೫೦೦ ಹಾಗೂ ೧೦೦೦ರೂಗಳ ನೋಟುಗಳ ಬ್ಯಾನ್ ಸುದ್ದಿ ಕೇಳಿ ಮಹಿಳೆಯರ ಸಾವು!!!

0
846

ತಮ್ಮ ನೆಚ್ಚಿನ ನಟ, ನಟಿಯರು, ರಾಜಕಾರಣಿಗಳು ದುರಂತಕ್ಕೀಡಾಗ, ಹೆಚ್ಚು ಸಂಭ್ರಮಿಸಿದಾಗ ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಳ್ಳೋದು, ಹೃದಯಾಘಾತಕ್ಕೊಳಗಾಗುವ ಘಟನೆ ನಡೆಯುತ್ತಿರುವುದನ್ನು ಕೇಳಿದ್ದೇವೆ, ಆದರೆ ಅದೇ ರೀತಿ 500-1000 ರುಪಾಯಿ ಮುಖಬೆಲೆಯ ನೋಟುಗಳ ಚಲಾವಣೆ ಬಂದ್ ಹಿನ್ನೆಲೆಯಲ್ಲಿ ದೇಶವನ್ನು ಅಭಿವೃದ್ಧಿ ಪತದಲ್ಲಿ ಮುನ್ನಡೆಸಲು ಮುಂದಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭ್ರಷ್ಟಾಚಾರ, ಕಪ್ಪುಹಣ, ನಕಲಿ ನೋಟುಗಳ ಚಲಾವಣೆ ತಡೆಗೆ ಪ್ರಧಾನಿ ಮೋದಿ ಅವರು ಹಲವು ಕಠಿಣ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ. ಇದರಿಂದಾಗಿ ಗೋರಕ್ಪುರ ರಲ್ಲಿ 40 ವರ್ಷದ ಮಹಿಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ನಲ್ಲಿ ವರಿದಿಯಾಗಿದೆ.

capture capture1

ಹಿಂದೂಸ್ತಾನ್ ಟೈಮ್ಸ್ ಪ್ರಕಾರ “ಕಂದಾಯ ಇಲಾಖೆಯ ಅಧಿಕಾರಿಗಳು ಮೃತ ಮಹಿಳೆಯ ಮನೆ ಭೇಟಿ ಕೊಟ್ಟಿದ್ದಾರೆ. ಒಂದು ವೇಳೆ ಶಾಕ್ ನಿಂದಾಗಿ ಮಹಿಳೆ ಸಾವು ಸಂಭವಿಸಿದ್ದಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕುಶಿನಗರ ಶಂಭು ಕುಮಾರ್ ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ. ಮೃತ ಮಹಿಳೆಯ ಮುಂದೆ ಕುಟುಂಬದವರ ರೋಧನೆ ಸಾಮಾಜಿಕ ತಾಣಗಳಲ್ಲಿ ಈಗ ಹರಿದಾಡುತ್ತಿದೆ.

ಅಷ್ಟೇ ಅಲ್ಲ, ತೆಲಂಗಾಣಾದ ಮೆಹಬೂಬಾಬಾದ್ ಪಟ್ಟಣದ ಶನಿಗಾಪೂರಂ ಗ್ರಾಮದಲ್ಲಿ ಮಹಿಳೆಯೊಬ್ಬಳು ಮನೆಯಲ್ಲಿರುವ ಹಣ ಕೇವಲ ಕಾಗದದ ಚೂರಿನಂತೆ ಯಾವುದೇ ಮೌಲ್ಯವಿಲ್ಲವೆಂದು ತಿಳಿದು ಆಘಾತಗೊಂಡು ನೇಣಿಗೆ ಶರಣಾದ ಹೇಯ ಘಟನೆ ಕೂಡ ವರದಿಯಾಗಿದೆ.

ಪೊಲೀಸ್ ಮೂಲಗಳ ಪ್ರಕಾರ, ಮಹಿಳೆ ಕೆ.ವಿನೋದಾ ಮತ್ತು ಆಕೆಯ ಪತಿ ಉಪೇಂದ್ರಿಯಾ ಕಳೆದ ಮೂರು ತಿಂಗಳುಗಳ ಹಿಂದೆ 12 ಎಕರೆ ತೋಟವನ್ನು 55 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಿದ್ದರು. ಮತ್ತೊಂದು ತೋಟವನ್ನು ಖರೀದಿಸಬೇಕು ಎನ್ನುವ ಉದ್ದೇಶದಿಂದ ಬ್ಯಾಂಕ್ನಲ್ಲಿ ಹಣ ಠೇವಣಿ ಮಾಡದೆ ತಂದು ಮನೆಯಲ್ಲಿಟ್ಟಿದ್ದರು.ಮನೆಯಲ್ಲಿ ತಂದಿಟ್ಟ ಹಣ ಚಲಾವಣೆಯಾಗುವುದಿಲ್ಲ ಎನ್ನುವ ಸುದ್ದಿ ತಿಳಿದು ಕೆ.ವಿನೋದಾ ನೇಣಿಗೆ ಶರಣಾಗಿದ್ದಾಳೆ.

ಮಹಿಳೆ ವಿನೋದಾ ಅನಕ್ಷರಸ್ಥೆಯಾಗಿದ್ದು ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿದ್ದರಿಂದ, ಕೇಂದ್ರ ಸರಕಾರದ ಆದೇಶದ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿರದರಿಂದ ಈ ಘಟನೆ ನೇರ ಕಾರಣವಾಗಿದೆ. ಕೇಂದ್ರ ಸರ್ಕಾರ ಅನಕ್ಷರಸ್ಥೆಯರಿಗೆ 500-1000 ರುಪಾಯಿ ಮುಖಬೆಲೆಯ ನೋಟುಗಳ ಚಲಾವಣೆ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಲ್ಲಿ ಯಾವ ಯಾವ ಕ್ರಮಗಳನ್ನು ಕೈಗೊಳುತ್ತದೋ ಎಂದು ಕಾದು ನೋಡಬೇಕಾಗಿದೆ.