ನಗದು ಕೊರತೆ ನಡುವೆ ಡೆಬಿಟ್ ಕಾರ್ಡ್ ಶುಲ್ಕ ಮತ್ತೆ ವಾಪಸ್

0
1006

ಜನವರಿ 1 ರಿಂದ ಡೆಬಿಟ್ ಕಾರ್ಡ್ ಬಳಕೆ ಮೇಲೆ ಮತ್ತೆ ವಹಿವಾಟು ಶುಲ್ಕ. ಏನ್ ಮಾಡೋದು ಸ್ವಾಮಿ ನಾವು ಮಾಧ್ಯಮ ವರ್ಗದವರು , ಸರ್ಕಾರ ಏನು ಮಾಡಿದರು ಸಹಿಸಿಕೊಳ್ಳಬೇಕು.

ಇನ್ನೂ ನೋಟು ನಿಷೇಧದ ಬಿಸಿ ಆರಿಲ್ಲ. ಚಿಲ್ಲರೆ ಕೊರತೆ ದೇಶದ ಹಲವು ಕಡೆಗಳಲ್ಲಿ ಇನ್ನೂ ಬಾಧಿಸ್ತಾ ಇದೆ. ಅಂಥದ್ರಲ್ಲಿ ಕೇಂದ್ರ ಸರ್ಕಾರ ಎಟಿಎಂ ಬಳಕೆ ಶುಲ್ಕ ಹಾಗೂ ಡೆಬಿಟ್ ಕಾರ್ಡ್ ವಹಿವಾಟು ಶುಲ್ಕದಿಂದ ವಿನಾಯಿತಿ ನೀಡದೇ ಇರೋದು ಜನರಲ್ಲಿ ಅಸಮಾಧಾನ ಮೂಡಿಸಿದೆ.

ಎಷ್ಟೋ ಸಾರ್ವಜನಿಕರ ಪ್ರಕಾರ ನಗದು ವಹಿವಾಟು ಸಹಜ ಸ್ಥಿತಿಗೆ ಬರುವ ತನಕವಾದ್ರೂ ಶುಲ್ಕ ವಿನಾಯಿತಿ ನೀಡಬಹುದಿತ್ತು. ಆರ್ ಬಿ ಐ ಈ ಬಗ್ಗೆ ಯಾವುದೇ ಚಕಾರ ಎತ್ತದೇ ಇರುವುದರಿಂದ ಬ್ಯಾಂಕ್ ಗಳು ಎಂದಿನಂತೆ ಎಟಿಎಂ ಬಳಕೆ ಶುಲ್ಕ ಹಾಗೂ ಡೆಬಿಟ್ ಕಾರ್ಡ್ ವಹಿವಾಟು ಶುಲ್ಕ ಪಡೆಯಲು ಆರಂಭಿಸಿವೆ.

ನಗದು ಸುಲಭವಾಗಿ ದೊರೆಯುತ್ತಿಲ್ಲ ಆದರೂ ಮೊದಲ ಐದು ವಹಿವಾಟು ಉಚಿತ, ನಂತರ ಟ್ರಾನ್ಸಾಕ್ಷನ್ ಗೆ ಬೇರೆ ಬೇರೆ ಬ್ಯಾಂಕ್ ಗಳು ವಿಭಿನ್ನ ಶುಲ್ಕ ಪಡೆಯುತ್ತಿವೆ. ಎಸ್ ಬಿ ಐ, ಪಂಜಾಬ್ ನ್ಯಾಶನಲ್ ಬ್ಯಾಂಕ್ ಹಾಗೂ ಐಸಿಐಸಿಐ ಬ್ಯಾಂಕ್ ಗಳು ಪ್ರತಿ ವಹಿವಾಟಿಗೆ 15 ರೂಪಾಯಿ ಶುಲ್ಕ ಪಡೆಯುತ್ತಿದ್ದವು. ಇನ್ನುಳಿದ ಬಹುತೇಕ ಬ್ಯಾಂಕ್ ಗಳು 20 ರೂಪಾಯಿ ಪಡೆಯುತ್ತಿದ್ದವು. ಶೇ.30-40 ರಷ್ಟು ಎಟಿಎಂಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ ಆದರೂ ಡೆಬಿಟ್ ಕಾರ್ಡ್ ವಹಿವಾಟಿನ ಮೇಲೆ ಶುಲ್ಕ ಎಷ್ಟು ಸರಿ. ಹಾಗಾಗಿ ಡಿಜಿಟಲ್ ವಹಿವಾಟಿನ ಮೇಲೆ ಸರ್ಕಾರ ರಿಯಾಯಿತಿ ನೀಡಬೇಕು ಅನ್ನೋದು ಹಲವರ ಅಭಿಪ್ರಾಯ.