ಕೆಲವೊಂದು ಪೋಲಿಯೊ ಲಸಿಕೆಗಳಲ್ಲಿ ದೋಷವಿರುವ ಕಾರಣ, ಸ್ವಲ್ಪ ದಿನಗಳ ಮಟ್ಟಿಗೆ ಪೋಲಿಯೊ ಲಸಿಕೆಗಳು ಹಾಕಿಸದಿರುವುದೇ ಒಳಿತು!!

0
699

ಎಚ್ಚರ ಎಚ್ಚರ.. ಎಚ್ಚರ.. ಇಲ್ಕೇಳಿ ಓದುಗರೇ, ಪಲ್ಸ್ ಪೋಲಿಯೋದಲ್ಲೇ ಇದೆ ವೈರಸ್..! ಮಾರಕ ಪೋಲಿಯೋ ರೋಗ ನಿವಾರಣಗಾಗಿ ಮಕ್ಕಳಿಗೆ ನೀಡೋ ಪೋಲಿಯೋ ಲಸಿಕೆಯಲ್ಲೇ ಟೈಪ್-2 ಪೋಲಿಯೋ ವೈರಾಣು ಪತ್ತೆಯಾಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಪೋಲಿಯೊ ನಿರೋಧಕ ಲಸಿಕೆ ತಯಾರಿಕಾ ಕಂಪನಿಯೊಂದರಲ್ಲಿ ಉತ್ಪಾದನೆಯಾದ ಕನಿಷ್ಠ 1.5 ಲಕ್ಷ ಬಾಟಲಿ ಲಸಿಕೆಗಳಲ್ಲಿ ಟೈಪ್-2 ಪೋಲಿಯೊ ವೈರಸ್ ಪತ್ತೆಯಾಗಿದ್ದು, ದೇಶಾದ್ಯಂತ ಭಾರಿ ಸುದ್ದಿಗೆ ಗ್ರಾಸವಾಗಿದೆ. ಜನರಲ್ಲಿ ಇದೀಗ ಹೊಸ ಆತಂಕ ಶುರುವಾಗಿದೆ.

Also read: ಬಾವಲಿ ಗಳಿಂದ ಮನುಷ್ಯನಿಗೆ ಅನೇಕ ಲಾಭಗಳಿವೆ, ಬಾವಲಿಗಳಿಂದ ವೈರಸ್ ಹರಡುತ್ತಿದೆ ಅಂತ ಸುಳ್ಳು ಸುದ್ದಿ ಹಬ್ಬಿಸಿವೆಯಾ ಫಾರ್ಮಾ ಕಂಪನಿಗಳು?

ಮಹಾರಾಷ್ಟ್ರ, ಉತ್ತರಪ್ರದೇಶ ತೆಲಂಗಾಣ ರಾಜ್ಯಗಳ ಕೆಲ ಪ್ರದೇಶಗಳಲ್ಲಿ ಮಕ್ಕಳಿಗೆ ನೀಡಿದ ಪೋಲಿಯೋ ಲಸಿಕೆಗಳಿಗೆ ವೈರಸ್ ತಗಲಿದೆಯೆಂದು ಸ್ಪಷ್ಟಪಡಿಸಲಾಗಿದೆ. ಕೆಲ ಔಷಧಿ ಬಾಟಲಿಗಳಲ್ಲಿ ಟೈಪ್-2 ಪೋಲಿಯೋ ವೈರಸ್ ಉಂಟಾಗಿದೆಯೆಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಉತ್ತರ ಪ್ರದೇಶದ ಗಾಝಿಯಾಬಾದ್ ಬಯೋಮೆಡ್ ಔಷದಿ ಕಂಪೆನಿಯಾದ ವ್ಯಾಕ್ಸಿನ್ ನಿರ್ಮಿಸಿದೆ. ಮೂರು ರಾಜ್ಯಗಳ ಆರೋಗ್ಯ ಸಚಿವಾಲಯ ಎಚ್ಚರಿಕೆಯ ವಹಿಸುವಂತೆ ಆದೇಶಿಸಿದೆ. ಪೋಲಿಯೋ ಲಸಿಕೆ ನೀಡಿದ ಮಕ್ಕಳಲ್ಲಿ ಏನಾದರೂ ರೋಗ ಲಕ್ಷಣ ಕಂಡು ಬಂದಿದೆಯೋ ಎಂದು ವಿಶೇಷ ತಜ್ಞರ ಸಮಿತಿ ಪರಿಶೀಲಿಸಲಿದೆ. ಆದರೆ ಈ ಕುರಿತು ಕಳವಳ ಪಡಬೇಕಾಗಿಲ್ಲ ಎಂದೂ ಸಚಿವಾಲಯ ತಿಳಿಸಿದೆ.

Also read: ವಿಮಾನ ಪ್ರಯಾಣದಲ್ಲೂ ಫೇಸ್ ರೆಕಾಗ್ನಿಶನ್ ವ್ಯವಸ್ಥೆ, ಈ ಕೀರ್ತಿ ಪಡೆದ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ!!

