ಮೋದಿ ಈ ಬಾರಿ ಗೆದ್ದರೆ, ಬಿ.ಜೆ.ಪಿ. ಶಾಶ್ವತವಾಗಿ ಅಧಿಕಾರದಲ್ಲಿರುತ್ತೆ: ಕೇಜ್ರಿವಾಲ್; ಕೇಜ್ರಿವಾಲ್ ಗೆ ನಿಮ್ಮ ಬೆಂಬಲ ಇದ್ಯಾ?

0
214

ಚುನಾವಣೆ ಹತ್ತಿರವಾಗುತ್ತಿದ್ದಂತೆ ಮೋದಿ ಅವರ ವಿರುದ್ದ ವಿರೋಧ ಪಕ್ಷದವರ ಹಲವು ವ್ಯಂಗ್ಯದ ಮಾತುಗಳು ಕೇಳಿಬರುತ್ತಿವೆ ಇವುಗಳ ನಡೆವೇವೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಒಂದು ಹೇಳಿಕೆ ನೀಡಿದ್ದು ಈ ಬಾರಿಯ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಲಿಸದೇ ಇದ್ದರೆ ಶಾಶ್ವತವಾಗಿ ದೇಶಕ್ಕೆ ನರೇಂದ್ರ ಮೋದಿಯವರೇ ಪ್ರಧಾನಿಯಾಗೊತ್ತಾರೆ. 2019ರ ಬಳಿಕ ದೇಶದಲ್ಲಿ ಚುನಾವಣೆ ನಡೆಯುವುದಿಲ್ಲ, ಎಂದು ಕ್ರೆಜಿವಾಲ್ ಹೇಳಿದ್ದಾರೆ.

Also read: ಪುಲ್ವಾಮ ದಾಳಿ ಮಾಡಿಸಿದ್ದು ಬಿ.ಜೆ.ಪಿ. ಸರ್ಕಾರ ಮಾಡಿದ ನಾಟಕ ಎಂದು ಹೇಳಿ ಸೇನೆಗೆ ಅವಮಾನ ಮಾಡಿದ ಕಾಂಗ್ರೆಸ್ ನಾಯಕ ಪರಮೇಶ್ವರ್ ನಾಯಕ್

ಹೌದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ ಒಂದು ವೇಳೆ ಮೋದಿ ಪ್ರಧಾನಿಯಾದರೆ 2019ರ ಬಳಿಕ ದೇಶದಲ್ಲಿ ಚುನಾವಣೆ ನಡೆಯುವುದಿಲ್ಲ. ಮೋದಿ ಸರ್ಕಾರ ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಅನುಸರಿಸಿದ್ದ ತಂತ್ರವನ್ನು ಬಳಸಿಕೊಳ್ಳುತ್ತಿದೆ ಇದರಿಂದ ದೇಶದಲ್ಲಿ ಪ್ರಜಾಪ್ರಭುತ್ವ ಅಳಿವಿನಂಚಿಗೆ ತಲುಪುತ್ತಿದೆ. ನರೇಂದ್ರ ಮೋದಿ ಪ್ರಧಾನಿಯಾದರೆ ದೇಶದಲ್ಲಿ ಇನ್ನು ಮುಂದೆ ಚುನಾವಣೆಗಳೇ ಇರುವುದಿಲ್ಲ. ಈ ಮೂಲಕ ದೇಶದಲ್ಲಿ ಸರ್ವಾಧಿಕಾರಿ ಸರ್ಕಾರ ನೆಲೆಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ದೇಶದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಜರ್ಮನ್ ಸರ್ವಾಧಿಕಾರಿ ಅಡಾಲ್ಫ ಹಿಟ್ಲರ್‌ ಅನುಸರಿಸಿದ್ದ ತಂತ್ರಗಳನ್ನೇ ಅನುಸರಿಸುವ ಮೂಲಕ ಮೋದಿ ಸರಕಾರ ದೇಶದ ಆಡಳತ ನಡೆಸುತ್ತಿದೆ. ಇಂತಹ ನಿರಂಕುಶವಾದಿ ಕೇಸರಿ ಪಕ್ಷದ ಆಡಳಿತಕ್ಕೆ ಕೊನೆ ಹಾಡಬೇಕು. ಒಂದು ವೇಳೆ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರದಂತೆ ಮೋದಿ ಸರಕಾರವನ್ನು ತಡೆಯುವುದೇ ಪ್ರತಿಯೊಬ್ಬ ದೇಶಭಕ್ತನ ಗುರಿಯಾಗಬೇಕು. ಒಂದು ವೇಳೆ ಮತ್ತೆ ಅವರು ಅಧಿಕಾರಕ್ಕೇರಿದರೆ ಶಾಶ್ವತವಾಗಿ ಅವರೇ ಪ್ರಧಾನಿಯಾಗಿರುತ್ತಾರೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

Also read: ಕೇರಳದಿಂದ ರಾಹುಲ್ ಗಾಂಧಿ ಸ್ಪರ್ಧೆ!! ಉತ್ತರ ಪ್ರದೇಶದಲ್ಲಿ ಸೋಲಿನ ಭೀತಿಯಿಂದ ಈ ರೀತಿ ಮಾಡಿರಬಹುದಾ??

