ದೀಪಾವಳಿ ಅಮವಾಸ್ಯೆ, ಲಕ್ಷ್ಮೀ, ಪಾಡ್ಯ ಪೂಜಾ ಮುಹೂರ್ತಗಳು

0
896

ದಿನಾಂಕ 25-10-2019 ನೇ ಶುಕ್ರವಾರ ದಿವಸ ಧನ ತ್ರಯೋದಶಿ ಇದೆ. ಈ ದಿನ ರಾತ್ರಿ ತ್ರಯೋದಶಿ ಇದೆ. ಈ ಹಬ್ಬ ರಾತ್ರಿ ಆಚರಿಸುವುದರಿಂದ ಶುಕ್ರವಾರ ಎಂದು ಪರಿಗಣಿಸಲಾಗಿದೆ.

ದಿನಾಂಕ 26-10-2019 ನೇ ಶನಿವಾರ ನೀರು ತುಂಬುವ ಹಬ್ಬ.

ದಿನಾಂಕ 27-10-2019 ರವಿವಾರ ನರಕ ಚತುರ್ದಶಿ ಮುಂಜಾನೆ ಪಾತ್ರ: ಕಾಲ ಅಭ್ಯಂಗ ಸ್ನಾನ ಮಾಡಲು ಉತ್ತಮ ಇರುತ್ತದೆ. ಇಂದು ಮಧ್ಯಾಹ್ನ 12-24 ರಿಂದ 2-00 ಗಂಟೆಯವರೆಗೆ ಅಮೃತ. 2-49 ರಿಂದ 3-39 ರ ವರೆಗೆ ಮಹೇಂದ್ರ (ಉತ್ತಮ). ರಾತ್ರಿ 8-25 ರಿಂದ 10-58 ಗಂಟೆಯವರೆಗೆ ಅಮೃತ.

ದಿನಾಂಕ 28-10-2019 ನೇ ಸೋಮವಾರ ದಿವಸ ದೀಪಾವಳಿ ಅಮವಾಸ್ಯೆ ಇದೆ. ರವಿವಾರ ಮಧ್ಯಾಹ್ನ 12-30 ರಿಂದ ಸೋಮವಾರ ಮುಂಜಾನೆ 9-00 ವರೆಗೆ ಮತ್ತು ಸೋಮವಾರ ಮುಂಜಾನೆ 6-17 ರಿಂದ 7-36 ರವರೆಗೆ ಅಮೃತ ಗಳಿಗೆ ಇರುವುದರಿಂದ ಅಮವಾಸ್ಯೆ ಲಕ್ಷ್ಮೀ ಪೂಜೆ ಮಾಡಲು ಉತ್ತಮ.

ದಿನಾಂಕ 29-10-2019 ನೇ ಮಂಗಳವಾರ ದಿವಸ ದೀಪಾವಳಿ ಪಾಡ್ಯ ಇದೆ. ಅಂದು ಬೆಳಗಿನ ಜಾವಾ 4-30 ರಿಂದ 6-15 ರವರೆಗೆ ಬ್ರಾಹ್ಮಿಮುಹೂರ್ತ ಇದೆ. ಪಾಡ್ಯ ಪೂಜೆ 28-10-2019 ಸೋಮವಾರ ಮುಂಜಾನೆ 9-15 ರಿಂದ ಮಂಗಳವಾರ ಬೆಳಗ್ಗೆ 6-15 ವರೆಗೆ.

ದೀಪಾವಳಿ ಪಾಡ್ಯದಿವಸ ದಿನಾಂಕ 29-10-2019 ಮಂಗಳವಾರ ದಿವಸ ಸಾಡೇತೀಸ್ ಮುಹೂರ್ತ ಇರುವುದರಿಂದ ರಾಹು ಕಾಲ ಗಣನೆಗೆ ತೆಗೆದುಕೊಳ್ಳಬಾರದು.