ಹಲ್ಲುಗಳ ಚಿಕಿತ್ಸೆ ಕುರಿತು ನೀಮಗೂ ತಪ್ಪು ಮಾಹಿತಿ ಇದಿಯಾ? ಹಾಗಾದ್ರೆ ಯಾವುದು ಸರಿ-ತಪ್ಪು ಇಲ್ಲಿದೆ ನೋಡಿ ಮಾಹಿತಿ.!

0
344

ಹಲ್ಲುಗಳೇ ಮನುಷ್ಯನ ಆರೋಗ್ಯವನ್ನು ಸೂಚಿಸುವುದರ ಜೊತೆಗೆ ಆಯುಷ್ಯನ್ನು ಕೂಡ ಸೂಚಿಸುತ್ತೇವೆಎಂದರೆ ತಪ್ಪಾಗಲಾರದು. ಏಕೆಂದರೆ ತಿನ್ನುವ ಆಹಾರವನ್ನು ಮೊದಲು ಹಲ್ಲುಗಳು ಹೇಗೆ ಜೀರ್ಣ ಗೊಳಿಸುತ್ತೇವೆ ಎನ್ನುವದರ ಮೇಲೆ ತಿಂದ ಆಹಾರ ಮೈಗೆ ಒಗ್ಗುತೆ, ಅದಕ್ಕಾಗಿಯೇ ಹಲ್ಲು ಬಹಳಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಂಡಿವೆ. ಆದರೆ ಇವುಗಳ ಚಿಕಿತ್ಸೆಯಲ್ಲಿ ಹಲವು ತಪ್ಪು ಮಾಹಿತಿಗಳು ಜನರಲ್ಲಿ ಅಚ್ಚಾಗಿವೆ ಅದರಿಂದಲೇ ಬಹಳಷ್ಟು ಜನರು ಚಿಕಿತ್ಸೆಯಿಂದ ದೂರ ಇದ್ದಾರೆ. ಹಾಗಾದರೆ ಯಾವ ಚಿಕಿತ್ಸೆಗಳ ಬಗ್ಗೆ ತಪ್ಪು ಸುದ್ದಿ ಹರಡಿದೆ ಎನ್ನುವ ಮಾಹಿತಿ ಇಲ್ಲಿದೆ ನೋಡಿ.

Also read: ಪ್ರತಿನಿತ್ಯ ಹಲ್ಲುಜ್ಜುವ ವೇಳೆ ನಾಲಿಗೆ ಸ್ವಚಗೊಳಿಸದಿದ್ದರೆ ಎಷ್ಟೊಂದು ಅಪಾಯವಿದೆ ನೋಡಿ..

ಹೌದು ಯಾವುದೇ ಆಧಾರವಿಲ್ಲದ ತಪ್ಪು ಮಾಹಿತಿ ಹರಡಿವೆ ,ವಿಜ್ಞಾನವೂ ಇವುಗಳನ್ನು ತಪ್ಪು ಎಂದು ಹೇಳಿದೆ. ಅದರಂತೆ ನಂಬುತ್ತಿದ್ದರೆ ಅದರಿಂದ ನಮ್ಮ ಆರೋಗ್ಯಕ್ಕೆ ಹಾನಿಯುಂಟಾಗುತ್ತದೆಯೇ ಹೊರತು ಯಾವುದೇ ಲಾಭವಿಲ್ಲ.

1. ಹಲ್ಲು ಕ್ಲೀನಿಂಗ್:

ಡೆಂಟಲ್ ಕ್ಲೀನಿಂಗ್ ಅಥವಾ ಹಲ್ಲುಗಳನ್ನು ಸ್ವಚ್ಛಗೊಳಿಸಿಕೊಳ್ಳುವುದರಲ್ಲಿ ಯಾವುದೇ ಆಪತ್ತು ಇಲ್ಲ. ಈ ಪ್ರಕ್ರಿಯೆಯಲ್ಲಿ ಹಲ್ಲುಗಳ ಹೊರಗಿನ ಹೊದಿಕೆ ಅಥವಾ ದಂತಕವಚವನ್ನು ಮಾತ್ರ ಸ್ವಚ್ಛಗೊಳಿಸಲಾಗುತ್ತದೆ. ಇದು ಹಲ್ಲುಗಳಿಗೆ ಹಾನಿಯನ್ನಂಟು ಮಾಡುವ ಪಾಚಿಯನ್ನು ನಿವಾರಿಸುತ್ತದೆ. ಕ್ಲೀನಿಂಗ್ ಪ್ರಕ್ರಿಯೆಯಲ್ಲಿ ಕಿಟ್ಟವನ್ನು ಮಾತ್ರ ತೆಗೆಯಲಾಗುತ್ತದೆ ಮತ್ತು ಇದಕ್ಕೂ ಹಲ್ಲುಗಳ ಸಂವೇದನಾಶೀಲತೆಗೂ ಯಾವುದೇ ಸಂಬಂಧವಿಲ್ಲ.

