ದಾವಣಗೆರೆಯ ಸಿಇಓ ಅಶ್ವತಿ ಅವರ ಈ ಕಾರ್ಯವನ್ನು ಕಂಡರೆ ಒಬ್ಬ ಅಧಿಕಾರಿ ಮನಸ್ಸು ಮಾಡಿದರೆ ಇಂತಹ ಬದಲಾವಣೆ ಮಾಡೋಕ್ಕೆ ಸಾಧ್ಯ ಅಂತ ಗೊತ್ತಾಗುತ್ತೆ..!

0
874

ಪ್ರಧಾನಿ ನರೇಂದ್ರ ಮೋದಿ ಸ್ವಚ್ಛ ಭಾರತ ಅಭಿಯಾನವನ್ನು ಆರಂಭಿಸಿದ್ರು. ಇದರಿಂದ ಆರೋಗ್ಯ ಹಾಗೂ ವಾತಾವರಣ ಶುಚಿಯಾಗಿರುವ ಉದ್ದೇಶ. ಈ ಯೋಜನೆ ದೇಶ ವ್ಯಾಪಿ ಕಾಲ್ಗಿಚ್ಚಿನಂತೆ ಹಬ್ಬಿ, ಹಲವು ಜನರು, ಅಧಿಕಾರಿ ಹಾಗೂ ರಾಜಕಾಣಿಗಳು ಸ್ವಚ್ಛತೆಯ ಕಾರ್ಯಕ್ಕೆ ಮೊರೆ ಹೋಗಿದ್ದಾರೆ.

source: publictv.in

ಈ ಸಾಲಿಗೆ ಈಗ ದಾವಣಗೇರೆ ಜಿಲ್ಲೆಯ ಸಿಇಒ ಸೇರಿದ್ದಾರೆ. ಜಿಲ್ಲೆಯ ಜಗಳೂರು ತಾಲೂಕಿನ ಕೊಚಗಲ್ಲು ಗ್ರಾಮದ ಐತಿಹಾಸಿಕ ಪುಷ್ಕಕರಣಿಯು ಯಾವ ಕೆಲಸಕ್ಕೂ ಬಳಕೆಯಾಗದೆ ಪಾಳು ಬಿದ್ದಿತ್ತು. ಇದನ್ನು ಅರಿತ ಸಿಇಒ ಅಶ್ವತಿ ಸ್ವಥಃ ತಾವೇ ಕೈ ಯಲ್ಲಿ ಪೊರಕೆ ಹಿಡಿದು ಪುಷ್ಕರಣಿಯನ್ನು ಕ್ಲೀನ್ ಮಾಡಲು ಮುಂದಾದರು. ಇದಕ್ಕೆ ತಮ್ಮ ಸಿಬ್ಬಂದಿ ಹಾಗೂ ಗ್ರಾಮಸ್ಥರ ನೆರವನ್ನು ಸಹ ಅಶ್ವತಿ ಪಡೆದ್ರು.

source: publictv.in

ಇವರು ಮಾಡು ಕೆಲಸವನ್ನು ನೋಡಿ ನಾಚಿದ ಗ್ರಾಮಸ್ಥರು ಸಹ ತಾವೇನು ಯಾರಿಗೆ ಕಡಿಮೆ ಇಲ್ಲವೆಂಬಂತೆ ಕೈ ಜೋಡಿಸಿದ್ರು. ಕೊಡಲಿ ಹಿಡಿದು ಬೆಳೆದಿದ್ದ ಗಿಡ ಗಂಟೆಗಳನ್ನು ಕತ್ತರಿಸಿದ್ರು. ಅಲ್ಲದೆ ಪಾಳು ಬಿದ್ದ ಪುಷ್ಕರಣಿಯ ಸ್ವಚ್ಛತೆ ಮಾಡಿ ಗಮನ ಸೆಳೆದ್ರು. ಅಲ್ಲದೆ ಪರಿಸರವನ್ನು ಕ್ಲೀನ್ ಇಟ್ಟುಕೊಳ್ಳುವ ಬಗ್ಗೆ ಜನರಲ್ಲಿ ತಿಳುವಳಿಕೆ ಮೂಡಿಸಿದ್ರು. ಇನ್ನು ಐತಿಹಾಸ ಪುಷ್ಕರಣಿಯ ಸ್ವಚ್ಛತೆ ಕಾಡಿಕೊಳ್ಳುವಂತೆ ಕೇಳಿಕೊಂಡ್ರು. ಈ ಬಗ್ಗೆ ಗ್ರಾಮಸ್ಥರು ಹಾಗೂ ಪಂಚಾಯತ್ ಸದಸ್ಯರು ಇನ್ನು ಸ್ವಚ್ಛತೆಗೆ ಗಮನ ಹರಿಸುವುದಾಗಿ ಭರವಸೆ ಮೂಡಿಸಿದ್ರು.

source: publictv.in
source: publictv.in

ಇಂತಹ ಒಬ್ಬ ಅಧಿಕಾರಿ ಪ್ರತಿ ಜಿಲ್ಲೆ ಹಾಗೂ ತಾಲೂಕಗಳಲ್ಲಿ ಒಬ್ಬರಿದ್ದರೆ, ಪ್ರಧಾನಿ ಕಂಡ ಕನಸು ನನಸಾಗುತ್ತದೆ.