DCP ತಂದೆ.. IPS ಆದ ಮಗಳಿಗೆ ಸೆಲ್ಯೂಟ್ ಹೊಡಿಯಲು ಹೆಮ್ಮೆಯಂತೆ..!!

0
625

ತಂದೆ – ತಾಯಿಗಳು ಮಕ್ಕಳಿಗೆ ಏನೆಲ್ಲ ತ್ಯಾಗಮಾಡಿ ಎಷ್ಟೇ ಕಷ್ಟ ಬಂದ್ರು ಅದೆಲ್ಲವನ್ನು ಮೀರಿಸಿ ತಮ್ಮ ಜೀವನವನ್ನೇ ಶ್ರವಿಸಿ ಮಕ್ಕಳನ್ನು ಬೆಳೆಸುತ್ತಾರೆ ಅಂತ ತಂದೆ-ತಾಯಿಗಳ ಋಣವನ್ನು ತೀರಿಸಲು ಎಷ್ಟೇ ಜನ್ಮ ಹುಟ್ಟಿ ಬಂದ್ರು ಸಾದ್ಯವಿಲ್ಲ, ಮಕ್ಕಳು ಪಾಲಕರಿಂದ ಏನೆಲ್ಲ ನಿರೀಕ್ಷೆ ಮಾಡುತ್ತಾರೆ, ಆದರೆ ತಂದೆ – ತಾಯಿಗಳು ಮಕ್ಕಳಿಂದ ನಿರೀಕ್ಷೆ ಮಾಡುವುದು ಏನಂದ್ರೆ ಸಮಾಜವು ಗೌರವ ಕೊಡುವ ಒಳ್ಳೆಯ ಹುದ್ದೆಯನ್ನು ಅಲಂಕರಿಸಿದರೆ ಸಾಕು ಅದೇ ತಂದೆ ತಾಯಿಗಳ ಋಣ ತಿರಿಸಿದಹಾಗೆ. ಮಕ್ಕಳಿಗೆ ತಾಯಿ ಜಿವಕೊಟ್ಟರೆ, ಜೀವ ಬೆಳೆಸುವುದು ತಂದೆ ಅಂತಹ ತಂದೆಯ ಸರಿಸಮವಾದ ಹುದ್ದೆಯಲ್ಲಿ ಮೇಲಾಧಿಕಾರಿಯಾದ ಮಕ್ಕಳಿಗೆ ತಂದೆಯೇ ಸೆಲ್ಯೂಟ್ ಹೊಡೆದರೆ ಹೇಗಿರುತ್ತೆ ಅಲ್ವ ಕೇಳಲು ರೋಚಕ ಸಿನಿಮಾ ಕಥೆಯಂತೆ ಇದ್ದರೂ ಅಸಲಿಗೆ ಈ ಸ್ಟೋರಿ ಸತ್ಯೆವಾಗಿದೆ.

ಹೌದು ಒಂದೇ ಆಫೀಸ್’ನಲ್ಲಿ ತಂದೆ ಡಿಸಿಪಿ ಆದ್ರೆ ಮಗಳು ಐಪಿಎಸ್​ ಇಂತಹ ಒಂದು ರೋಚಕ ಕಥೆ ಆಗಿರುವುದು ತೆಲಂಗಾಣದಲ್ಲಿ. ಪೋಲೀಸ್ ಇಲಾಖೆಯಲ್ಲಿ ಐಪಿಎಸ್​ ಮಗಳಿಗೆ, ಡಿಸಿಪಿ ಅಪ್ಪನ ಸೆಲ್ಯೂಟ್ ಮಾಡೋಕೆ ಅಪ್ಪನಿಗೆ ಖುಷಿಯೋ ಖುಷಿಯಂತೆ ಅದ್ರಲ್ಲಿ ಮಗಳು ಅಪ್ಪನಿಗೆ ಆದೇಶ ಕೊಟ್ರೆ ತಂದೆಗೆ ಹೆಮ್ಮೆಯಂತೆ, ತನ್ನ ಹೆಗಲ ಮೇಲೆ ಕೂತುಕೊಂಡು ಎದೆಯುದ್ದ ಬೆಳೆದ ಮಗಳು, ಇಂದು ಕೈತೋರಿ ಆದೇಶ ನೀಡುತ್ತಾಳೆ. ಮಗಳು ಆದೇಶ ಕೊಟ್ಟರೆ ಅಪ್ಪನಿಗೆ ಹೆಮ್ಮೆಯೋ ಹೆಮ್ಮೆ, ಈ ವಿಷಯ ತೆಲಂಗಾಣದ ತುಂಬ ಮನೆ ಮಾತಾಗಿರುವ ಅಪ್ಪ – ಮಗಳ ಕಥೆ ನಿಜವಾದ ಸಿನಿಮಾವಾಗಿದೆ. ಮುಂದಿನ ವರ್ಷ ನಿವೃತ್ತರಾಗುವ ಶರ್ಮಾ ಅವರು ಪ್ರಸ್ತುತ ಹೈದರಾಬಾದ್ ನಲ್ಲಿರುವ MALKAJGIRI ಪ್ರದೇಶದಲ್ಲಿ ರಾಚಕೊಂಡ ಪೋಲಿಸ್ ಕಮೀಷನರೇಟ್ ‘ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಪುತ್ರಿ ಸಿಂಧು ಶರ್ಮಾ 2014 ರ ಬ್ಯಾಚ್ IPS ತೇರ್ಗಡೆಯಾಗಿ ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿಯಾಗಿದ್ದಾಳೆ.

