ಸತ್ತನೆಂದು ಸ್ಮಶಾನಕ್ಕೆ ಕರೆದೊಯ್ದರೆ, ಕಣ್ಣುಬಿಟ್ಟ ಯುವಕ!! ಭಯಭೀತರಾದ ಹಳ್ಳಿಗರು!!!

0
594

ಸಾವು ಗೆದ್ದ ಮನಗುಂಡಿ ಕುಮಾರ್

ಅಪರೂಪದಲ್ಲಿ ಅಪರೂಪ ಘಟನೆ ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದು ಕರೆಸಿಕೊಳ್ಳುವ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ. ಅದೇನಪ್ಪಾ ಅಂದ್ರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕನೊಬ್ಬ ಸಾವನ್ನಪಿದ್ದಾನೆ ತಿಳಿದು, ಆತನನ್ನು ಅಂತ್ಯ ಸಂಸ್ಕಾರ ಮಾಡುವವೇಳೆ ಆತನಿಗೆ ಜೀವ ಇರುವ ಬಗ್ಗೆ ತಿಳಿದುಬಂದಿದೆ.

Credits; Public TV

ಘಟನೆಯ ಹಿನ್ನಲೆ: ಧಾರವಾಡ ಮನಗುಂಡಿ ಎಂಬಲ್ಲಿ ಬೀದಿ ನಾಯಿಯ ದಾಳಿಯಿಂದ ಗಾಯಗೊಂಡಿದ್ದ ಬಾಲಕನನ್ನುಆಸ್ಪ್ರತ್ರೆಗೆ ದಾಖಲು ಮಾಡಲಾಗಿತ್ತು. ೧೬ ವರ್ಷದ ಕುಮಾರ್ ಗಾಯಗೊಂಡ ಬಾಲಕ. ಆಸ್ಪ್ರತ್ರೆಗೆ ದಾಖಲಾದಾಗ ವೈದ್ಯರು, ನಾಡಿಮಿಡಿತ ತಪಾಸಣೆ ಮಾಡಿದರು. ಬಳಿಕ ವೈದ್ಯರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಗಿ ತಿಳಿಸಿದ್ದರು. ಬಳಿಕಸಂಪ್ರದಾಯದಂತೆ ಅಂತ್ಯಸಂಸ್ಕಾರ ಮಾಡಲು ಮುಂದಾದರು. ಆಗ ಈ ಘಟನೆ ನಡೆದಿದೆ.

Credits: Public TV

ಚಟ್ಟದ ಮೇಲೆ ಮಲಗಿದ್ದ ಶವ ಉಸಿರಾಡುವದನ್ನು ಕಂಡು ನೆರೆದವರು ಕಕ್ಕಾಬಿಕ್ಕಿಯಾದರು. ಆದರೆ ತಂದೆ ತಾಯಿಗೆ ಆದಸಂತಸಕ್ಕೆ ಪಾರವೇ ಇರಲಿಲ್ಲ. ಸದ್ಯ ಕುಮಾರ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.