಿ ಮೊಬೈಲ್ ಮೊಬೈಲ್..

Also read: ಗೀತಾ ಗೋಪಿನಾಥ್, ಈ ಕನ್ನಡತಿ ಅಂತಾರಾಷ್ಟ್ರೀಯ ಹುದ್ದೆಗೇರಿದ್ದ ಸಾಧನೆ; ಕನ್ನಡಿಗರು ಏನು ಬೇಕಾದರೂ ಮಾಡಬಹುದು ಅಂತ ತೋರಿಸುತ್ತೆ../a> 

ಇದೆ ಕಾರಣಕ್ಕೆ ಸಾವಿರದಿಂದ ಹಿಡಿದು ಲಕ್ಷದವರೆಗೂ ಹಣ ನೀಡಿ ಮೊಬೈಲ್ ಖರೀದಿಸುತ್ತಾರೆ ಅದರಲ್ಲಿ ಹಬ್ಬ ಹರಿದಿನ, ಮತ್ತು ಕೈಯಲ್ಲಿ ಸ್ವಲ್ಪ ಹೆಚ್ಚಿನ ಹಣ ಸಿಕ್ಕರೆ ಮೊದಲಿಗೆ ನೆನಪು ಬರೋದು ಮೊಬೈಲ್. ಹೇಗೆಂದರೆ ಹಳೆ ಮೊಬೈಲ್ ಅಪ್ಪನಿಗೆ ಇಲ್ಲ ಅಮ್ಮನಿಗೆ ಕೊಟ್ಟು ಬರುವ ಹಬ್ಬಕೆ ಹೊಸ ಸ್ಮಾರ್ಟ್ ಫೋನ್ ಖರೀದಿಸಲು ಮುಗಿಬಿಳ್ಳುತ್ತಾರೆ. ಅಂತಹ ಮೊಬೈಲ್ ಖರೀದಿಯ ಯೋಚನೆಯಲ್ಲಿರುವರಿಗೆ, ಹಾನರ್ ಮೊಬೈಲ್ ಕಂಪನಿ ಆಕರ್ಷಕ ಬೆಲೆಯಲ್ಲಿ ಗ್ರಾಹಕರ ಕೈ ಸೇರಲು ಮಾರುಕಟ್ಟೆಗೆ ಬಂದಿವೆ.

Also read: ಡ್ರೈವಿಂಗ್ ಲೈಸೆನ್ಸ್ ಗೆ ಇನ್ಮೇಲಿಂದ ಲಂಚ ಕೊಡುವ ಅವಶ್ಯಕತೆ ಇಲ್ಲ, online ನಲ್ಲೆ ಅರ್ಜಿ ಸಲ್ಲಿಸಿ!!

ಇದೀಗ ದಸರಾ ಹಬ್ಬದ ಹಿನ್ನಲೆಯಲ್ಲಿ ಖ್ಯಾತ ಮೊಬೈಲ್ ಕಂಪನಿ ಹಾನರ್ ಕೂಡ ತನ್ನ ಸ್ಮಾರ್ಟ್​​ಫೋನ್​ಗಳ ಮೇಲೆ ಭಾರೀ ಡಿಸ್ಕೌಂಟ್ ನೀಡಿದೆ. ಅಲ್ಲದೆ ನಿದಿರ್ಷ್ಟದ ಸಮಯದವರೆಗೆ ಕೇವಲ 1 ರೂ.ಗೆ ದುಬಾರಿ ಮೊಬೈಲ್​ಗಳನ್ನು ಮಾರಾಟ ಮಾಡಲಿದೆ. ಹಬ್ಬದ ಪ್ರಯುಕ್ತ ವಿವಿಧ ಕಂಪನಿಗಳು ತನ್ನ ಉತ್ಪನ್ನಗಳ ಮೇಲೆ ಭಾರಿ ರಿಯಾಯಿತಿ ಘೋಷಿಸಿದೆ. ಫ್ಲಿಪ್​ಕಾರ್ಟ್​ ಮತ್ತು ಅಮೆಜಾನ್ ಆನ್​ಲೈನ್​ ಸಂಸ್ಥೆಗಳು 4-5 ದಿನಗಳ ಕಾಲ ಭರ್ಜರಿ ಡಿಸ್ಕೌಂಟ್​​ ಸೇಲ್ಸ್​ ಆರಂಭಿಸಲು ಸನ್ನದ್ಧವಾಗಿದೆ.
ಈ ಮೊಬೈಲ್ ಮಾರಟಕ್ಕೆ Paytm ಕೂಡ ಹಾನರ್​ನೊಂದಿಗೆ ಕೈ ಜೋಡಿಸಿದ್ದು, ಹಲವು ರೀತಿಯ ರಿಯಾಯಿತಿಗಳನ್ನು ನೀಡುತ್ತಿದೆ. Paytm ವಾಲೆಟ್​ನಿಂದ ಪಾವತಿ ಮಾಡಿದರೆ 250 ರೂ. ಕ್ಯಾಶ್​ಬ್ಯಾಕ್ ಸಹ ಪಡೆಯಬಹುದು. ದಸರಾ ಸೇಲ್​ನಲ್ಲಿ ನೀವು ಹಾನರ್​ ಕಂಪನಿಯ ವೆಬ್​ಸೈಟ್​ನಲ್ಲಿ 1800 ರೂ.ನ ಫ್ರೀ ಕೂಪನ್ ಮತ್ತು 4 ಸಾವಿರದವರೆಗೆ ರಿಯಾಯಿತಿಗಳನ್ನು ಪಡೆಯಬಹುದು. ಅಲ್ಲದೆ ಹಾನರ್ 7A ಯನ್ನು ಕೇವಲ 1ರೂ. ಪಾವತಿಸಿ ತಮ್ಮದಾಗಿಸಿಕೊಳ್ಳಬಹುದು. ಇದಕ್ಕಾಗಿಯೇ ‘1 Rupee Sale’ಎಂಬ ಆಯ್ಕೆಯನ್ನು ಹಾನರ್​ ನೀಡಿದ್ದು, ಇಲ್ಲಿ ಹಲವು ಮೊಬೈಲ್​ಗಳನ್ನು ನಿರ್ದಿಷ್ಟ ಸಮಯದಲ್ಲಿ ಕೇವಲ ಒಂದು ರೂ.ಗೆ ಕೊಂಡುಕೊಳ್ಳಬಹುದು. ಮೊದಲು ಬುಕ್​ ಮಾಡಿದವರಿಗೆ ಮೊದಲ ಆದ್ಯತೆ ಎಂಬಂತೆ ಈ ಸೇಲ್ ನಡೆಯಲಿದೆ.