2. ರಕ್ತಸ್ರಾವವಿದ್ದರೆ ಹಲ್ಲುಗಳನ್ನು ಉಜ್ಜಬಾರದು?

ವಸಡುಗಳಿಂದ ರಕ್ತಸ್ರಾವವು ಬಾಯಿಯ ಸಮಸ್ಯೆಯಾಗಿದೆ ಮತ್ತು ಇದು ವಸಡುಗಳಲ್ಲಿ ಸೋಂಕನ್ನು ಸೂಚಿಸುತ್ತದೆ. ಇದನ್ನು ಜಿಂಜಿವೈಟಿಸ್ ಎಂದು ಕರೆಯಲಾಗುತ್ತದೆ. ಹಲ್ಲುಗಳನ್ನು ಬ್ರಷ್ ಮಾಡುವುದು ಯಾವುದೇ ರೀತಿಯಲ್ಲಿಯೂ ಬಾಯಿಯ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುವುದಿಲ್ಲ. ಬದಲಿಗೆ ಬಾಯಿಯಲ್ಲಿನ ಎಲ್ಲ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ನಿವಾರಿಸಲು ನೆರವಾಗುತ್ತದೆ.

3. ಹಲ್ಲನ್ನು ಕೀಳಿಸಿದರೆ ಕಣ್ಣಿಗೆ ತೊಂದರೆ:

ಇದಂತೂ ಶುದ್ಧ ಸುಳ್ಳು. ನಮ್ಮ ಕಣ್ಣುಗಳು ಹಲ್ಲುಗಳೊಂದಿಗೆ ಯಾವುದೇ ಸಂಪರ್ಕವನ್ನು ಹೊಂದಿಲ್ಲ. ಆಪ್ಟಿಕ್ ನರಗಳು ನಮ್ಮ ದೃಷ್ಟಿಯ ಹೊಣೆ ಹೊತ್ತಿರುತ್ತವೆ ಮತ್ತು ಇವು ಮೇಲ್ದವಡೆಯೊಂದಿಗೆ ಸಂಪರ್ಕ ಹೊಂದಿಲ್ಲ. ಹಲ್ಲುಗಳನ್ನು ಕೀಳಿಸುವುದರಿಂದ ದೃಷ್ಟಿಯ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ.

Also read: ಚಿಕ್ಕ ಮಕ್ಕಳಿಗೆ ಹಲ್ಲು ಹುಳುಕಾಗಿ ನರಕಯಾತನೆ ಪಡುವುದನ್ನ ತಪ್ಪಿಸಬೇಕೆಂದರೆ ಇದನ್ನು ತಪ್ಪದೇ ಓದಿ!!

4. ಗಟ್ಟಿಯಾಗಿ ಉಜ್ಜಿದರೆ ಹಲ್ಲುಗಳು ಹೆಚ್ಚು ಸ್ವಚ್ಛ:

ಹಲ್ಲುಗಳನ್ನು ರಭಸದಿಂದ ಬ್ರಷ್ ಮಾಡುವುದು ಅವುಗಳ ಸವೆತಕ್ಕೆ ಕಾರಣವಾಗುತ್ತದೆ,ಹೀಗಾಗಿ ಸಾಮಾನ್ಯ ವೇಗದಲ್ಲಿಯೇ ಹಲ್ಲುಜ್ಜಿಕೊಳ್ಳುವಂತೆ ವೈದ್ಯರು ಸೂಚಿಸುತ್ತಾರೆ. ಹಲ್ಲುಗಳನ್ನು ಗಟ್ಟಿಯಾಗಿ ಉಜ್ಜಿಕೊಳ್ಳುವುದರಿಂದ ಅವು ತಕ್ಷಣ ಬಿಳಿಯಾಗುತ್ತವೆ ಎಂದು ಹೆಚ್ಚಿನವರು ಭಾವಿಸುತ್ತಾರೆ,ಆದರೆ ಇದು ನಿಜವಲ್ಲ. ಬಲ ಪ್ರಯೋಗಕ್ಕಿಂತ ಸೂಕ್ತ ಹಲ್ಲುಜ್ಜುವ ಪದ್ಧತಿಯನ್ನು ಅನುಸರಿಸಬೇಕು.

5. ಶಿಶುಗಳಲ್ಲಿ ಬಾಯಿಯ ಆರೋಗ್ಯದ ಬಗ್ಗೆ ಕಾಳಜಿ ಬೇಡಾ?

