ದಿನ ಭವಿಷ್ಯ: 13 ಡಿಸೆಂಬರ್ 2017

0
747
ದಿನ ಭವಿಷ್ಯ

ಮೇಷ:

ಕೋರ್ಟ್, ಕಚೇರಿ ಕೆಲಸಗಳು ವಿಳಂಬವಾದರೂ ನಿರ್ಣಯಗಳು ನಿಮ್ಮನ್ನು ಬಿಟ್ಟು ಹೋಗಲಾರವು. ಧೈರ್ಯದ ಹೆಜ್ಜೆಯಿಂದ ಸುಖ.

ವೃಷಭ:

ಆಕಸ್ಮಿಕ ಧನಲಾಭದಿಂದ ಹೊಸ ಆಸ್ತಿ ಖರೀದಿಗೆ ಯತ್ನ, ಹಿರಿಯರಿಂದ ಆಡೆತಡೆ. ಕೃಷಿಕರು, ವೈದ್ಯರುಗಳಿಗೆ ಉತ್ತಮ ಫಲ.

ಮಿಥುನ:

ಕೆಲಸ ಕಾರ್ಯಗಳಿಗೆ ಅಧೈರ್ಯದಿಂದ ಹಿಂದೇಟು. ಮಡದಿಯೊಂದಿಗೆ ಸಹಬಾಳ್ವೆಯಿಂದ ಜೀವನ ನಡೆಸಲು ಯತ್ನ, ಉಲ್ಲಾಸ.

ಕರ್ಕ:

ವೃಥಾ ಕಾಲಹರಣದಿಂದ ಮಹತ್ವದ ಕಾರ್ಯಗಳಿಗೆ ಹಿನ್ನಡೆ. ಸ್ತ್ರೀ ವಿಚಾರದಲ್ಲಿ ಸ್ವಲ್ಪ ಕಿರಿಕಿರಿ ಎನಿಸಲಿದ್ದು, ಸೂಕ್ತ ಹೆಜ್ಜೆಯಿಂದ ಸಮಾಧಾನ.

ಸಿಂಹ:

ಹೊಸ ಯೋಜನೆಗಳಿಗೆ ಹಣ ಮತ್ತು ಸಮಯ ಎರಡೂ ವ್ಯಯವಾಗಲಿದ್ದು, ಆಪ್ತರ ಸಹಾಯದಿಂದ ತೊಂದರೆ ಪರಿಹಾರ.

ಕನ್ಯಾ:

ದೇಹ ಸ್ಥಿತಿಯಲ್ಲಿನ ಏರು ಪೇರಿನಿಂದ ದೇಹ ದಂಡನೆ. ಕೃಷಿಕರಿಗೆ ಶ್ರಮಕ್ಕೆ ತಕ್ಕ ಫಲವಿದೆ. ದಾಂಪತ್ಯದಲ್ಲಿ ಸ್ವಲ್ಪ ಸುಧಾರಣೆ.

ತುಲಾ:

ಹಳೆ ವ್ಯವಹಾರಗಳಿಗೆ ಸೂಕ್ತ ಪ್ರಗತಿ. ವಿದ್ಯಾರ್ಥಿಗಳಿಗೆ ಚಂಚಲತೆಯಿಂದ ಏಕಾಗ್ರತೆ ಭಂಗ. ನಯ ಮಿತ್ರರಿಂದ ಸಹಾಯ.

ವೃಶ್ಚಿಕ:

ಭಯದ ವಾತಾವರಣದಿಂದ ಹೊರ ಬಂದರೆ ಪ್ರತಿ ಕಾರ್ಯಗಳಿಗೆ ಜಯ ಹೊಂದುವಿರಿ. ನೂತನ ಯೋಜನೆಗೆ ಹೆಂಡತಿಯಿಂದ ಸಹಕಾರ.

ಧನು:

ಮಹಿಳೆಯರಿಗೆ ಮನೆಯಲ್ಲಿ ಹಿರಿಯರಿಂದ ಕಿರಿಕಿರಿ. ಪತಿಯಿಂದ ಸಾಂತ್ವನ. ಧಾರ್ಮಿಕ ಕಾರ್ಯಗಳಿಗೆ ಮನಸ್ಸಿಗೆ ಸಮಾಧಾನ.

ಮಕರ:

ಹಿತ ಮಿತ್ರರಲ್ಲಿ ಅಭಿಮಾನ ವೃದ್ಧಿ. ಸಾಧಾರಣ ಗುರು ಬಲದಿಂದ ಆರ್ಥಿಕ ಹಿನ್ನಡೆ. ನವ ಶಿಶುವಿನಿಂದ ಮನಸ್ಸಿಗೆ ಉಲ್ಲಾಸ.

ಕುಂಭ:

ಮಂಗಳ ಕಾರ್ಯ ಮುಂದೂಡುವಿಕೆಯಿಂದ ಮನಸ್ಸಿಗೆ ಬೇಸರ. ಆಪ್ತರ ಸಾಂತ್ವನದಿಂದ ಪರಿಹಾರ. ದೂರ ಪ್ರಯಾಣ.

ಮೀನ:

ಆಸ್ತಿ ಖರೀದಿ ಬಗ್ಗೆ ಹೊಸ ಯೋಜನೆ. ಪತ್ನಿ ಸಹಾಯದಿಂದ ಜೀವನಕ್ಕೆ ಹೊಸ ತಿರುವು. ಮಕ್ಕಳಿಂದ ಶುಭ ಸುದ್ದಿ.