Also read: ಹಣದ ಸಮಸ್ಯೆಯಿಂದ ಹೊರಬರಲು ಎಷ್ಟೇ ಪ್ರಯತ್ನ ಪಟ್ಟರೂ ಪ್ರಯೋಜನವಾಗುತ್ತಿಲ್ಲ ಅಂದ್ರೆ ಈ ಸುಲಭ ವಾಸ್ತುವನ್ನು ಅಳವಡಿಸಿಕೊಳ್ಳಿ, ನಿಮ್ಮ ಸಮಸ್ಯೆ ದೂರವಾಗುತ್ತೆ!!

ಹಾನರ್ (Honor) 9N- ಮೇಲೆ 4 ಸಾವಿರ ರೂ. ರಿಯಾಯಿತಿ ನೀಡಲಾಗುತ್ತಿದೆ. ಹಾನರ್ 9N 3GB ರ‍್ಯಾಮ್ ಬೆಲೆ 9,999 ರೂ. ಆಗಿದ್ದರೆ 4GBಗೆ 11,999 ರೂ ಆಫರ್ ಬೆಲೆ ನಿಗದಿಪಡಿಸಲಾಗಿದೆ. ಇದಲ್ಲದೆ 500 ರೂಪಾಯಿಯ ಕೂಪನ್​ಗಳನ್ನು ಸಹ ಗ್ರಾಹಕರಿಗೆ ನೀಡಲಾಗುತ್ತಿದೆ.
ಇದು ಅಷ್ಟೇ ಅಲ್ಲದೆ ಈ ಬೃಹತ್ ಆನ್​ಲೈನ್​ ಮೇಳದಲ್ಲಿ ಅಮೆಜಾನ್ ಜೊತೆ ಸ್ಯಾಮ್​ಸಂಗ್ ಇಂಡಿಯಾ ಕೂಡ ಕೈ ಜೋಡಿಸಿದ್ದು, ತನ್ನ ಸ್ಮಾರ್ಟ್​ಫೋನ್​ ಮೇಲೆ ಭರ್ಜರಿ ಡಿಸ್ಕೌಂಟ್​ ನೀಡಿದೆ. ಅಕ್ಟೋಬರ್ 10 ರಿಂದ 15ರವರೆಗೆ ನಡೆಯುವ ಈ ಫೆಸ್ಟೀವ್ ಸೇಲ್​ನಲ್ಲಿ ಸ್ಯಾಮ್​ಸಂಗ್​ ಗ್ಯಾಲಕ್ಸಿ ನೋಟ್-8​ ಮೊಬೈಲ್​​ ಮೇಲೆ ಬರೋಬ್ಬರಿ 30,700 ರೂ. ಡಿಸ್ಕೌಂಟ್​ ನೀಡಿ ಅಚ್ಚರಿ ಮೂಡಿಸಿದ್ದಾರೆ. 74,690 ರೂ. ಮೂಲ ಬೆಲೆಯ ನೋಟ್​-8 ಫೋನ್​ನ್ನು ಕೇವಲ 43,990 ರೂ.ನಲ್ಲಿ ಖರೀದಿಸಬಹುದು. ಅಷ್ಟೇ ಅಲ್ಲದೆ ಇದರ ಮೇಲೆ ನೋ ಕಾಸ್ಟ್​ EMI ರೀತಿಯ ಹಲವು ಕೊಡುಗೆಗಳನ್ನು ಕೂಡ ಪಡೆಯಬಹುದಾಗಿದೆ.