ರುಚಿಕರವಾದ ಬಾಳೆಹಣ್ಣಿನ ಕೋಫ್ತಾ ತಯಾರಿಸುವ ವಿಧಾನ..!!

0
661

ಪ್ರತಿಯೊಬ್ಬರಿಗೂ ಸೇವಿಸಬೇಕಾದ ಬಾಳೆಹಣ್ಣು ಆರೋಗ್ಯಕೆ ಹಲವಾರು ಪ್ರಯೋಜನವನ್ನು ಹೊಂದಿದೆ ಹಾಗೆಯೇ ವರ್ಷದ ಎಲ್ಲಾ ದಿನಗಳಲ್ಲಿ ಬೆಳೆಯಿವ ಬಾಳೆ ಜನರಿಗೆ ನೇರವಾರಿ ಸಿಗುತ್ತದೆ. ಮತ್ತು ಇಂತಹ ಬಾಳೆಹಣ್ಣು ತಿನ್ನಲು ಅಷ್ಟೇ ಅಲ್ಲ ಬೇರೆ ಬೇರೆ ತರಹದ ಖಾದ್ಯಗಳಾದ ಚಿಪ್ಸ್, ಬೋಂಡಾ, ಬಾಳೆಕಾಯಿ ಪಲ್ಯ ಹೀಗೆ ನೂರಾರು ತರಹದ ಆಹಾರ ಪದಾರ್ಥಗಳನ್ನು ತಯಾರಿಸುವುದು ಗೊತ್ತಿರುವುದೆ, ಇಂತಹ ಬಾಳೆಕಾಯಿಂದ ಹೊಸ ಖಾದ್ಯವನ್ನು ನಿಮಗಾಗಿ ಪರಿಚಯಿಸುತ್ತಿದ್ದೇವೆ, ಅದುವೆ ಬಾಳೆಕಾಯಿ ಕೋಫ್ತಾ. ಈ ಖಾದ್ಯವನ್ನು ಬರಿ ಮಾಂಸಾಹಾರದಿಂದ ತಯಾರಿಸಬಹುದಿತ್ತು ಆದರೆ ಹೊಸ ರುಚಿಯಲ್ಲಿ ಬಾಳೆಕಾಯಿಯಲ್ಲಿ ಕೋಫ್ತಾವನ್ನು ಹೇಗೆ ತಯಾರಿಸಬಹುದು ಎಂಬುದು ಇಲ್ಲಿದೆ ನೋಡಿ.

Also read: ಹಾಲಿನ ಜತೆಗೆ ಬಾಳೆಹಣ್ಣು ಸೇವಿಸಿದರೆ ಏನಾಗುತ್ತೆ…!

ಬೇಕಾಗುವ ಪದಾರ್ಥಗಳು:

 • ನಾಲ್ಕು ಬಾಳೆ ಕಾಯಿ ( ಬೇಯಿಸಿರಬೇಕು)
 • ಎರಡು ಆಲೂಗೆಡ್ಡೆ (ಬೇಯಿಸಿದ್ದು)
 • ಎರಡು ಈರುಳ್ಳಿ (ಪೇಸ್ಟ್ ಮಾಡಿರಬೇಕು)
 • ಎರಡು ಬೆಳ್ಳುಳ್ಳಿ ( ಪೇಸ್ಟ್ ಮಾಡಿದು)
 • ಶುಂಠಿ ( ಪೇಸ್ಟ್ ಮಾಡಿರಬೇಕು)
 • ಒಂದು ಕತ್ತರಿಸಿದ ಟೊಮೆಟೊ
 • ಎರಡು ಹಸಿ ಮೆಣಸಿನ ಕಾಯಿ

Also read: ಆರೋಗ್ಯಕ್ಕೆ ತುಂಬಾ ಒಳ್ಳೆಯದಾದ ಹಾಗೂ ರುಚಿಕರವಾದ ಬಾಳೇಕಾಯಿ ಪಲ್ಯ ಮಾಡೋ ವಿಧಾನ !!.!

 • ಒಂದು ಚಮಚ ಜೀರಿಗೆ
 • ಒಂದು ಪಲಾವ್ ಎಲೆ, ಸ್ವಲ್ಪ ಕರಿಬೇವ
 • ಎರಡು ಚಮಚ ಕೆಂಪು ಮೆಣಸಿನ ಪುಡಿ
 • ನಾಲ್ಕು ಚಮಚ ಅಡುಗೆ ಎಣ್ಣೆ
 • ಒಂದು ಚಮಚ ತುಪ್ಪ
 • ಎರಡು ಚಮಚ ಅಕ್ಕಿ ಹಿಟ್ಟು
 • ಸ್ವಲ್ಪ ಗಸೆಗಸೆ, ಗೋಡಂಬಿ, ರುಚಿಗೆ ತಕ್ಕ ಉಪ್ಪು

ತಯಾರಿಸುವ ವಿಧಾನ:

