ಹಲಸಿನ ಬೀಜದ ರುಚಿಯಾದ ಪಲ್ಯ ನೀವು ಮಾಡಿ..!

0
769

ಹಲಸಿನ ಕಾಯಿಯಲ್ಲಿ ಉಪಯೋಗಕ್ಕೆ ಬರದ ಭಾಗವೇನಿದೆ ಎಲ್ಲವೂ ಒಂದಕ್ಕೊಂದು ರುಚಿಕರ ಖಾದ್ಯ ಮಾಡಬಹುದಾದ ವಸ್ತುಗಳೇ. ಅದರ ಬೀಜದ ಪಲ್ಯವಂತೂ ವಿಶೇಷ ಘಮ ಕೊಡುತ್ತದೆ. ನೀವು ಇದನ್ನ ಮಾಡಬೇಕೆ ಹಾಗದರೆ ಇಲ್ಲಿದೆ ನೋಡಿ ಮಾಡುವ ವಿಧಾನ..

Image result for ಹಲಸಿನ ಬೀಜ

ಬೇಕಾಗುವ ಸಾಮಗ್ರಿಗಳು

ಹಲಸಿನ ಬೀಜ
ಮಂಗಳೂರು ಸೌತೆ
ಖಾರದ ಪುಡಿ
ಅರಸಿನ ಪುಡಿ
ಬೆಲ್ಲ
ಉಪ್ಪು
ಒಗ್ಗರಣೆ ಸಾಮಾನು

ಮಾಡುವ ವಿಧಾನ

ಹಲಸಿನ ಬೀಜವನ್ನು ಜಜ್ಜಿ ಸಿಪ್ಪೆ ತೆಗೆದುಕೊಳ್ಳಿ. ಮಂಗಳೂರು ಸೌತೆಯನ್ನು ತೆಳುವಾಗಿ ಕತ್ತರಿಸಿಕೊಳ್ಳಿ. ಇವೆರಡನ್ನೂ ಖಾರದಪುಡಿ, ಅರಸಿನ ಪುಡಿ, ಬೆಲ್ಲ ಸ್ವಲ್ಪ ಹಾಕಿ ಬೇಯಿಸಿಕೊಳ್ಳಿ. ಬೆಂದ ಮೇಲೆ ರುಚಿಗೆ ತಕ್ಕಷ್ಟು ಉಪ್ಪು, ಒಗ್ಗರಣೆ ಕೊಟ್ಟರೆ ಪಲ್ಯ ರೆಡಿ. ಮಂಗಳೂರು ಸೌತೆ ಹಲಸಿನ ಬೀಜಕ್ಕೆ ಒಳ್ಳೆ ಕಾಂಬಿನೇಷನ್. ಪಲ್ಯವನ್ನು ಸ್ವಲ್ಪ ನೀರು ನೀರಾಗಿ ಮಾಡಿಕೊಂಡರೆ ಚಪಾತಿಯಂತಹ ವ್ಯಂಜನದ ಜತೆಗೂ ಸೇವಿಸಬಹುದು.