ಉಮಾಮಹೇಶ್ವರ್ ಸಾಧಾರಣ SI ಆಗಿ ಪೊಲೀಸ್‌ ಇಲಾಖೆಗೆ ಸೇರಿದ್ದರು. ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿ, ಗಮನ ಸೆಳೆದು IPS ಗೆ ಪ್ರಮೋಶನ್‌ ಪಡೆದವರು. ತಂದೆಯ ಕನಸಿನಂತೆ ಮಗಳು ಸಿಂಧು ನೇರವಾಗಿ IPS ಪಾಸ್‌ ಮಾಡಿ SP ಆಗಿರುವ ಸಿಂಧು ಶರ್ಮಾಗೆ ಸೆಲ್ಯೂಟ್ ಹೊಡೀತಾರೆ. ಮಗಳು ಕೊಡೋ ಆದೇಶವನ್ನು ಹೆಮ್ಮೆಯಿಂದ ಪಾಲಿಸ್ತಾರೆ. ಮಗಳು ಪ್ರೀತಿಯಿಂದ ಆದೇಶ ಕೊಡುತ್ತಿದ್ದಾರೆ, ಹೆಮ್ಮೆಯಿಂದ ಎದೆಯುಬ್ಬಿಸಿಕೊಂಡು ಚಾಚೂ ತಪ್ಪದೆ ಆದೇಶ ಪಾಲಿಸುತ್ತಾರೆ. ಒಬ್ಬ ತಂದೆಗೆ ಇದಕ್ಕಿಂತ ಸಾರ್ಥಕತೆ ಬೇರೆ ಏನಿದೆ ಎಂಬುವುದು ಉಮಾಮಹೇಶ್ವರ್ ಮಾತು.

ನಮ್ಮ ಕರ್ತವ್ಯದ ಸಂದರ್ಭದಲ್ಲಿ ನಾವು ಎದುರು ಬದುರಾಗಿದ್ದು ಇದೇ ಮೊದಲು. ಆಕೆಯೊಂದಿಗೆ ಕೆಲಸ ಮಾಡುವ ಅವಕಾಶ ಪಡೆದ ನಾನು ಅದೃಷ್ಟವಂತ. ಆಕೆ ನನ್ನ ಮೇಲಾಧಿಕಾರಿ. ಆಕೆಯನ್ನು ನೋಡಿದಾಗ ನಾನು ಸೆಲ್ಯೂಟ್​ ಹೊಡೆಯುತ್ತೇನೆ. ನಾವಿಬ್ಬರೂ ನಮ್ಮ ಕರ್ತವ್ಯ ಮಾಡುತ್ತಿದ್ದೇವೆ. ಆದರೆ ಮನೆಯಲ್ಲಿ ಸಾಮಾನ್ಯ ಅಪ್ಪ, ಮಗಳಂತೆ ಇರುತ್ತೇವೆ ಎಂದು ಉಮಾಮಹೇಶ್ವರ್ ಹೇಳುತ್ತಾರೆ. ಸಾರ್ವಜನಿಕ ಸಭೆಯಲ್ಲಿ ಮಹಿಳಾ ಭದ್ರತೆಯನ್ನು ನೋಡಿಕೊಳ್ಳುತ್ತಿರುವ ಸಿಂಧು, “ನಾನು ಬಹಳ ಖುಷಿಯಾಗಿದ್ದೇನೆ, ನಾವು ಒಟ್ಟಾಗಿ ಕೆಲಸ ಮಾಡಲು ಇದು ಉತ್ತಮ ಅವಕಾಶ” ಎಂದು ಹೇಳಿದರು.