Also read: ಬಾಳೆಕಾಯಿ ಮಂಚುರಿ ಮಾಡುವ ವಿಧಾನ

 • ಶುಂಠಿ, ಬೆಳ್ಳುಳ್ಳಿ, ಗಸೆಗಸೆ, ಈರುಳ್ಳಿಯನ್ನು ಹಾಕಿ ಪೇಸ್ಟ್ ಮಾಡಬೇಕು.
 • ಸಾರು ಬಾಳೆ ಕಾಯಿ ಮತ್ತು ಆಲೂಗೆಡ್ಡೆಯನ್ನು ಬೇಯಿಸಬೇಕು. ನಂತರ ಅದರ ಸಿಪ್ಪೆ ಸುಲಿದು ಚೆನ್ನಾಗಿ ಹಿಸುಕಬೇಕು. ಹೀಗೆ ಹಿಸುಕುವಾಗ ಸ್ವಲ್ಪ ಉಪ್ಪು ಮತ್ತು ಅಕ್ಕಿ ಹಿಟ್ಟು ಸೇರಿಸಿ ಚೆನ್ನಾಗಿ ಕಲೆಸಬೇಕು.
 • ನಂತರ ಈ ಹಿಟ್ಟಿನಿಂದ ನಿಂಬೆ ಗಾತ್ರದಲ್ಲ್ಲಿ ಉಂಡೆ ಕಟ್ಟಬೇಕು.
 • ಈಗ ಬಾಣಲೆಯನ್ನು ಬಿಸಿ ಮಾಡಿ ಅದರಲ್ಲಿ ಎಣ್ಣೆ ಹಾಕಬೇಕು. ಎಣ್ಣೆ ಕುದಿ ಬರುವಾಗ ಉಂಡೆಯನ್ನು ಅದರಲ್ಲಿ ಹಾಕಿ ಕರಿದು ತೆಗೆಯಬೇಕು. ನಂತರ ತಯಾರಾದ ಕೋಫ್ತಾವನ್ನು ಸ್ವಲ್ಪ ಅಗಲವಾದ ಪಾತ್ರೆಯಲ್ಲಿ ಇಟ್ಟಿರಿ.
 • ಈಗ ಸಾರಿನ ಪಾತ್ರೆಯನ್ನು ಉರಿಯಲ್ಲಿಟ್ಟು ಸ್ವಲ್ಪ ತುಪ್ಪ ಹಾಕಿ ಅದಕ್ಕೆ ಪಲಾವ್ ಎಲೆ ಅಥವಾ ಕರಿಬೇವಿನ ಎಲೆ ಹಾಕಿ ಜೀರಿಗೆಯನ್ನು ಹಾಕಿ 3 ನಿಮಿಷ ಹುರಿದು, ಈರುಳ್ಳಿ, ಬೆಳ್ಳುಳ್ಳಿ, ಶುಂಠಿಯ ಪೇಸ್ಟ್ ಹಾಕಿ 3-4 ನಿಮಿಷ ಕಾಲ ಬಿಸಿ ಮಾಡಬೇಕು.
 • ನಂತರ ಕತ್ತರಿಸಿದ, ಹಸಿಮೆಣಸಿನಕಾಯಿ, ಕತ್ತರಿಸಿದ ಟೊಮೆಟೊವನ್ನು ಹಾಕಿ ರುಚಿಗೆ ತಕ್ಕ ಉಪ್ಪು ಹಾಕಿ ಟೊಮೆಟೊ ಮೆತ್ತಗಾಗುವವರೆಗೆ ಬಿಸಿ ಮಾಡಬೇಕು.
 • ಈಗ ಸ್ವಲ್ಪ ಸಕ್ಕರೆ ಮತ್ತು ನೆಲ ಕಡಲೆ ಅಥವಾ ಗೋಡಂಬಿ ಹಾಕಬೇಕು.
 • ಕೆಂಪುಮೆಣಸಿನ ಪುಡಿ, ಜೀರಿಗೆ ಪುಡಿ, ಸ್ವಲ್ಪ ಅರಿಶಿಣ ಪುಡಿ, ಕೊತ್ತಂಬರಿ ಪುಡಿ ಹಾಕಿ 2-3 ನಿಮಿಷ ಬಿಸಿ ಮಾಡಬೇಕು. ನಂತರ ಒಂದು ಬಟ್ಟಲು ನೀರು ಹಾಕಿ. ಮಿಶ್ರಣ ಕುದಿ ಬಂದು ಗಟ್ಟಿ ಗ್ರೇವಿ ರೀತಿಯಾಗುವಾಗ ಅದಕ್ಕೆ ತಯಾರಿಸಿಟ್ಟ ಕೋಫ್ತಾ ಹಾಕಿದರೆ ಬಾಳೆಹಣ್ಣಿನ ಕೋಫ್ತಾ ರೆಡಿ.
 • ಕೋಫ್ತಾ ಬಿಸಿ ಬಿಸಿ ಇರುವಾಗೆನೆ ಚಪಾತಿ, ದೋಸೆ, ಪೂರಿ, ರೊಟ್ಟಿ ಜೊತೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ.