ಬದುಕುಳಿದ ಮಹಿಳೆಯನ್ನು ಸತ್ತಳೆಂದು ಶವಾಗಾರದಲ್ಲಿಟ್ಟ ವ್ಯದ್ಯರು; ನೋಡಲು ಹೋದ ಕುಟುಂಬದವರಿಗೆ ಬಿಗ್ ಶಾಕ್..

0
585

ವ್ಯದ್ಯರು ಮಾಡುವ ಯಡವಟ್ಟಿನಿಂದ ವ್ಯಕ್ತಿಯ ಪ್ರಾಣವೇ ಹೋಗಿರುವ ಘಟನೆಗಳು ಹಲವಾರು ಇವೆ ಆದರೆ ಜೀವಂತವಿರುವ ಮಹಿಳೆಯನ್ನು ಮೃತಪಟ್ಟಿದ್ದಾಳೆಂದು ಶವಾಗಾರದಲ್ಲಿಟ್ಟ ಘಟನೆ ಕೇಳುವುದು ಇದೆ ಮೊದಲು ಅನಿಸುತ್ತೆ. ಕೆಲವು ಘಟನೆಗಳು ನಡೆದ ಪ್ರಕಾರ ವ್ಯದ್ಯರು ಚಿಕಿತ್ಸೆ ನೀಡುವ ಸಮಯದಲ್ಲಿ, ಶಸ್ತ್ರಚಿಕಿತ್ಸೆ ಮಾಡುವಾಗಿ ಅಥವಾ ಚಿಕಿತ್ಸೆಯಲ್ಲಿ ಏರುಪೇರಾಗಿ ರೋಗಿಯ ಪ್ರಾಣ ಹೋಗುವುದು ಸಾಮಾನ್ಯವಾದರೆ ಜೀವಂತ ಮಹಿಳೆಯನ್ನು ಹೇಗೆ ಶವಾಗಾರದಲ್ಲಿ ಹಾಕಿದರು ಎನ್ನುವ ಅನುಮಾನ ಎಲ್ಲರಲ್ಲೂ ಮೂಡುವುದು ಸಹಜವೇ.

ಹೌದು ಪಂಜಾಬಿನ ಕಪೂರ್ತಲಾ ಎನ್ನುವ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಖಾಸಗಿ ಆಸ್ಪತ್ರೆಗೆ 65 ವರ್ಷದ ಮಹಿಳೆ ಚಿಕಿತ್ಸೆಗಾಗಿ ಬಂದಾಗ ಮಹಿಳೆ ಸತ್ತಳೆಂದು ವ್ಯದ್ಯರು ಶವಾಗಾರದಲ್ಲಿ ಇಟ್ಟಿದ್ದಾರೆ. ಆದರೆ ಈ ಮಹಿಳೆ ಇನ್ನೂ ಬದುಕುಳಿದಿದ್ದು ಅಲ್ಲಿನ ಜನರು ವ್ಯದ್ಯರ ವಿರುದ್ದ ರೋಚ್ಚಿಗೆದಿದ್ದಾರೆ. ವ್ಯದ್ಯರು ಇಟ್ಟಿದ್ದ ಶವಗಾರ ಪೆಟ್ಟಿಗೆಯನ್ನು ಮಹಿಳೆಯ ಕುಟುಂಬದವರು ತೆಗೆದುಕೊಂಡು ಹೋಗಿದ್ದಾರೆ. ಆಗ ಕೊನೆಯ ಸಲ ಮುಖ ನೋಡಲು ಪೆಟ್ಟಿಗೆಯನ್ನು ತೆರೆದಿದ್ದಾರೆ. ಈ ವೇಳೆ ಮಹಿಳೆ ಉಸಿರಾಡುವುದು ಗೊತ್ತಾಗಿದೆ.

ಇದನ್ನು ತಿಳಿದ ಕುಟುಂಬದವರು ವ್ಯದ್ಯರನ್ನು ಕರೆಸಿದ್ದಾರೆ ಆಗ ವ್ಯದ್ಯರಿಗೆ ಮಹಿಳೆ ಉಸಿರಾಡುವುದು ಗೊತ್ತಾಗಿದ್ದು ನೀರು ತೆಗೆದುಕೊಂಡು ಮುಖಕ್ಕೆ ಹಾಕಿದಾಗ ಕೂಡಲೇ ಎಚ್ಚರಗೊಂಡ ಮಹಿಳೆ. ಕಣ್ಣು ಬಿಟ್ಟಿದ್ದಾಳೆ ನಂತರ ಪೆಟ್ಟಿಗೆಯಿಂದ ಹೊರ ತೆಗೆದು ಚಿಕಿತ್ಸೆ ನೀಡಿದ್ದಾರೆ. ಆದರೆ ಅವಳ ಆರೋಗ್ಯ ಮತ್ತೊಮ್ಮೆ ಕ್ಷೀಣಿಸಲು ಪ್ರಾರಂಭಿಸಿದಾಗ ಅವಳನ್ನು ಮತ್ತೆ ಕಪುರ್ತಾಲ ನಾಗರಿಕ ಆಸ್ಪತ್ರೆಗೆ ಸ್ಥಳಾಂತರ ಮಾಡಿದ್ದಾರೆ. ಆದರೆ ಮಹಿಳೆಗೆ ಉಸಿರಾಟದ ತೊಂದರೆ ಆಗಿದ್ದರಿಂದ ಮೃತ ಪಟ್ಟಿದ್ದಾಳೆ. ಈ ಸಂಬಂಧ ಕಲಾ ಸಂಘಿಯನ್ ಪೋಲೀಸ್ ಉಸ್ತುವಾರಿ ತಕರ್ ಸಿಂಗ್ ಅವರು ಮಹಿಳೆಯ ಸಂಬಂಧಿಕರು ಯಾವುದೇ ದೂರು ನೀಡಿಲ್ಲ ಎಂದು ತಿಳಿಸಿದ್ದಾರೆ.

DSP (ಉಪವಿಭಾಗ) ಹರ್ಜಿಂದರ್ ಸಿಂಗ್ ಗಿಲ್ ಅವರು ಈ ವಿಷಯದ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ. ಆದಾಗ್ಯೂ, ಈ ವಿಷಯವು ನಗರದ ತುಂಬೆಲ್ಲ ಹರಡಿದ್ದು ವ್ಯದ್ಯರು ಮಾಡಿದ ಯಡವಟ್ಟಿನ ಬಗ್ಗೆ ಎಲ್ಲೆಡೆ ಮಾತನಾಡುತ್ತಿದ್ದಾರೆ. ಹಾಗೆ ಯಾರೇ ಅಸ್ಪತ್ರೆಯಲ್ಲ್ಲಿ ಮೃತಪಟ್ಟರು ಅವರನ್ನು ಮತ್ತೊಮ್ಮೆ ಪರಿಕ್ಷಿಸಿಸಲು ಬೇರೆ ವ್ಯದ್ಯರ ಬಳಿ ತೆಗೆದುಕೊಂಡು ಹೋಗುತ್ತಿದ್ದಾರೆ. ಈ ಘಟನೆ ಅಲ್ಲಿ ಅಷ್ಟೇ ಅಲ್ಲದೆ ಇಡಿ ದೇಶದಲ್ಲೇ ವೈರಲ್ ಆಗಿದ್ದು, ವ್ಯದ್ಯರು ಮೃತಪಟ್ಟಿದ್ದಾರೆ ಎಂದು ತಿಳಿಸಿದರು ಮತ್ತೊಮ್ಮೆ ಪರೀಕ್ಷಿಸಿ ನೋಡಿ ಎಂದು ಹೇಳುತ್ತಿದ್ದಾರೆ.