ಮಾನವ ಬೆಳವಣಿಗೆ ಹೆಸರಿನಲ್ಲಿ ಕಾಡನ್ನು ನಾಶ ಮಾಡುತ್ತಾ ತಾನೇ ಹೊತ್ತು ಉರಿಯುತ್ತಿದ್ದಾನೆ!!

0
783

ಅರಣ್ಯ ನಾಶ
ನಿಸರ್ಗದ ಅತ್ಯಮೂಲ್ಯವಾದ ಕೊಡುಗೆ ಅರಣ್ಯ. ಮಾನವನ ಅಳಿವು-ಉಳಿವು ಇದರ ಮೇಲೆ ಅವಲಂಬಿತವಾಗಿದೆ. ಅರಣ್ಯ ನಾಶದಿಂದಾಗಿ ಮಾನವ ಕುಲಕ್ಕೆ ವಿಪತ್ತು ಬರುವುದರಲ್ಲಿ ಯಾವ ಸಂದೇಹವೂ ಇಲ್ಲ. ಮಾನವನ ಅವ್ಯಾಹಿತ ಹಸ್ತಕ್ಷೇಪದಿಂದಾಗಿ ಪ್ರಪಂಚದಾದ್ಯಂತ ವಾರಕ್ಕೆ 2,50,000 ಹೆಕ್ಟೇರ್‍ನಷ್ಟು ಅರಣ್ಯ ನಾಶವಾಗುತ್ತಿದೆ. ಪ್ರತಿ ವರ್ಷವೂ 5,000 ಜಾತಿ ಸಸ್ಯಗಳು ಹಾಗೂ ಪಕ್ಷಿಗಳು ಕಣ್ಮರೆಯಾಗುತ್ತಿವೆ. ತಂಬಾಕು ಬೆಳೆಗಾರರು ಪ್ರತಿ ವರ್ಷ 2,00,000 ಹೆಕ್ಟೇರ್ ಅರಣ್ಯ ಕಡಿಯುತ್ತಿದ್ದಾರೆ. ಅಮೆಜಾನ್ ಅರಣ್ಯವು ಪ್ರಪಂಚದಲ್ಲೇ ಅತಿ ದೊಡ್ಡದು. ಇದರ ವಿಸ್ತೀರ್ಣವು 7 ದಶಲಕ್ಷ ಚದರ ಕಿ.ಮೀ. ಗೂ ಮೀರಿದ್ದು. ಒಟ್ಟು 8 ದೇಶಗಳಲ್ಲಿ ಹರಡಿದೆ. ಪ್ರಪಂಚದಲ್ಲಿರುವ ಅರ್ಧ ಪಕ್ಷಿ ಜಾತಿ ಈ ಅರಣ್ಯದಲ್ಲಿವೆ. ಈ ಅರಣ್ಯವು ಪ್ರಪಂಚದ 40 ಭಾಗ ಆಮ್ಲಜನಕವನ್ನು ಉತ್ಪಾದಿಸುತ್ತದೆ. ಈ ಅರಣ್ಯದಲ್ಲಿ ಪ್ರತಿದಿನ 500 ಎಕರೆಯಷ್ಟು ಮರಗಳನ್ನು ಕಡಿಯಲಾಗುತ್ತಿದೆ. ಭಾರತ ದೇಶದಲ್ಲಿರಬೇಕಾದ ಅರಣ್ಯವು ಶೇ. 33 ಭಾಗ. ಆದರೆ ಉಪಗ್ರಹಗಳಿಂದ ಪಡೆದ ಮಾಹಿತಿ ಪ್ರಕಾರ ಇದು ಶೇ. 10 ಭಾಗ ಎಂದು ತಿಳಿದುಬಂದಿದೆ. 20ನೇ ಶತಮಾನದ ಮೊದಲ ಭಾಗದಲ್ಲಿ ಇದ್ದ 3 ಕೋಟಿ ವಿವಿಧ ಜೀವಿಗಳ ಸಂಖ್ಯೆ 1990ರ ಹೊತ್ತಿಗೆ 1.5 ಕೋಟಿಗೆ ಇಳಿದಿದೆ. ಕಾಡು ಪ್ರಾಣಿಗಳ ಸಂಖ್ಯೆ ಕಳೆದ 40 ವರ್ಷಗಳಲ್ಲಿ ಅರ್ಧದಷ್ಟು ಕಣ್ಮರೆಯಾಗಿದೆ ಎಂದು `ಲಿವಿಂಗ್ ಪ್ಲಾನೆಟ್’ 2014ರ ವರದಿಯಲ್ಲಿ ಪ್ರಕಟವಾಗಿದೆ.