50 ಸಾವಿರ ಬಾಟಲಿಗಳಲ್ಲಿ ಈ ವೈರಸ್ ತಗಲಿರುವುದು ಕಂಡು ಬಂದಿದೆಯಾದರೂ ಸುಮಾರು ಒಂದು ಲಕ್ಷದಷ್ಟು ಬಾಟಲಿಗಳಿಗೆ ತಗಲಿರುವ ಸಾಧ್ಯತೆಯಿದೆ. ಈಗಾಗಲೇ ಇದಕ್ಕೆ ಸಂಬಂಧಿಸಿ ಬಯೋಮೆಡ್ ನಿರ್ದೇಶಕರನ್ನು ಬಂಧಿಸಲಾಗಿದೆ.

2016ರ ಏಪ್ರಿಲ್‌ನಲ್ಲಿ ಭಾರತ ಸೇರಿದಂತೆ ವಿಶ್ವಾದ್ಯಂತ ಟೈಪ್-2 ವೈರಸ್ ನಿರ್ಮೂಲನೆ ಮಾಡಲಾಗಿತ್ತು. ಆ ಮೂಲಕ ಭಾರತ ಪೋಲಿಯೋ ಮುಕ್ತ ದೇಶ ಎಂಬ ಹಣೆಪಟ್ಟಿಗೆ ಒಳಗಾಗಿತ್ತು. ಆದರೆ ಇದೀಗ ಭಾರತದ ಈ ಪೋಲಿಯೋ ಮುಕ್ತ ಭಾರತ ಎಂಬ ಹೆಮ್ಮೆಗೆ ಕುತ್ತು ಬಂದಿದ್ದು, ಭಾರತಕ್ಕೆ ಮತ್ತೆ ಪೋಲಿಯೋ ಭೀತಿ ಎದುರಾಗಿದೆ.
2016ರ ಏಪ್ರಿಲ್‌ನಲ್ಲಿ ಭಾರತ ಸೇರಿದಂತೆ ವಿಶ್ವಾದ್ಯಂತ ಟೈಪ್-2 ವೈರಸ್ ನಿರ್ಮೂಲನೆ ಮಾಡಲಾಗಿತ್ತು. ಆದ್ದರಿಂದ ಆ ಬಳಿಕ ಹುಟ್ಟಿದ ಮಕ್ಕಳಲ್ಲಿ ಈ ನಿರ್ದಿಷ್ಟ ವೈರಸ್ ಪ್ರತಿರೋಧ ಶಕ್ತಿ ಇಲ್ಲದಿರುವುದರಿಂದ ಭಾರತದಲ್ಲಿ ಪೋಲಿಯೊ ಪೀಡೆ ಮತ್ತೆ ತಲೆದೋರುವ ಭೀತಿ ಎದುರಾಗಿದೆ.

Also read: 19ರ ಯುವತಿ ಮೇಲೆ 25ರ ಮಹಿಳೆಯಿಂದ  ರೇಪ್, ದೂರು ನೀಡಿದರು ದಾಖಲಾಗದ ಪೊಲೀಸ್ ಕೇಸ್…

ಉತ್ತರ ಪ್ರದೇಶದ ಘಾಜಿಯಾಬಾದ್ ನ ಬಯೊಮೆಡ್ ಘಟಕದಲ್ಲಿ ಉತ್ಪಾದನೆಯಾದ ಲಸಿಕೆಗಳಲ್ಲಿ ಟೈಪ್-2 ಪೋಲಿಯೋ ವೈರಸ್ ಪತ್ತೆಯಾದ ಬೆನ್ನಲ್ಲೇ ಆರೋಗ್ಯ ಸಚಿವಾಲಯ ಮತ್ತು ವಿಶ್ವ ಆರೋಗ್ಯ ಸಂಸ್ಥೆ, ಈ ಲಸಿಕೆ ವಿತರಣೆಯಾದ ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ತೆಲಂಗಾಣದಲ್ಲಿ ಸಮರೋಪಾದಿಯಲ್ಲಿ ಸಮೀಕ್ಷಾ ಕಾರ್ಯ ಆರಂಭಿಸಿವೆ. ಉತ್ಪಾದನೆ ಹಾಗೂ ಪೂರೈಕೆ ಸರಣಿಯಿಂದ ನಿರ್ಮೂಲನೆ ಮಾಡಲಾದ ಟೈಪ್-2 ವೈರಸ್ ಮತ್ತೆ ಹೇಗೆ ಕಾಣಿಸಿಕೊಂಡಿದೆ ಎಂಬ ಬಗ್ಗೆ ತನಿಖೆ ನಡೆಸಲು ಮೂವರು ತಜ್ಞರ ಸಮಿತಿ ರಚಿಸಲಾಗಿದ್ದು, ಒಂದು ವಾರದಲ್ಲಿ ಈ ಬಗ್ಗೆ ವರದಿ ನೀಡುವಂತೆ ಸೂಚಿಸಲಾಗಿದೆ. ಲಸಿಕೆ ಉತ್ಪಾದನೆಯನ್ನು ತಕ್ಷಣ ಸ್ಥಗಿತಗೊಳಿಸುವಂತೆ ಆದೇಶಿಸಲಾಗಿದೆ.