ಸಾಮಾನ್ಯವಾಗಿ ಜನರು ತಿಳಿದ ರೀತಿ ಶಿಶುಗಳಿಗೆ ಇನ್ನೂ ಹಲ್ಲುಗಳು ಮೂಡಿರುವುದಿಲ್ಲ ಅದರಿಂದ ಅವುಗಳಿಗೆ ಬಾಯಿಯ ಆರೋಗ್ಯದ ಅಗತ್ಯವಿಲ್ಲ ಎಂದರ್ಥವಲ್ಲ. ಶಿಶುಗಳ ನಾಜೂಕಾದ ಬಾಯಿಯನ್ನು ಸ್ವಚ್ಛಗೊಳಿಸುವ ಕೆಲಸ ನಾಜೂಕಿನದ್ದಾಗಿದ್ದು,ಅವುಗಳ ಬಾಯಿಯ ಆರೋಗ್ಯ ಮುಖ್ಯವಾಗಿದೆ. ಕೆಲವೊಮ್ಮೆ ಶಿಶುಗಳು ಕುಡಿದ ಹಾಲಿನ ಅವಶೇಷಗಳು ಬಾಯಿಯಲ್ಲಿ ಉಳಿದುಕೊಳ್ಳುತ್ತವೆ ಮತ್ತು ಇವುಗಳಿಂದಾಗಿ ಬ್ಯಾಕ್ಟೀರಿಯಾಗಳು ಸೃಷ್ಟಿಯಾಗಿ ದಂತಕುಳಿಗಳಿಗೆ ಕಾರಣವಾಗುತ್ತವೆ

6. ಬ್ರೇಸ್‌ಗಳು ಹಲ್ಲಿಗೆ ಮಾರಕ:

ಹಲ್ಲುಗಳು ಅಡ್ಡಾದಿಡ್ಡಿಯಾಗಿದ್ದರೆ,ಉಬ್ಬುಗಳಿಂದ ಕೂಡಿದ್ದರೆ ಅವುಗಳನ್ನು ಸರಿಪಡಿಸಲು ಬ್ರೇಸ್ ಅಥವಾ ಕಟ್ಟುಪಟ್ಟಿಗಳನ್ನು ಬಳಸಲಾಗುತ್ತದೆ. ಇವು ಬಾಯಿಯ ಆರೋಗ್ಯಕ್ಕೆ ಸುರಕ್ಷಿತವಾದ ವಸ್ತುವಿನಂದ ಮಾಡಲ್ಪಟ್ಟಿರುವುದರಿಂದ ಹಲ್ಲುಗಳಿಗೆ ಯಾವುದೇ ಹಾನಿಯನ್ನು ಮಾಡುವುದಿಲ್ಲ. ಬ್ರೇಸ್ ಅಳವಡಿಕೆಯ ಇಡೀ ಪ್ರಕ್ರಿಯೆ ನೋವುರಹಿತವಾಗಿರುತ್ತದೆ.

Also read: ಹಲ್ಲು ನೋವು ಬಂದಾಗ ದಂತ ವೈದ್ಯರ ಬಳಿ ಹೋಗಿ ಸಾವಿರಾರು ರೂಪಾಯಿ ಖರ್ಚು ಮಾಡೋ ಬದಲು, ಈ tips-ಅನ್ನು ಪಾಲಿಸಿ ಹಲ್ಲುಗಳನ್ನು ಕಾಪಾಡಿಕೊಳ್ಳಿ!!

7. ಬುದ್ಧಿ ಹಲ್ಲನ್ನು ಕಿತ್ತರೆ ಮಿದುಳಿಗೆ ತೊಂದರೆ:

ಯಾವುದೇ ಬುದ್ಧಿ ಹಲ್ಲಿಗೂ ಮತ್ತು ಮನಸ್ಸು ಅಥವಾ ಮಿದುಳಿನ ಆರೋಗ್ಯಕ್ಕೂ ಯಾವುದೇ ಸಂಬಂಧವಿಲ್ಲ. ಹೆಚ್ಚಾಗಿ 18ರಿಂದ 26 ವರ್ಷ ವಯೋಗುಂಪಿನವರಲ್ಲಿ ಯಾವುದೇ ಸಮಯಕ್ಕೂ ಈ ದವಡೆಹಲ್ಲು ಅಥವಾ ಕಡೆಹಲ್ಲು ಹುಟ್ಟಿಕೊಳ್ಳುತ್ತದೆ. ವಾಸ್ತವದಲ್ಲಿ ಇದು ಬುದ್ಧಿಶಕ್ತಿಯೊಂದಿಗೆ ಗುರುತಿಸಿಕೊಂಡಿದೆ.