ಗಿರಿಗಳಲ್ಲಿ ಪರಿಸ್ಥಿತಿ ವೈಪರೀತ್ಯವಾದರೆ ಸುತ್ತ ಮುತ್ತಲಿನ ನಾಡು ಅದರ ಪೂರ್ಣಪರಿಣಾಮ ಅನುಭವಿಸಬೇಕಾಗುತ್ತದೆ, ಅದಿರಲಿ ಈಗ ಆಗುತ್ತಿತುವ ಅರಣ್ಯನಾಶಕ್ಕೆ ಗಿಡಗಳನ್ನು ಎಲ್ಲಿ ನೆಡುತ್ತಾರೆ? ಆ ವಿಷಯದ ಪ್ರಸ್ತಾಪವೇ ಇಲ್ಲ! ಇದು ಪುಣ್ಯ ಕ್ಷೇತ್ರ, ಸರ್ಕಾರ ಭಕ್ತರು ಮೆಟ್ಟಿಲೇರಿ ಬರಲು ಪೆÇ್ರೀತ್ಸಾಹಿಸಬೇಕು. ಅಲ್ಲಲ್ಲಿ ಅರಣ್ಯನಿರ್ಮಾಣವಾಗಬೇಕೇ ಹೊರತು ನಾಶವಲ್ಲ. ಇದು ಖಂಡನಾರ್ಹ!

ಅರಣ್ಯ ನಾಶದಿಂದ ಮಳೆ ಕಡಿಮೆಯಾಗುತ್ತಿದೆ. ಮಳೆ ಕಡಿಮೆಯಾದಂತೆ ತಾಪಮಾನ ಹೆಚ್ಚಾಗುತ್ತಿದೆ. ಇದನ್ನು ಕಡಿಮೆ ಮಾಡಬೇಕಾದರೆ ಮೊದಲು ಮರಗಿಡ ಬೆಳೆಸಬೇಕು. ಮಾನವ ಸಂಪನ್ಮೂಲ ಬಹಳಷ್ಟು ನಷ್ಠವಾಗುವುದ್ದಲ್ಲದೆ, ಕಾಯಕ ವೃತ್ತಿ ಕಡಿಮೆಯಾಗುತ್ತದೆ, ಮಳೆಯ ನೀರು ಸಂರಕ್ಷಣೆ ಮಾಡುವುದರ ಮೂಲಕ ನೀರಿನ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಬಹುದಾಗಿದೆ, ಮಳೆಯ ಕೊಯ್ಲಿನ್ನು ಪ್ರತಿಯೊಬ್ಬರು ಮಾಡಿಸಿಕೊಳ್ಳಬೇಕಿದೆ, ಇದ್ದಲ್ಲದೆ ಜಲ ಮೂಲಗಳಿಗೆ ಯಾವುದೇ ರೀತಿಯಲ್ಲಿ ಧಕ್ಕೆ ಯಾಗದಂತೆ ಎಚ್ಚರವಹಿಸುವುದು ಸಹಾ ನಮ್ಮ ಕೆಲಸವಾಗಿದೆ.

ಅಂತರ್ಜಲ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು ನೀರನ್ನು ವ್ಯರ್ಥ ಮಾಡದೆ ಸಂರಕ್ಷಿಸದಿದ್ದರೆ ಮನುಕುಲದ ಉಳಿಗಾಲ ಅಸಾಧ್ಯವಾಗಿದೆ, ಜಗತ್ತಿನಲ್ಲಿ ದಿನದಿಂದ ದಿನಕ್ಕೆ ನೀರು ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ 1993ರಿಂದ ವಿಶ್ವಜಲ ದಿನವನ್ನು ಆಚರಿಸಲಾಗುತ್ತಿದೆ. ನೀರು ಕಡಿಮೆಯಾಗಲು ಪ್ರಮುಖ ಕಾರಣ ಅರಣ್ಯ ನಾಶ. ಅರಣ್ಯ ನಾಶದಿಂದ ಮಳೆ ಕಡಿಮೆಯಾಗುತ್ತಿದೆ. ಮಳೆ ಕಡಿಮೆಯಾದಂತೆ ತಾಪಮಾನ ಹೆಚ್ಚಾಗುತ್ತಿದೆ. ಇದನ್ನು ಕಡಿಮೆ ಮಾಡಬೇಕಾದರೆ ಮೊದಲು ಮರಗಿಡ ಬೆಳೆಸಬೇಕು.
ಅಭಿವೃದ್ಧಿ ಪ್ರಕೃತಿಯಲ್ಲಿ ವಿಕೋಪಕ್ಕೆ ನಾಂದಿಯಾದರೆ ಅದನ್ನ ಕೈಗೊಳ್ಳಲೆ ಕೂಡದು, ಇಂತಹ ಕನಿಷ್ಠ ಮಟ್ಟದ ಪೂರ್ವಭಾವೀ ಚಿಂತನೆಗಳಿಲ್ಲದೆ ಹೇಗೆ ತಾನೇ ಸದೃಢ ಅಭಿವೃದ್ಧಿ ಸಾಧ್ಯ? ಇಷ್ಟು ಆಲೋಚನೆ ಮತ್ತು ವಿವೇಕ ಸರ್ಕಾರಕ್ಕೆ ಇರಲೇ ಬೇಕು.