ವಿರುದ್ಧ ಮಾತನಾಡುವವರಿಗೆ ದೇಶದ್ರೋಹಿ ಪಟ್ಟ?

ಈಗಾಗಲೇ ಮೋದಿ ಸರ್ಕಾರ ಹಲವು ಹಿಂಸೆಯುಕ್ತ ನಡೆಯನ್ನು ಪಾಲಿಸುತ್ತಿದೆ. ಗುರುಗ್ರಾಮದಲ್ಲಿ ಮುಸ್ಲಿಂ ಕುಟುಂಬದ ಮೇಲೆ ನಡೆದ ಹಲ್ಲೆಯನ್ನು ಪ್ರಸ್ತಾಪಿಸಿದ ಕೇಜ್ರಿವಾಲ್, ಅಲ್ಪಸಂಖ್ಯಾತ ಸಮುದಾಯದವರ ಮೇಲಿನ ದೌರ್ಜನ್ಯ ಹೆಚ್ಚಿದ್ದು, ಯಾವುದೇ ತಪ್ಪೇ ಮಾಡದ ಅವರ ಮೇಲೆ ಹಲ್ಲೆ ನಡೆಸಲಾಗುತ್ತದೆ, ಹತ್ಯೆ ಮಾಡಲಾಗುತ್ತದೆ. ಯಾರದರೂ ಮೋದಿ ಸರಕಾರವನ್ನು ಪ್ರಶ್ನಿಸಿದರೆ ಅವರಿಗೆ ಇಂದು ಯಾರಾದರೂ ಮೋದಿ ಸರ್ಕಾರವನ್ನು ಪ್ರಶ್ನೆ ಮಾಡಿದರೆ ಅವರಿಗೆ ರಾಷ್ಟ್ರ ವಿರೋಧಿಗಳು ಎನ್ನುವ ಹಣೆಪಟ್ಟೆಯನ್ನು ನೀಡಲಾಗುತ್ತದೆ.

Also read: ಹಿಂದಿನಿಂದ ಬಂದು ಚೂರಿ ಹಾಕುವುದು ಯುದ್ದವಲ್ಲ ಮುಂದೆ ಬಂದು ಚುನಾವಣೆ ಎದುರಿಸಲಿ; ಮಂಡ್ಯದ ಪಕ್ಷೇತರ ಅಭ್ಯರ್ಥಿಯಾದ ಸುಮಲತಾ ಹೇಳಿಕೆ..

ಹಿಟ್ಲರ್ ನ ಗೂಂಡಾ ವ್ಯಕ್ತಿಗಳು ಮುಗ್ಧ ವ್ಯಕ್ತಿಗಳನ್ನು ಹೊಡೆದು ಕೊಲ್ಲುತ್ತಿದ್ದರು. ನಂತರ ಪೊಲೀಸರು ಸಂತಸ್ತರ ಮೇಲೆ ಕೇಸ್ ಹಾಕುತ್ತಿದ್ದರು. ಮೋದಿಯವರು ಸಹ ಅದನ್ನೇ ಇಲ್ಲಿ ಮಾಡುತ್ತಿದ್ದಾರೆ. ಅಧಿಕಾರಕ್ಕೆ ಹಿಟ್ಲರ್ ತಂತ್ರವನ್ನು ಅನುಸರಿಸುತ್ತಿದ್ದಾರೆ. ಮೋದಿಯ ಅಭಿಮಾನಿಗಳಿಗೆ ಭಾರತ ಯಾವ ದಿಕ್ಕಿನಲ್ಲಿ ಹೋಗುತ್ತಿದೆ ಎನ್ನುವುದು ಗೊತ್ತಿಲ್ಲ, ಆದಕಾರಣ ಮತ್ತೆ ಅಧಿಕಾರಕ್ಕೆ ಬರದಂತೆ ಮೋದಿ ಸರಕಾರವನ್ನು ತಡೆಯುವುದೇ ಪ್ರತಿಯೊಬ್ಬ ದೇಶಭಕ್ತನ ಗುರಿಯಾಗಬೇಕು. ಒಂದು ವೇಳೆ ಮತ್ತೆ ಅವರು ಅಧಿಕಾರಕ್ಕೇರಿದರೆ ಶಾಶ್ವತವಾಗಿ ಅವರೇ ಪ್ರಧಾನಿಯಾಗಿರುತ್ತಾರೆ ಎಂದು ಕೇಜ್ರಿವಾಲ್ ಆರೋಪಿಸಿದರು.